ಯಾರ ಮೀಸಲು ತೆಗೆದು ಮುಸ್ಲಿಮರಿಗೆ ಕೊಡ್ತೀರಾ?: ಅಮಿತ್ ಶಾ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡುವುದಾಗಿ ಹೇಳುತ್ತಿದ್ದು, ಲಿಂಗಾಯತರ ಮೀಸಲಾತಿ ಕಡಿಮೆ ಮಾಡ್ತಾರಾ?, ಒಕ್ಕಲಿಗರ ಮೀಸಲಾತಿ ಕಡಿಮೆ ಮಾಡ್ತಾರಾ, ಯಾರ ಮೀಸಲಾತಿ ಕಡಿಮೆ ಮಾಡ್ತಾರೆ ಎಂದು ಪ್ರಶ್ನಿಸಿದರು. ಜತೆಗೆ ಇಂಥವರಿಗೆ ಮತ ಹಾಕಬೇಕಾ? ಎಂದ ಅಮಿತ್ ಶಾ.
ಗುಂಡ್ಲುಪೇಟೆ/ಆಲೂರು(ಏ.25): ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ 4 ಪರ್ಸೆಂಟ್ ಮೀಸಲಾತಿ ತೆಗದು ಹಾಕಿದ್ದೇವೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮೀಸಲು ವಾಪಸ್ ಕೊಡ್ತೀವಿ ಎಂದು ಹೇಳುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ, ಓಬಿಸಿ ಯಾರ ಮೀಸಲು ವಾಪಸ್ ತೆಗೆದು ಅವರಿಗೆ ಕೊಡುತ್ತೀರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು.
ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣ ಹಾಗೂ ಹಾಸನ ಜಿಲ್ಲೆಯ ಆಲೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡುವುದಾಗಿ ಹೇಳುತ್ತಿದ್ದು, ಲಿಂಗಾಯತರ ಮೀಸಲಾತಿ ಕಡಿಮೆ ಮಾಡ್ತಾರಾ?, ಒಕ್ಕಲಿಗರ ಮೀಸಲಾತಿ ಕಡಿಮೆ ಮಾಡ್ತಾರಾ, ಯಾರ ಮೀಸಲಾತಿ ಕಡಿಮೆ ಮಾಡ್ತಾರೆ ಎಂದು ಪ್ರಶ್ನಿಸಿದರು. ಜತೆಗೆ ಇಂಥವರಿಗೆ ಮತ ಹಾಕಬೇಕಾ? ಎಂದರು.
ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ರೋಡ್ ಶೋ: ಹಳೇ ಮೈಸೂರು ಭಾಗವೇ ಕೇಸರಿ ಪಡೆ ಟಾರ್ಗೆಟ್
ಕಾಂಗ್ರೆಸ್‌ನದು ತುಷ್ಟೀಕರಣ ರಾಜಕಾರಣ. ಮೋದಿ ಅವರದ್ದು ವಿಕಾಸ ರಾಜಕಾರಣ. ಕೇಂದ್ರ ಹಾಗೂ ರಾಜ್ಯದಲ್ಲಿ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅಭಿವೃದ್ಧಿಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭರ್ಜರಿ ರೋಡ್ ಶೋ
ಗುಂಡ್ಲುಪೇಟೆ ಮತ್ತು ಆಲೂರು ಪಟ್ಟಣದಲ್ಲಿ ಅಮಿತ್ ಶಾ ಅವರು ಭರ್ಜರಿ ರೋಡ್ ಶೋ ನಡೆಸಿದರು. ಗುಂಡ್ಲುಪೇಟೆಯಲ್ಲಿ ಪಟ್ಟಣದ ಮಡಹಳ್ಳಿ ವೃತ್ತದಿಂದ ಹಳೇ ಬಸ್ ನಿಲ್ದಾಣದ ತನಕ ಸಾವಿರಾರು ಕೇಸರಿ ಪಡೆಯೊಂದಿಗೆ ತೆರೆದ ವಾಹದದೊಂದಿಗೆ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್‌ಕುಮಾರ್ ಪರ ರೋಡ್ ಶೋ ನಡೆಸಿದರೆ, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಪರ ಆಲೂರು ಪಟ್ಟಣದ ಮುಖ್ಯರಸ್ತೆ ಕೆಇಬಿ ಸರ್ಕಲ್‌ನಿಂದ ಕೊನೇಪೇಟೆ ವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದರು.
ಶಾಸಕ ಪ್ರೀತರಂರೊಂದಿಗೆ ಇಡೀ ದೇಶದ ಬಿಜೆಪಿ ಇದೆ: ಅಮಿತ್ ಶಾ
ಆಲೂರು: ಕುಟುಂಬ ರಾಜಕಾರಣದ ಮುಂದೆ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿರುವ ಶಾಸಕ ಪ್ರೀತಂ ಗೌಡರನ್ನು ಜಿಲ್ಲೆಯಿಂದಲೇ ಓಡಿಸುವುದಾಗಿ ಜೆಡಿಎಸ್ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಹಾಸನ ಶಾಸಕರೊಂದಿಗೆ ನಾನಷ್ಟೇ ಅಲ್ಲ, ಇಡೀ ದೇಶದ ಬಿಜೆಪಿ ಪಕ್ಷವೇ ಇದೆ. ಬಿಜೆಪಿ ನಾಯಕರು ಹಾಗು ಪ್ರತಿಯೊಬ್ಬ ಕಾರ್ಯಕರ್ತರು ಅವರ ಜತೆಗಿದ್ದಾರೆ ಎಂಬುದನ್ನು ಮನಗಾಣಬೇಕು. ಬಿಜೆಪಿ ಅಭ್ಯರ್ಥಿಯನ್ನು ಓಡಿಸುವುದು ಅಷ್ಟು ಸುಲಭವಲ್ಲ ಎಂದು ಅಮಿತ್ ಶಾ ಎಚ್ಚರಿಸಿದರು.