ಅಂದು ನಾನು ಸ್ಪರ್ಧಿಸಿದ್ರೆ ಡಿಕೆಶಿ ಎಂಎಲ್‌ಎ ಆಗ್ತಿರಲಿಲ್ಲ: ಕುಮಾರಸ್ವಾಮಿ

1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸಿದಾಗ ಚುನಾವಣಾ ಉಸ್ತುವಾರಿಯನ್ನು ನಾನೇ ವಹಿಸಿದ್ದೆ. ನಂತರ, ಸಾತನೂರನ್ನು ದೇವೇಗೌಡರು ತೆರವುಗೊಳಿಸಿದರು. ಒಂದು ವೇಳೆ, 1985ರ ಉಪಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡಿದ್ರೆ, ನಾನೇ ಶಾಸಕ‌ ಆಗ್ತಿದ್ದೆ. ಅಷ್ಟೇ ಅಲ್ಲ, 1989ರಲ್ಲಿ ಡಿಕೆಶಿ ಶಾಸಕರಾಗಲು ಬಿಡುತ್ತಿರಲಿಲ್ಲ ಎಂದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

Union Minister HD Kumaraswamy React to DCM DK Shivakumar statement grg

ನವದೆಹಲಿ(ಜೂ.26): 1985ರ ಸಾತನೂರು ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರ ಚುನಾವಣಾ ಉಸ್ತುವಾರಿಯನ್ನು ನಾನೇ ವಹಿಸಿದ್ದೆ. ಬಳಿಕ, ನಡೆದ ಉಪಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡಿದ್ರೆ, ಅದಕ್ಕೆ ನನ್ನ ತಂದೆಯವರು ಒಪ್ಪಿಗೆ ಕೊಟ್ಟಿದ್ರೆ, ನಾನೇ ಶಾಸಕ‌ನಾಗುತ್ತಿದೆ. ಅಷ್ಟೇ ಅಲ್ಲ, 1989ರಲ್ಲಿ ಡಿಕೆಶಿ ಎಂಎಲ್ ಎ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ನೀಡಿದ್ದಾರೆ. 

ರಾಜಕಾರಣದಲ್ಲಿ ಕುಮಾರಸ್ವಾಮಿ ನನಗಿಂತ 10 ವರ್ಷ ಕಿರಿಯರು ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ‌ ಚನ್ನಪಟ್ಟಣ ನೋಡೋ‌ ಮೊದಲು ನಾನು‌ ನೋಡಿದ್ದೇನೆ: ಡಿಕೆಶಿ

ನಾನು ಕುಮಾರಸ್ವಾಮಿಗಿಂತ ಸೀನಿಯರ್ ಎಂದು ಡಿಕೆಶಿ ಹೇಳಿದ್ದಾರೆ. ಚನ್ನಪಟ್ಟಣಕ್ಕೂ, ನನಗೂ ಸಂಬಂಧ ಪ್ರಾರಂಭವಾಗಿದ್ದು ಈಗಲ್ಲ. 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸಿದಾಗ ಚುನಾವಣಾ ಉಸ್ತುವಾರಿಯನ್ನು ನಾನೇ ವಹಿಸಿದ್ದೆ. ನಂತರ, ಸಾತನೂರನ್ನು ದೇವೇಗೌಡರು ತೆರವುಗೊಳಿಸಿದರು. ಒಂದು ವೇಳೆ, 1985ರ ಉಪಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡಿದ್ರೆ, ನಾನೇ ಶಾಸಕ‌ ಆಗ್ತಿದ್ದೆ. ಅಷ್ಟೇ ಅಲ್ಲ, 1989ರಲ್ಲಿ ಡಿಕೆಶಿ ಶಾಸಕರಾಗಲು ಬಿಡುತ್ತಿರಲಿಲ್ಲ ಎಂದರು.

Latest Videos
Follow Us:
Download App:
  • android
  • ios