ಕಾಂಗ್ರೆಸ್‌ನವರಿಗೆ ಎಕ್ಕಾ ಸಿಗುತ್ತಿಲ್ಲ, ಎಕ್ಕಾ ಏನಿದ್ರು ಬಿಜೆಪಿ ಅಭ್ಯರ್ಥಿ: ಸಂಸದ ಭಗವಂತ ಖೂಬಾ ವ್ಯಂಗ್ಯ
ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡ್ತಾ ಇರುವಂಥ ಸರ್ಕಾರ ಅಂದ್ರೆ ಅದು ಮೋದಿ ಸರ್ಕಾರ. ಬಿಜೆಪಿಯು ದೇಶದ ಹಿತಕ್ಕಾಗಿ, ದೇಶದ ಒಳಿತಿಗಾಗಿ, ಸುರಕ್ಷತೆಗಾಗಿ ಕೆಲಸ ಮಾಡ್ತಾ ಇದೆ. ಆದರೆ ಸಿಎಎ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ಸರಿಯಲ್ಲ. ಕಾಂಗ್ರೆಸ್‌ನವರು ಬುದ್ದಿಹೀನರಾಗಿದ್ದಾರೆ, ರಾಜಕೀಯವಾಗಿ ದಿವಾಳಿಯಾಗಿದ್ದಾರೆ: ಹಾಲಿ ಸಂಸದ ಭಗವಂತ ಖೂಬಾ.
ಬೀದರ್(ಮಾ.15): ಗ್ಯಾರಾ ಬಿಟ್ಟು ನೋಡ್ತಾ ಇದ್ದಾರ, ಜೋಕರ್, ರಾಜಾ, ರಾಣಿ ಬಿಟ್ಟು ನೋಡ್ತಾ ಇದ್ದಾರ. ಕಾಂಗ್ರೆಸ್‌ನವರಿಗೆ ಎಕ್ಕಾ ಸಿಗುತ್ತಿಲ್ಲ, ಯಾರೂ ಎಕ್ಕಾ ಆಗೋಕೆ ಸಾಧ್ಯವೇ ಇಲ್ಲ. ಎಕ್ಕಾ ಏನಿದ್ರು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತ್ರ. ಹೀಗೆಯೇ ಹೇಳಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದು ಬಿಜೆಪಿಯ ಘೋಷಿತ ಅಭ್ಯರ್ಥಿ ಹಾಲಿ ಸಂಸದ ಭಗವಂತ ಖೂಬಾ.
ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಇಸ್ಪೀಟ್ ಎಲೆಗಳಿಗೆ ಕಾಂಗ್ರೆಸ್ ಅಭ್ಯರ್ಥಿಯ ಹುಡುಕಾಟವನ್ನು ಹೋಲಿಸಿ ಮಾತನಾಡಿದ ಅವರು, ಇಸ್ಪೀಟ್‌ನಲ್ಲಿ ಎಲ್ಲ ಕಾರ್ಡ್‌ಗಳಿಗಿಂತ ಎಕ್ಕಾನೇ ಹೆಚ್ಚು, ಹಾಗಾಗಿ ನಾನೇ ಹೆಚ್ಚು ಎಂದು ಕಾರ್ಡ್‌ಗಳಿಗೆ ಹೋಲಿಕೆ ಮಾಡಿಕೊಂಡ ಖೂಬಾ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟವನ್ನು ಗೇಲಿ ಮಾಡಿದರು.
ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯದ ಸರಮಾಲೆ: ಸಚಿವ ಈಶ್ವರ ಖಂಡ್ರೆ
ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡ್ತಾ ಇರುವಂಥ ಸರ್ಕಾರ ಅಂದ್ರೆ ಅದು ಮೋದಿ ಸರ್ಕಾರ. ಬಿಜೆಪಿಯು ದೇಶದ ಹಿತಕ್ಕಾಗಿ, ದೇಶದ ಒಳಿತಿಗಾಗಿ, ಸುರಕ್ಷತೆಗಾಗಿ ಕೆಲಸ ಮಾಡ್ತಾ ಇದೆ. ಆದರೆ ಸಿಎಎ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ಸರಿಯಲ್ಲ. ಕಾಂಗ್ರೆಸ್‌ನವರು ಬುದ್ದಿಹೀನರಾಗಿದ್ದಾರೆ, ರಾಜಕೀಯವಾಗಿ ದಿವಾಳಿಯಾಗಿದ್ದಾರೆ ಎಂದು ಆರೋಪಿಸಿದರು.
ಅಫಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಈ ಮೂರು ದೇಶದಲ್ಲಿ ಇರುವ ಹಿಂದುಗಳ ಪರಿಸ್ಥಿತಿ ಅವಲೋಕನ ಮಾಡಬೇಕು. ಅವರ ಬಗ್ಗೆ ಕಳಕಳಿ ಇದ್ರೆ, ಸಿಎಎ ಕಾನೂನಿನ ಮಹತ್ವ ಎಷ್ಟಿದೆ ಅನ್ನೋದು ಕಾಂಗ್ರೆಸ್‌ಗೆ ಗೊತ್ತಾಗುತ್ತೆ ಎಂದು ಕೇಂದ್ರ ಸಚಿವರಾದ ಬಿಜೆಪಿ ಘೋಷಿತ ಅಭ್ಯರ್ಥಿ ಭಗವಂತ ಖೂಬಾ ಸಲಹೆಯಿತ್ತರು.