ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪೋದು ಬಹುತೇಕ ಫಿಕ್ಸ್ ಆಗಿದೆ. ಮಾತುಕತೆಗಾಗಿ ದೇವೇಗೌಡರ ಮನೆಗೆ ಆಗಮಿಸಿದ್ದ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಅಸಮಾಧಾನದಿಂದಲೇ ಮನೆಯಿಂದ ಹೊರ ಬಂದಿದ್ದಾರೆ.
ಬೆಂಗಳೂರು (ಏ.2): ಹಾಸನ ಜೆಡಿಎಸ್ ಟಿಕೆಟ್ ಫೈನಲ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪೋದು ಬಹುತೇಕ ಫಿಕ್ಸ್ ಆಗಿದೆ. ಮಾತುಕತೆಗಾಗಿ ದೇವೇಗೌಡರ ಮನೆಗೆ ಆಗಮಿಸಿದ್ದ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಅಸಮಾಧಾನದಿಂದಲೇ ಮನೆಯಿಂದ ಹೊರ ಬಂದಿದ್ದಾರೆ. ಹಾಸನ ಟಿಕೆಟ್ ಕೊಡಲೇ ಬೇಕು ಎಂದು ರೇವಣ್ಣ ದಂಪತಿ ಮಾತುಕತೆಯಲ್ಲಿ ಪಟ್ಟು ಹಿಡಿದಿದ್ದರು. ಆದರೆ ಕೆಲವೇ ಸಮಯ ಮಾತುಕತೆ ಮಾಡಿ ಅಸಮಾಧಾನದಿಂದ ದೇವೇಗೌಡ ಮನೆಯಿಂದ ಭವಾನಿ ರೇವಣ್ಣ ತೆರಳಿದ್ದಾರೆ. ಪದ್ಮಾನಾಭನಗರ ದೇವೇಗೌಡ ಮನೆಯಿಂದ ಮುನಿಸಿಕೊಂಡು ಭವಾನಿ ರೇವಣ್ಣ ತೆರಳಿದ್ದು, ಟಿಕೆಟ್ ಕೈ ತಪ್ಪುವ ಹಿನ್ನೆಲೆ ಅಸಮಾಧಾನಗೊಂಡಂತೆ ಕಂಡರು. ಅಸಮಾಧಾನಕೊಂಡು ಬೇಸರದಿಂದಲೇ ರೇವಣ್ಣ ಕೂಡ ಮನೆಯಿಂದ ಹೊರ ನಡೆದರು. ಮಾತ್ರವಲ್ಲ ದಂಪತಿಗಳು ಮಾಧಮ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.
Hassan JDS Ticket Fight: ಹೆಚ್‌ಡಿಕೆ ಪಟ್ಟು, ರೇವಣ್ಣ ಸಿಟ್ಟು, ಗೌಡರ ಬಿಕ್ಕಟ್ಟು, ಇಲ್ಲಿದೆ ಕುಮಾರಣ್ಣನ
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಎಚ್ಡಿಕೆ:
ಇನ್ನು ಈ ಬಗ್ಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಯಾರಿಗೆ ಸಿಗುತ್ತೆ ಹಾಸನದ ಟಿಕೆಟ್ ಅನ್ನೋದಕ್ಕೆ ಖಚಿತತೆಯಿಲ್ಲ ಎಂದರು. ನನಗೆ ರಾಷ್ಟ್ರೀಯ ಅಧ್ಯಕ್ಷರು ಬರಲು ಹೇಳಿದ್ದರು ಬಂದಿದ್ದೇನೆ. ನಾಳೆ ಪಕ್ಷದ ಪಟ್ಟಿ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ. ದೇವೇಗೌಡರ ಮುಂದೆ ಕಾರ್ಯಕರ್ತರ ಅಭಿಪ್ರಾಯ ತಿಳಿಸುತ್ತೇವೆ. ಟಿಕೆಟ್ ಯಾರಿಗೂ ಕೊಡಬೇಕು ಅನ್ನೋದು ಫೈನಲ್ ಆಗಿಲ್ಲ. ಯಾರು ಫೈನಲ್ ಮಾಡಿರೋರು? ನಾನು ಯಾವುದು ಟಿಕೆಟ್ ಫೈನಲ್ ಮಾಡಿಲ್ಲ. ನಾಳೆ ನಾನೇ ಕರೆದು ಯಾರಿಗೆ ಟಿಕೆಟ್ ಅಂತ ತಿಳಿಸುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಕಾರ್ಯಕರ್ತರು ಯಾರಿಗೆ ಮನ್ನಣೆ ಕೊಟ್ಟಿದ್ದಾರೆ ಅವರಿಗೆ ಟಿಕೆಟ್ ಸಿಗಲಿದೆ. ನಾಳೆ ಉಳಿದ ಕ್ಷೇತ್ರಗಳ ಲಿಸ್ಟ್ ಬಿಡುಗಡೆ ಮಾಡುತ್ತೇವೆ ಎಂದರು. ಮಾಜಿ ಸಚಿವ ರೇವಣ್ಣ ಬರೋ ಬಹುದು ಎಂಬ ಪ್ರಶ್ನೆಗೆ ಬಂದ್ರೂ ಬರಬಹುದು ಎಂದು ಹೆಚ್‌ಡಿಕೆ ಹೇಳಿದರು.
15 ಜಿಲ್ಲೆಗಳ ಬಿಜೆಪಿ ಕೋರ್ ಕಮಿಟಿ ಸಭೆ, ಯಾವ ಕ್ಷೇತ್ರದಲ್ಲಿ ಟಿಕೆಟ್ ಫೈಟ್?
ಈ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ರಾ? ಸೆಕೆಂಡ್ ಲಿಸ್ಟ್ ನಾಳೆ ಬಿಡುಗಡೆ ಎನ್ನುತ್ತಲೇ ಹಾಸನದ ಕಗ್ಗಂಟಿಗೆ ಉತ್ತರವಿಲ್ಲ. ಎಚ್ಡಿಡಿ ಸಂಧಾನ ಸಫಲತೆಯಿಂದ ಯಾರಿಗೆ ಒಲಿಯುತ್ತೆ ಅದೃಷ್ಟ ಎಂಬುದನ್ನು ಕಾದು ನೋಡಬೇಕು. ಮಾತ್ರವಲ್ಲ ಹಾಸನ ಟಿಕೆಟ್ ತಾನು ಹೇಳಿದವರಿಗೆ ಸಿಗಬೇಕು ಎಂದು ರೇವಣ್ಣ ಹಠ ಹಿಡಿದಿದ್ದು, ಕುಟುಂಬದ ರಾಜಕೀಯ ವಿಚಾರದಲ್ಲಿ ಚಾಣಕ್ಯ ದೇವೇಗೌಡರ ನಿಲುವಿಗೆ ಮನ್ನಣೆ ಸಿಗುತ್ತಾ? ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ.
