'ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ನೀಡಿದ್ದೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ'

* ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಸಕ್ತ ವಿದ್ಯಮಾನಗಳು
* ಮುಸ್ಲಿಂ ವ್ಯಾಪರಿಗಳಿಗೆ ಬಹಿಷ್ಕಾರ
* ಬಂದ್ ಕರೆ ನೀಡಿದ್ದೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದ ಬಿಜೆಪಿ ಶಾಸಕ

Udupi BJP MLA raghupathi bhat reacts on Muslim  Traders Ban rbj

ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

 ಉಡುಪಿ, (ಮಾ.31): ಮುಸಲ್ಮಾನರು (Muslim) ಕೇವಲ ತಮ್ಮ ಹಕ್ಕುಗಳ ಬಗ್ಗೆ ಮಾತನಾಡಿದರೆ ಆಗೋಲ್ಲ, ಕರ್ತವ್ಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಸಕ್ತ ವಿದ್ಯಮಾನಗಳ ಕುರಿತು ಅವರು ಮಾತನಾಡಿದ ಅವರು, ಆರು ವಿದ್ಯಾರ್ಥಿನಿಯರು ನನ್ನ ಮಾತು ಕೇಳಿದ್ರೆ ಹೀಗಾಗುತ್ತಿರಲಿಲ್ಲ‌ ಎಂದ ಅವರು, ರಾಜ್ಯದಲ್ಲಿ ಹಿಜಾಬ್, ವ್ಯಾಪಾರ, ಹಲಾಲ್, ವಿಚಾರ ಚರ್ಚೆಯಾಗುತ್ತಿದೆ. ಹಿಜಾಬ್ ನಮ್ಮ ಹಕ್ಕು ಎಂದು ಹೋರಾಟ ಮಾಡಿದಾಗ ನಮ್ಮ ಕಾಲೇಜಿನ ಆರು ವಿದ್ಯಾರ್ಥಿನಿಯರಿಗೆ ಸಾರಿ ಸಾರಿ ಹೇಳಿದರೂ ಅವರು ಕೇಳಲಿಲ್ಲ.ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ನೀಡಿದ್ದೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು ಹೇಳಿದರು.

Hijab Row: ಕೋರ್ಟ್‌ ತಲುಪಿದ 6 ವಿದ್ಯಾರ್ಥಿಗಳಿಗೆ ಶಾಸಕ ರಘುಪತಿ ಭಟ್ ಅಚ್ಚರಿಯ ಮನವಿ!

ಭಟ್ಕಳದಲ್ಲಿ ಹಿಂದೂಗಳ ಅಂಗಡಿಯನ್ನು ಜಬರ್ದಸ್ತ್ ಯಾಗಿ ಬಂದ್  ಮಾಡಿಸಲಾಯ್ತು. ಎಲ್ಲಾ ಘಟನೆಗಳು ಹಿಂದೂಗಳ ಭಾವನೆಯನ್ನು ಕೆರಳಿಸಿವೆ. ಹಿಂದೂ ಗಳು ವ್ಯಾಪಾರ, ಹಲಾಲ್ ಮತ್ತಿತರ ವಿಚಾರವನ್ನು ಚರ್ಚೆಗೆ ತಂದಿದ್ದಾರೆ. 2002ರ ಹಿಂದೂಧಾರ್ಮಿಕ ದತ್ತಿ ಇಲಾಖೆ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಿದ್ದಾರೆ.ಎರಡು ಸಮಾಜ ಒಟ್ಟಾಗಿ ಸೌಹಾರ್ದತೆಯಿಂದ ಹೋಗಬೇಕಾದ ಅವಶ್ಯಕತೆ ಇದೆ. ನಿಜ ಆದರೆ ಮುಸಲ್ಮಾನ ಸಮಾಜ ಹಿಜಾಬ್ ವಿಚಾರವನ್ನು ಮೊದಲು ಕ್ಲಿಯರ್ ಮಾಡಿಕೊಳ್ಳಬೇಕು.ನಾವೀಗ 21ನೇ ಶತಮಾನದಲ್ಲಿದ್ದೇವೆ ಈಗಲೂ ಧರ್ಮವೇ ಮುಖ್ಯ ಎಂದು ಪಟ್ಟು ಹಿಡಿದಿದ್ದಾರೆ.ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಆಗದಿದ್ದಾಗ,  ಹಿಂದೂಗಳು ಕೂಡ ತಮಗೆ ಧರ್ಮ ಮುಖ್ಯ ಎಂದು ಅಭಿಪ್ರಾಯಕ್ಕೆ ಬಂದಿದ್ದಾರೆ ಏನು ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಭಟ್ ಹೇಳಿದ್ದಾರೆ.

ಹಲಾಲ್ ಚಿಕನ್ ಬಾಯ್ಕಾಟ್ ಮಾಡಿದರೆ ತಪ್ಪೇನು?
ಹಲಾಲ್ ಚಿಕನ್ ಅನ್ನು ಹಿಂದೂಗಳು ಬಾಯ್ಕಾಟ ಮಾಡಿದ್ದು ತಪ್ಪಲ್ಲ.ಹಿಂದೂಗಳ ಈ ನಡೆಯಲ್ಲಿ ಯಾವುದೇ ತಪ್ಪಿಲ್ಲ.ಹಲಾಲ್ ಅಂಗಡಿಯನ್ನ ಬಂದ್ ಮಾಡಿ ಎಂದು ಹಿಂದುಗಳು ಒತ್ತಾಯ ಮಾಡಿಲ್ಲ.ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿಯೇ ಇದೆ.ಕೋಳಿಯನ್ನು ಕಟ್ ಮಾಡುವ ರೀತಿ, ಅಲ್ಲಾನಿಕೆ ಸಮರ್ಪಣೆ ಮಾಡುವುದು ಇಸ್ಲಾಂ ಪದ್ಧತಿಯಂತೆ ನಡೆಯುತ್ತದೆ. ಇದು ನಮಗೆ ಬೇಡವೆಂದು ಹಿಂದೂ ಜನಜಾಗೃತಿ ಮಾಡಿಸುವುದು ತಪ್ಪಲ್ಲ ಸರಿಯಾಗಿಯೇ ಇದೆ ಎಂದಿದ್ದಾರೆ.

ಮುಸಲ್ಮಾನ ಸಮಾಜ ಸುಧಾರಣೆಯಾಗಬೇಕು
ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ತಡೆ ಮಾಡಿದ್ದಾರೆ. ಇನ್ನಾದರೂಮುಸಲ್ಮಾನ ಸಮಾಜ ಸ್ವಲ್ಪ ಸುಧಾರಣೆಯನ್ನು ಹೊಂದಬೇಕಾಗುತ್ತದೆ. ನಾವು ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ ಎಂದು ಅರಿತುಕೊಳ್ಳಬೇಕಾಗುತ್ತದೆ.

ಸಮಾನತೆಯ ದೃಷ್ಟಿಯಿಂದ ಸಾರ್ವಜನಿಕವಾಗಿ ವರ್ತಿಸಬೇಕು.ಮುಸಲ್ಮಾನರು ಧರ್ಮಾಚರಣೆ ಮಾಡುವುದಕ್ಕೆ ಯಾವುದೇ ಆಕ್ಷೇಪಗಳು ಇಲ್ಲ.ಶಿಸ್ತು , ಸಮವಸ್ತ್ರ ಸಮಾನತೆಯನ್ನು ಎಲ್ಲರೂ ಪಾಲಿಸಬೇಕು.ಭಾರತದ ಪ್ರಜೆಯಾಗಿ ಅವರ ಕರ್ತವ್ಯ ಏನು ಎಂದು ಮೊದಲು ತಿಳಿದುಕೊಳ್ಳಬೇಕು.ಮುಸಲ್ಮಾನರು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲ.ಮುಸಲ್ಮಾನರು ಕರ್ತವ್ಯವನ್ನು ಮರೆತಿರುವುದರಿಂದ ಹಿಂದೂ ಸಮಾಜ ಜಾಗೃತವಾಗಿದೆ‌.ಹಿಂದೂಧರ್ಮೀಯರು ಯಾವಾಗಲೂ ಸಹಿಷ್ಣುಗಳು.ನಮ್ಮದು ವಸುದೈವ ಕುಟುಂಬಕಂ  ಎಂದು ಹೇಳಿಕೊಂಡು ಬಂದಿರುವ ಸಮಾಜ.ಇತ್ತೀಚೆಗೆ ಅತಿರೇಕವಾಗಿ ನಡವಳಿಕೆಗಳು ಕಂಡು ಬಂದಾಗ ಈ ಥರದ ಬೆಳವಣಿಗೆಗಳಾಗಿವೆ ಎಂದರು.

ಶಬರಿಮಲೆ ತೀರ್ಪಿಗೂ ಹಿಜಾಬ್ ತೀರ್ಪಿಗೂ ಹೋಲಿಕೆ ಮಾಡಬೇಡಿ
ಶಬರಿಮಲೆ ಪ್ರಕರಣವನ್ನು ಹಿಜಬ್ ಪ್ರಕರಣದ ಜೊತೆ ಹೋಲಿಸಬೇಡಿ.ದೇವಸ್ಥಾನದ ಧಾರ್ಮಿಕ ಆಚರಣೆಗೂ ಕಾಲೇಜಿನ ಸಮವಸ್ತ್ರಕ್ಕೂ ಹೋಲಿಕೆ ಸರಿಯಲ್ಲ.ರಾಜ್ಯದ ಹೈಕೋರ್ಟ್ ತೀರ್ಪಿಗೆ ಶಬರಿಮಲೆ ತೀರ್ಪಿಗೂ ಹೋಲಿಕೆ ಸರಿಯಲ್ಲ.ಮಸೀದಿ, ಚರ್ಚ್, ದೇವಸ್ಥಾನದ ಆಚರಣೆಗೆ ವಿರುದ್ಧವಾಗಿ ತೀರ್ಪು ಬಂದರೆ ವಿರೋಧಿಸಬಹುದು. ಆದರೆ ಸಾರ್ವಜನಿಕ ಸಂಸ್ಥೆಯಲ್ಲಿ ನಿಯಮ ಪಾಲಿಸದಿರುವುದು ಸರಿಯಲ್ಲ ಎಂದರು.

Latest Videos
Follow Us:
Download App:
  • android
  • ios