Tumkuru: ಕುಣಿಗಲ್ ಮತದಾರರಿಗೆ ಹಂಚಲು 2 ಟ್ರಕ್ ಕುಕ್ಕರ್ ಆಗಮನ: ತೆರಿಗೆ ಅಧಿಕಾರಿಗಳು ದಾಳಿ
ಕುಕ್ಕರ್ ದಾಸ್ತಾನು ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ
ಮತದಾರರಿಗೆ ಹಂಚಲು ತಂದಿದ್ದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್
ಸಮರ್ಪಕ ತೆರಿಗೆ ಪಾವತಿ ಹಿನ್ನೆಲೆ ಕೇಸ್ ದಾಖಲಿಸದೆ ವಾಪಸ್ ಬಂದ ಅಧಿಕಾರಿಗಳು
ತುಮಕೂರು (ಜ.19): ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾತ್ ಅವರಿಗೆ ಸೇರಿದ ಕುಕ್ಕರ್ ಮತ್ತು ಅಡುಗೆ ಮಾಡುವ ತವಾ ತುಂಬಿದ್ದ ಲಾರಿ ಮತ್ತು ದಾಸ್ತಾನು ಮಳಿಗೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಅಮೃತ್ತೂರು (Amrutturu Village) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಣಿಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಗೆ (Congress MLA Ranganath) ಸೇರಿದ ಕುಕ್ಕರ್ ಗಳು (Cooker) ಇದಾಗಿದ್ದು, ಕುಕ್ಕರ್ ಬಾಕ್ಸ್‌ಗಳ ಮೇಲೆ ಕಾಂಗ್ರೆಸ್ ಪಕ್ಷದ ಕೈ ಗುರುತಿನ ಚಿಹ್ನೆ (Hand Logo) ಹಾಗೂ ಶಾಸಕ ಡಾ.ರಂಗನಾಥ್ ಪೋಟೊ ಮುದ್ರಿಸಲಾಗಿದೆ. ಹರಿಯಾಣ ರಾಜ್ಯದ ನೋಂದಾವಣಿ ಹೊಂದಿರುವ ಎರಡು ಕಂಟೈನರ್ ಲಾರಿಯಲ್ಲಿ ಕುಕ್ಕರ್ ಅನ್ನು ತರಲಾಗಿದ್ದು, ಅಮೃತ್ತೂರಿನಲ್ಲಿ ದಾಸ್ತುನು ಮಾಡಲಾಗುತ್ತಿತ್ತು, ಈ ವೇಳೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ತೆರಿಗೆ ಪಾವತಿ ದಾಖಲಾಗಿತಿಗಳನ್ನು ಪರಿಶೀಲನೆ ನಡೆಸಿದ್ದಾರೆ.
Tumakuru: ಸಂಸದ ಜಿ.ಎಸ್.ಬಸವರಾಜು ದೊಡ್ಡ ಲೂಟಿಕೋರ: ಶಾಸಕ ಎಸ್.ಆರ್.ಶ್ರೀನಿವಾಸ್
ಸತತ 7 ಗಂಟೆಗಳ ಪರಿಶಿಲನೆ: ನಿನ್ನೆ ಸಂಜೆ 5 ಗಂಟೆ ದಾಳಿ ನಡೆದಿದ್ದು, ರಾತ್ರಿ 12 ಗಂಟೆವರೆಗೂ ದಾಖಲಾತಿ ಪರಿಶೀಲನೆ (Dociment Verifucation) ನಡೆಸಲಾಗಿದೆ. ಒಟ್ಟಾರೆ ಸತತ 7 ಗಂಟೆಗಳ ಕಾಲ ಪರಿಶೀಲನೆ ಮಾಡಿದ ತೆರಿಗೆ ಇಲಾಖೆ ಅಧಿಕಾರಿಗಳು ಕುಕ್ಕರ್ ಸಾಗಿಸಲು ಪರ್ಮಿಟ್ (Permit) ಹಾಗೂ ಇ-ವೇ ಬಿಲ್ ರಸೀದಿ (E-way Bill recipt) ಹಾಗೂ ಜಿಎಎಸ್‌ಟಿ ಪಾವತಿಸಿದ ರಸೀದಿಯನ್ನು (GST Recipt) ಅಧಿಕಾರಿಗಳಿಗೆ ಶಾಸಕರ ಬೆಂಬಲಿಗರು ನೀಡಿದ್ದಾರೆ. ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಕುಕ್ಕರ್ ಲೋಡ್ ನೊಂದಿಗೆ ದಾಖಲಾತಿಗಳನ್ನು ತಾಳೆ ಮಾಡಿ ನೋಡಿದ್ದಾರೆ. ಯಾವುದೇ ಲೋಪದೋಷ ಕಂಡ ಬರದ ಹಿನ್ನೆಲೆಯಲ್ಲೆ ಕೇಸ್ ದಾಖಲಿಸದೆ ವಾಪಸ್ ಬಂದಿದ್ದಾರೆ.
ಜೆಡಿಎಸ್ ಮುಖಂಡರಿಂದ ರೇಡ್ ಮಾಡಿಸಿದ ಆರೋಪ: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿ ರೇಡ್ ನಡೆಸಿದ ಅಮೃತೂರು ಗ್ರಾಮದ ಸ್ಥಳಕ್ಕೆ ರಾತ್ರಿ ವೇಳೆ ಜೆಡಿಎಸ್ (JDS) ಮಾಜಿ ಶಾಸಕ ಡಿ. ನಾಗರಾಜಯ್ಯ (Ex MLA D.Nagarajaiah) ಅವರ ಪುತ್ರ ಜಗದೀಶ್ ಆಗಮಿಸಿದ್ದಾರೆ. ಇದನ್ನು ನೋಡಿದ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕನ ಪುತ್ರ ಜಗದೀಶ್‌ನನ್ನು (Jagadish) ತರಾಟೆಗೆ ತೆಗೆದುಕೊಂಡಿದ್ದಾರೆ. ಕುಕ್ಕರ್ ರೈಡ್ ಮಾಡಿಸಲು ಪೊಲೀಸ್ ಕರೆತಂದಿದ್ದೀರಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರೆದು ಕರೋನಾ (Covid-19) ಸಮಯದಲ್ಲಿ ಉಪ್ಪು ನೀಡದವನು ನೀನು. ಆಗಲೂ ಶಾಸಕರು ಜನರಿಗೆ ಭರಪೂರ ಸಹಾಯ ಮಾಡಿದ್ದಾರೆ. ಶಾಸಕರು ಈಗ ಬಡಜನರಿಗೆ ಅನುಕೂಲ ಆಗಲೆಂದು ಅಡುಗೆ ಮಾಡುವ ಕುಕ್ಕರ್ ಕೊಡುವಾಗ ಬಂದಿದ್ದೀಯಾ ಎಂದು ಜಗದೀಶ್‌ನೊಂದಿಗೆ ಗಲಾಟೆ ಮಾಡಿದ್ದಾರೆ.
Tumakur : ರೈತರಿಗೆ ಬಿಜೆಪಿ ಸರ್ಕಾರದಲ್ಲಿ ಬೆಲೆಯಿಲ್ಲ: ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಸ್ಥಳದಿಂದ ಕಾಲ್ಕಿತ್ತ ಜಗದೀಶ್: ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕನ ಪುತ್ರ ಜಗದೀಶ್ ವಿರುದ್ಧ ಹಾಗೂ ಅವರ ತಂದೆಯು ಕಳೆದ ಮೂರ್ನಾಲ್ಕು ವರ್ಷಗಳಿಂದ ಜನರಿಗೆ ಯಾವುದೇ ನೆರವು ನೀಡದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ, ಮತದಾರರಿಗೆ ನಾವು ಮಾಡುತ್ತಿರುವ ಸಹಾಯದ ಮೇಲೂ ಕೆಟ್ಟ ದೃಷ್ಟಿ ಬೀರಿ ರೇಡ್ (Raid) ಮಾಡಿಸುತ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು ಎಂದು ಕಿಡಿ ಕಾರಿದ್ದಾರೆ. ಈ ವೇಳೆ ಇನ್ನೂ ಗಲಾಟೆ ಜೋರಾಗಬಹುದು ಎಂದು ನಿರೀಕ್ಷಿಸಿದ ಜೆಡಿಎಸ್ ಮುಖಂಡ ಜಗದೀಶ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ.