ಕಾಂಗ್ರೆಸ್‌ನಿಂದ ಮತ್ತೆರಡು ಗ್ಯಾರಂಟಿ ಘೋಷಣೆ: ಮಲ್ಲಿಕಾರ್ಜುನ ಖರ್ಗೆ
ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ಮಾಡುವುದು, ಶೇ.50ರಷ್ಟಿರುವಮೀಸಲು ಮಿತಿ ತೆಗೆಯುವುದು ಸೇರಿದಂತೆ ವಿವಿಧ ಭರವಸೆಗಳನ್ನೊಳಗೊಂಡಕಾಂಗ್ರೆಸ್ ಪಕ್ಷದ ಶ್ರಮಿಕ ನ್ಯಾಯ ಗ್ಯಾರಂಟಿ ಮತ್ತು ಭಾಗೀದಾರ (ಹಿಸ್ಸೇದಾರ್) ನ್ಯಾಯ ಗ್ಯಾರಂಟಿ ಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು.
ಬೆಂಗಳೂರು (ಮಾ.17): ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ಮಾಡುವುದು, ಶೇ.50ರಷ್ಟಿರುವಮೀಸಲು ಮಿತಿ ತೆಗೆಯುವುದು ಸೇರಿದಂತೆ ವಿವಿಧ ಭರವಸೆಗಳನ್ನೊಳಗೊಂಡಕಾಂಗ್ರೆಸ್ ಪಕ್ಷದ ಶ್ರಮಿಕ ನ್ಯಾಯ ಗ್ಯಾರಂಟಿ ಮತ್ತು ಭಾಗೀದಾರ (ಹಿಸ್ಸೇದಾರ್) ನ್ಯಾಯ ಗ್ಯಾರಂಟಿ ಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರುಮಣಿಪುರ ದಿಂದ ಮುಂಬೈವರೆಗೆ ಭಾರತ್ ಜೋಡೋ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ.
ಅವರು ಯಾತ್ರೆ ಸಂದರ್ಭದಲ್ಲಿ ಜನರು ವ್ಯಕ್ತಪಡಿಸಿದ ಅಭಿಪ್ರಾಯ, ಅವರು ಕಂಡ ಜನರ ಸಮಸ್ಯೆಗಳನ್ನಾಧರಿಸಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗುತ್ತಿದೆ ಎಂದರು. ಈಗಾಗಲೆ ಮೂರು ಗ್ಯಾರಂಟಿಗಳನ್ನು ಘೋಷಿಸಲಾಗಿದ್ದು, ಈಗ ಶ್ರಮಿಕ ನ್ಯಾಯ ಗ್ಯಾರಂಟಿ ಮತ್ತು ಭಾಗೀದಾರ ನ್ಯಾಯ ಗ್ಯಾರಂಟಿ ಸೇರಿ ಒಟ್ಟು ನಾಲ್ಕು ಮತ್ತು ಐದನೇ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಈ ಎಲ್ಲ ಗ್ಯಾರಂಟಿಗಳು ಜನರ ಜೀವನ ಬದಲಿಸುವಂತಹದ್ದಾಗಿದ್ದು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇವೆಲ್ಲವನ್ನೂ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ನನ್ನ ಸ್ಪರ್ಧೆಯ ಬಗ್ಗೆ ರಾಜ್ಯದ ನಾಯಕರು ನಿರ್ಧರಿಸ್ತಾರೆ: ಮಲ್ಲಿಕಾರ್ಜುನ ಖರ್ಗೆ
ಜಾತಿ ಜನಗಣತಿ, ಮೀಸಲಾತಿ ಮಿತಿ ತೆರವು: ದೇಶದಲ್ಲಿನ ಜಾತಿವಾರುಜನಸಂಖ್ಯೆಯನ್ನು ಅರಿಯಲು ಜಾತಿ ಆಧಾರಿತ ಜನಗಣತಿ ನಡೆಸುವುದು ಕಾಂಗ್ರೆಸ್‌ನ ಗುರಿಯಾಗಿದೆ. ಅದರ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯನ್ನು ತಿಳಿಯಲು ಸಹ ಕಾರಿ. ಅಲ್ಲದೆ, ಹೆಚ್ಚು ಜನಸಂಖ್ಯೆ ಇರುವ ಹಾಗೂ ಹಿಂದುಳಿದಿರುವ ಜಾತಿಗಳವರಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತದೆ. ಹಾಗೆ ಯೇ, ಸದ್ಯ ಇರುವ ಶೇ. 50ರಷ್ಟು ಮೀಸ ಲಾತಿ ಮಿತಿಯನ್ನು ತೆರವು ಮಾಡಿ ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಇನ್ನಿತರ ಸಮು ದಾಯದವರಿಗೆ ಮೀಸಲಾತಿ ನೀಡುವುದು ನಮ್ಮ ಗುರಿಯಾಗಿದೆ ಎಂದು ಮಲ್ಲಿಕಾ ರ್ಜುನ ಖರ್ಗೆ ಹೇಳಿದರು.
ಜಾತಿ ಜನಗಣತಿಗೆ ಎಲ್ಲರೂ ಒಪ್ಪಬೇಕು: ಕರ್ನಾಟಕದಲ್ಲಿನಜಾತಿ ಆಧಾರಿತಜನಗಣ ತಿಗೆಕೆಲಸಚಿವರು ವಿರೋಧವ್ಯಕ್ತಪಡಿಸುತ್ತಿ ದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾ ರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವವರು ಪಕ್ಷದ ನಿರ್ಧಾ ರವನ್ನು ಎಲ್ಲರೂ ಪಾಲಿಸಬೇಕು. ಅದನ್ನು ವಿರೋಧಿಸುವುದಕ್ಕೆ ಯಾವುದೇ ಅವಕಾಶವಿಲ್ಲ. ಅದು ಸಿದ್ದರಾಮಯ್ಯ ಇರಬಹುದು, ಡಿ.ಕೆ.ಶಿವಕುಮಾರ್ ಇರಬಹುದು. ಕಾಂಗ್ರೆಸ್ ಜಾತಿ ಆಧಾರಿತ ಜನಗಣತಿ ಪರವಾಗಿದೆ ಎಂದರು.
ಕಾಂಗ್ರೆಸ್‌ಗೆ ಬೆಂಗಳೂರು ಅದೃಷ್ಟದ ಸ್ಥಳ: ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ಅದೃಷ್ಟದ ಸ್ಥಳ. 1951ರಲ್ಲಿ ನಡೆದ ಮೊದಲ ಚುನಾ ವಣೆ ಸಂದರ್ಭದಲ್ಲಿ ಜವಾಹರಲಾಲ್ ನೆಹರು ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಬೆಂಗಳೂರಿನಲ್ಲಿಯೇಮೊದಲುಬಿಡುಗಡೆಮಾಡಿದ್ದರು. ಇದೀಗಲೋಕಸಭಾಚುನಾ ವಣೆಗೆ ಕಾಂಗ್ರೆಸ್ ಘೋಷಣೆಯಾದನಾಲ್ಕು ಮತ್ತು ಐದನೇನ್ಯಾಯಗ್ಯಾರಂಟಿಯನ್ನು ಬೆಂಗಳೂರಿನಿಂದ ಘೋಷಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಶ್ರಮಿಕ ನ್ಯಾಯ ಗ್ಯಾರಂಟಿ
• ಈ ಎಲ್ಲ ಸಂಘಟಿತ, ಅಸಂಘ ಟಿತ ಕಾರ್ಮಿಕರಿಗೆ ಉಚಿತ ಔಷಧಿ, ಚಿಕಿತ್ಸೆ, ಶಸ್ತ್ರಚಿಕಿತ್ಸೆ ನೀಡಲು ಆರೋಗ್ಯ ಹಕ್ಕು ಜಾರಿ
• ನರೇಗಾ ಯೋಜನೆ ಅಡಿಯಲ್ಲಿ ಕಾರ್ಮಿಕರ ದಿನಗೂಲಿ ಮೊತ್ತ 400 ರು.ಗೆ ಹೆಚ್ಚಳ
• ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ
• ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ವಿಮೆ
• ಬಿಜೆಪಿ ಸರ್ಕಾರ ಜಾರಿಗೆ ತಂದಿ ರುವ ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ
ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ: ಪುನೀತ್ ಹುಟ್ಟಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಶಿವಣ್ಣ!
ಭಾಗೀದಾರ ನ್ಯಾಯ
• ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ನಡೆಸಿ ದೇಶದ ಸಂಪತ್ತು ಸಮಾನ ಹಂಚಿಕೆ
• ಎಸ್‌ಸಿ, ಎಸ್ಟಿ, ಹಿಂದುಳಿದ ವರ್ಗ ಗಳಿಗೆ ಮೀಸಲು ಹೆಚ್ಚಳಕ್ಕೆ ಶೇ. 50ರ ಮೀಸಲಾತಿ ಮಿತಿ ತೆರವು
• ಆದಿವಾಸಿ ಹಕ್ಕು ರಕ್ಷಣೆಗೆ ಅರಣ್ಯ ಹಕ್ಕು ಕಾಯ್ದೆ ಜಾರಿ, ಈಗಿರುವ ಕಾಯ್ದೆಗೆ ತಿದ್ದುಪಡಿ ಹಾಗೂ ಅರಣ್ಯ ಉತ್ಪನ್ನಗಳಿಗೂ ಬೆಂಬಲ ಬೆಲೆ
• ಆದಿವಾಸಿಗಳಿಗೆ ಸ್ವಯಂ ಆಡಳಿತ ಹಾಗೂ ಸಂಸ್ಕೃತಿ ರಕ್ಷಣೆ ಹಕ್ಕು ನೀಡಲು ಕಾಯ್ದೆ ಜಾರಿ
• ಖಾಲಿ ಇರುವ ಕೇಂದ್ರ ಸರ್ಕಾರದ ಮೀಸಲಾತಿ ಹುದ್ದೆಗಳ ಭರ್ತಿ