ಕುಮಾರಸ್ವಾಮಿ ಚನ್ನಪಟ್ಟಣ ನೋಡೋ ಮೊದಲು ನಾನು ನೋಡಿದ್ದೇನೆ: ಡಿಕೆಶಿ
ನಾನು ಚನ್ನಪಟ್ಟಣದಲ್ಲಿ ಏನೂ ಮಾಡಿಲ್ಲ ಎಂದು ಕುಮಾರಸ್ವಾಮಿಗೆ ಏನು ಗೊತ್ತು?. ಕುಮಾರಸ್ವಾಮಿ ಚನ್ನಪಟ್ಟಣ ನೋಡೋ ಮೊದಲು ನಾನು ನೋಡಿದ್ದೇನೆ. ಕುಮಾರಸ್ವಾಮಿ ಬಹಳ ಲೇಟಾಗಿ ರಾಜಕಾರಣಕ್ಕೆ ಬಂದವರು. 1985ಕ್ಕೆ ವಿಧಾನಸಭಾ ಚುನಾವಣೆಗೆ ನಿಂತವ ನಾನು, ಅವರು 1995ರ ನಂತರ ರಾಜಕಾರಣಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮಂಗಳೂರು(ಜೂ.25): ನಾವು ಹಿಂದೂ ಧರ್ಮದವರು, ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಗಳನ್ನು ತೆಗೆದುಕೊಂಡು ಹೋಗೋರು. ಧಾರ್ಮಿಕ ದತ್ತಿ ಇಲಾಖೆಯನ್ನು ಇಟ್ಟುಕೊಂಡಿದ್ದೇವೆ. ಅವರವರ ನಂಬಿಕೆ ಪ್ರಕಾರ ಅವರವರು ಪ್ರಾರ್ಥನೆ ಮಾಡ್ತಾರೆ. ಬಹಳ ದಿನಗಳಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಬೇಕೆಂಬ ಆಸೆ ಇತ್ತು, ಇವತ್ತು ಕುಟುಂಬ ಸಮೇತ ಹೋಗುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯುಮದರೊಂದಿಗೆ ಮಾತನಾಡಿದ ಡಿಕೆಶಿ, ನನ್ನ ತಮ್ಮನಿಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ, ಜನ ನಮಗೆ ರೆಸ್ಟ್ ಕೊಡೋಕೆ ಹೇಳಿದ್ದಾರೆ. ಪಾರ್ಟಿ ಕೆಲಸ ಮಾಡಬೇಕಂಬ ಆಸೆ ಇದೆ, ನಮಗೆ 85 ಸಾವಿರ ಜನ ಮತ ಕೊಟ್ಟಿದ್ದಾರೆ. ಎಂದಿಗೂ ಆ ನಂಬರ್ಸ್ ಜನರನ್ನ ಬಿಡೋಕಾಗಲ್ಲ, ದೇವರೇ ನಮಗೆ ಈಗ ಅಧಿಕಾರ ಕೊಟ್ಟಿದ್ದಾರೆ. 136 ಸೀಟ್ ಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳಬೇಕು. ಚನ್ನಪಟ್ಟಣ ಜನಕ್ಕೆ ಏನೂ ಆಗಿಲ್ಲ ಅನ್ನೋ ಭಾವನೆ ಇದೆ. ನಾವು ಒಂದಷ್ಟು ಅಳಿಲು ಸೇವೆ ಮಾಡಬೇಕೆಂದು ಇದ್ದೀವಿ. ನಾವು ಅಧಿಕಾರ ಇದ್ದಾಗ ಮಾಡಿದ್ದೀವಿ, ಇದೀಗ ರೈಟ್ ಟೈಮ್, ಏನೋ ಒಂದು ಸಹಾಯ ಮಾಡಬೇಕೆಂದು ಇದ್ದೀವಿ ಎಂದು ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ ಸ್ಪರ್ಧೆ ಮಾಡೊಲ್ಲ: ಜಿಟಿ ದೇವೇಗೌಡ ಅಚ್ಚರಿ ಹೇಳಿಕೆ!
ನಾನು ಚನ್ನಪಟ್ಟಣದಲ್ಲಿ ಏನೂ ಮಾಡಿಲ್ಲ ಎಂದು ಕುಮಾರಸ್ವಾಮಿಗೆ ಏನು ಗೊತ್ತು?. ಕುಮಾರಸ್ವಾಮಿ ಚನ್ನಪಟ್ಟಣ ನೋಡೋ ಮೊದಲು ನಾನು ನೋಡಿದ್ದೇನೆ. ಕುಮಾರಸ್ವಾಮಿ ಬಹಳ ಲೇಟಾಗಿ ರಾಜಕಾರಣಕ್ಕೆ ಬಂದವರು. 1985ಕ್ಕೆ ವಿಧಾನಸಭಾ ಚುನಾವಣೆಗೆ ನಿಂತವ ನಾನು, ಅವರು 1995ರ ನಂತರ ರಾಜಕಾರಣಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು ಎಂದಿದ್ದಾರೆ.
ಹೆಚ್ಚಿನ ಡಿಸಿಎಂ ಸ್ಥಾನದ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ನೀವು ದಿನಾಲು ನ್ಯೂಸ್ ಹಾಕ್ತಿದ್ದೀರಲ್ಲ, ಇದರಿಂದ ಖುಷಿಯಾಗೋರಿಗೆ ಆಗ್ಲಿ. ಯಾರು ಏನ್ ಬೇಕಿದ್ರೂ ಬೇಡಿಕೆ ಮಾಡ್ಲಿ, ಪಾರ್ಟಿ ಯಾರಿಗೆ ಏನು ಉತ್ತರ ಕೊಡಬೇಕೋ ಕೊಡ್ತದೆ ಎಂದು ಹೇಳಿದ್ದಾರೆ.
ನನ್ನ ರಾಜಕೀಯ ಅಂತ್ಯ ತೀರ್ಮಾನಿಸೋದು ಜನ: ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಡಿಕೆಶಿ ತಿರುಗೇಟು
ಕುಮಾರಸ್ವಾಮಿ ಬಳ್ಳಾರಿಯಲ್ಲಿ ಮೈನಿಂಗ್ ಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಕುಮಾರಸ್ವಾಮಿಗೆ ಎಷ್ಟು ನಾಲೇಜ್ ಇದ್ಯೋ ಇಲ್ವೋ ಗೊತ್ತಿಲ್ಲ, ನನಗಂತು ಏನೂ ಗೊತ್ತಿಲ್ಲ ಎಂದಿದ್ದಾರೆ.
ಕುಕ್ಕೆಯಲ್ಲಿ ವಿಶೇಷ ಸಲ್ಲಿಸಲಿರೋ ಡಿಕೆಶಿ
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿಕೆಶಿ ಇಂದು ವಿಶೇಷ ಸಲ್ಲಿಸಲಿಸಲಿದ್ದಾರೆ. ಬಳಿಕ ಸಂಜೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.