ಯುಪಿಎ ಮತ್ತು ಕಾಂಗ್ರೆಸ್ 12 ಲಕ್ಷ ಕೋಟಿ ರು. ಭ್ರಷ್ಟಾಚಾರದಲ್ಲಿ ತೊಡಗಿರುವ ನಾಯಕರ ಗುಂಪು. ಈಗ ಅವರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಹೊಸ ಬಾಟಲಿಯಲ್ಲಿ ಹಳೆ ವೈನ್ ಎಂಬ ಮಾತು ಕೇಳಿಲ್ಲವೇ? ಆದರೆ ಇಲ್ಲಿ ಬಾಟಲಿ ಮತ್ತು ವೈನ್. ಎರಡೂ ಹಳೆಯದಾಗಿದೆ ಎಂದು ಚಾಟಿ ಬೀಸಿದ ಅಮಿತ್ ಶಾ
ಗಾಂಧಿನಗರ(ಆ.14): ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಇಂಡಿಯಾ’ ಮೈತ್ರಿಕೂಟವನ್ನು ಹಳೆಯ ಮದ್ಯ ಹಾಗೂ ಹಳೆಯ ಬಾಟಲಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.
ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಯುಪಿಎ ಮತ್ತು ಕಾಂಗ್ರೆಸ್ 12 ಲಕ್ಷ ಕೋಟಿ ರು. ಭ್ರಷ್ಟಾಚಾರದಲ್ಲಿ ತೊಡಗಿರುವ ನಾಯಕರ ಗುಂಪು. ಈಗ ಅವರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಹೊಸ ಬಾಟಲಿಯಲ್ಲಿ ಹಳೆ ವೈನ್ ಎಂಬ ಮಾತು ಕೇಳಿಲ್ಲವೇ? ಆದರೆ ಇಲ್ಲಿ ಬಾಟಲಿ ಮತ್ತು ವೈನ್. ಎರಡೂ ಹಳೆಯದಾಗಿದೆ’ ಎಂದು ಚಾಟಿ ಬೀಸಿದರು.
ನವ ಭಾರತಕ್ಕೆ ಹೊಸ ಕಾನೂನು; ಇನ್ಮುಂದೆ ಗುಂಪು ಹತ್ಯೆಗೆ ಗಲ್ಲು ಶಿಕ್ಷೆ: ಅಮಿತ್ ಶಾ ಘೋಷಣೆ
‘ವಿಪಕ್ಷಗಳ ಆಡಳಿತದಲ್ಲಿ ಭಾರತದ ಆರ್ಥಿಕತೆಯು ವಿಶ್ವದಲ್ಲಿ 11ನೇ ಸ್ಥಾನ ಮೀರಿ ಹೋಗಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಒಂದೇ ಹೊಡೆತದಲ್ಲಿ ಭಾರತವನ್ನು 5ನೇ ಸ್ಥಾನಕ್ಕೆ ಕೊಂಡೊಯ್ದರು. ಹೀಗಾಗಿ ಮೋಸ ಹೋಗಬೇಡಿ, ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ’ ಎಂದರು.
