ಮುಂಬೈ(ಮೇ.12): ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಧುಮುಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ಮತ್ತು ಕುಟುಂಬದ ಆಸ್ತಿ ಮೌಲ್ಯ ಘೋಷಿಸಿದ್ದಾರೆ.

ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ದಿನಾಂಕ ಪ್ರಕಟಗೊಂಡಿದೆ. ಇದರಂತೆ ಚುನಾವಣಾ ಅಖಾಡಕ್ಕಿಳಿದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸೋಮವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ. ಇದೇ ವೇಳೆ ತಮ್ಮ ಮತ್ತು ಕುಟುಂಬದ ಆಸ್ತಿ ಮೌಲ್ಯ  143.26 ಕೋಟಿ ರು. ಎಂದು ಘೋಷಿಸಿಕೊಂಡಿದ್ದಾರೆ. ಈ ಪೈಕಿ 76.59 ಕೋಟಿ ರೂ.ಗಳ ವೈಯಕ್ತಿಕ ಆಸ್ತಿಯನ್ನು ಹೊಂದಿದ್ದಾರೆ.

40 ತಾಸಿನೊಳಗೆ ಉದ್ಧವ್ ಕುರ್ಚಿ ಕಾಪಾಡಿದ ಪವಾರ್ ಮತ್ತು ಗಡ್ಕರಿ!

ಆದರೆ, ಉದ್ಧವ್‌ ಸ್ವಂತ ಕಾರನ್ನು ಹೊಂದಿಲ್ಲ. 15.50 ಕೋಟಿ ರು. ಸಾಲವನ್ನು ಹೊಂದಿದ್ದಾರೆ. ಸೋಮವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ಉದ್ಧವ್‌ ಠಾಕ್ರೆ ಈ ಮಾಹಿತಿ ನೀಡಿದ್ದಾರೆ. 

ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕಿಯೂ ಆಗಿರುವ ಉದ್ದವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರು ವಿವಿಧ ವ್ಯವಹಾರಗಳಿಂದ ಆದಾಯವನ್ನು ಗಳಿಸುತ್ತಾರೆ ಎಂದು ಅಫಿದವಿತ್‌ನಲ್ಲಿ ಉಲ್ಲೇಖಿಸಿದ್ದಾರೆ. ಉದ್ದವ್ ಠಾಕ್ರೆ  ಪತ್ನಿಯ ಬಳಿ 65.09 ಕೋಟಿ ರು. ಆಸ್ತಿ ಇದೆ ಎಂದು ನಮೂದಿಸಿದ್ದಾರೆ. ಆದರೆ, ತಮ್ಮ ಮಕ್ಕಳ ಆಸ್ತಿಯ ಬಗ್ಗೆ ಉಲ್ಲೇಖಿಸಿಲ್ಲ.

ರಾಮ ಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡುವವರಿಗೆ ಸಿಗುತ್ತೆ ಬಹುದೊಡ್ಡ ವಿನಾಯಿತಿ!

ಉದ್ದವ್ ಠಾಕ್ರೆ ವಿರುದ್ಧ 23 ಪೊಲೀಸ್ ದೂರುಗಳು ದಾಖಲಾಗಿದೆ ಎಂಬುದನ್ನು ತಿಳಿಸಲಾಗಿದೆ. ಇವುಗಳಲ್ಲಿ 14ರಷ್ಟು ದೂರುಗಳು ಸಾಮ್ನಾದಲ್ಲಿ ಪ್ರಕಟವಾದ ಸುದ್ದಿಗೆ ಸಂಬಂಧಪಟ್ಟಿದ್ದಾಗಿದೆ.