ನನಗೆ ಗುಟಾನು ಹೊಡೆದಿದ್ರು: ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ ಬಗ್ಗೆ MP ಹೇಳಿದ್ದೀಗೆ!
ಮುದ್ದಹನುಮೇಗೌಡ ಅವರು ಬಿಜೆಪಿ ಬಾಗಿಲು ತಟ್ಟಿದ್ದಾರೆ. ಈಗಾಗಲೇ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದಕ್ಕೆ ಸ್ಥಳೀಯ ಬಿಜೆಪಿ ಸಂಸದ ಹೇಳಿದ್ದಿಷ್ಟು
ತುಮಕೂರು, (ಸೆಪ್ಟೆಂಬರ್.09): ಈಗಾಗಲೇ ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವುದಕ್ಕೆ ತೀರ್ಮಾನಿಸಿದ್ದಾರೆ. ಇದಕ್ಕೆ ಪೂಕರವೆಂಬಂತೆ ಮುದ್ದಹನುಮೇಗೌಡ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ತುಮಕೂರು ಸಂಸದ ಜಿಎಸ್ ಬಸವರಾಜ್ ಮಾತನಾಡಿದ್ದು,ಮುದ್ದಹನುಮೇಗೌಡ ಬಿಜೆಪಿಗೆ ಬರ್ಲಿ ತಪ್ಪೆನಿದೆ. ಅವರು ಒಂದು ಸಲ ಎಂಪಿ ಆಗಿದ್ದೋರು, ಎರಡು ಸಲ ಎಂಎಲ್ಎ ಆಗಿದ್ದೋರು. ಅವರಿಗೆ ರಾಜಕೀಯ ಹುಚ್ಚು ಇದೆ. ಇದರಲ್ಲಿ ನಮ್ಮದೆನು ಇಲ್ಲ. ಬಂದು ಬೇಕಾದ್ರೆ ಸ್ಪರ್ಧೆ ಮಾಡ್ಲಿ ಬಿಡಿ ಎಂದರು.
ಬಿಜೆಪಿ ಬಾಗಿಲು ತಟ್ಟಿದ ಕಾಂಗ್ರೆಸ್ ಮಾಜಿ ಸಂಸದ, ಯಡಿಯೂರಪ್ಪ ಜತೆ ಗುಪ್ತ್-ಗುಪ್ತ್ ಮಾತು
ಮುಂದಿನ ಬಾರಿ ಎಂಪಿ ಸ್ಥಾನವನ್ನ ಮುದ್ದಹನುಮೇಗೌಡರಿಗೆ ಬಿಟ್ಟು ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನೇನು ಬಿಟ್ಟು ಕೊಡೋಕೆ ನಮ್ಮಪ್ಪನ ಆಸ್ತಿಯಲ್ಲ ಇದು. ಬಿಜೆಪಿಯವರು ಟಿಕೆಟ್ ಕೊಟ್ರೆ ನಿತ್ಕೊಂತಾರೆ. ನನಗೆ ಒಂದು ಟಿಕೆಟ್ ಕೊಟ್ರು, ನಾನು ನಿತ್ಕೊಂಡೆ. ಅದೇ ರೀತಿ ಅವರು ಟಿಕೆಟ್ ತಗೋಬೇಕು ಗೆಲ್ಲಬೇಕು.ಅವರ ಆಸೆ ಇರೋದು ಕುಣಿಗಲ್ ತಾಲ್ಲೂಕಿಗೆ ಎಂಎಲ್ ಎ ಆಗ್ಬೇಕು ಅಂತ. ನನಗೂ ಯಾರೋ ಹೇಳಿದ್ರು. ಆದ್ರೆ, ಏನು ಅಂತ ಟಚ್ ಇಲ್ಲ ಅವರು. ನಾನೇ ಒಂದು ಟೈಮ್ ನಲ್ಲಿ ಜಿಲ್ಲಾ ಪಂಚಾಯತಿಗೆ ನಿಲ್ಸಿದ್ದೆ. 40 ವೋಟ್ ನಲ್ಲಿ ಸೋತಿದ್ರು.ಆ ಮೇಲೆ ಎಂಎಲ್‌ಎ ಗೆ ನಿಂತು ಸೋತಿದ್ರು. ಮರಳಿ ಯತ್ನವ ಮಾಡು ಅಂತ ಮತ್ತೆ ನಿಂತು ಗೆದ್ರು, ಇನ್ನೊಂದು ಸಲನು ಗೆದ್ರು. ಆಮೇಲೆ ನನಗೆ ಗುಟಾನು ಹೊಡೆದ್ರು. ಎಲ್ಲರೂ ಸೇರಿ ಚೆನ್ನಾಗಿ ನನಗೆ ಗುಟಾನು ಹೊಡೆದ್ರು ಎಂದು ಹೇಳಿ ನಕ್ಕರು.
ಜಯಚಂದ್ರ, ಮುದ್ದಹನುಮೇಗೌಡ ಎಲ್ಲಾ ಸೇರಿ ನನ್ನ ಸೋಲಿಸಿದ್ರು. ನಮ್ಮ ತುಮಕೂರು ಜಿಲ್ಲೆಗೆ ಅದೆಲ್ಲಾ ಕಾಮನ್. ಏನು ಮಾಡೋಕೆ ಆಗಲ್ಲ.ಯಾವಾಗಲೂ ಮನೆ ಶತೃನಾ ಹಿಡಿಯೋಕೆ ಆಗಲ್ಲ. ಹೊರಗಡೆ ಶತೃಗಳು ಬೇಗ ಸಿಕ್ಕಿ ಬಿಳ್ತಾರೆ. ಒಳಗೊಳಗೆ ಏನೇನೋ ನನ್ನ ವಿರುದ್ಧ ಪಿತೂರಿ ಮಾಡಿ.2014ರ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಸಿದ್ರು. ಇವಾಗ ಸೊಗಡು ಶಿವಣ್ಣ ಬಿಟ್ರೆ ಅಂತವರು ಯಾರು ಇಲ್ಲ. ಸದ್ಯಕ್ಕೆ ಸೊಗಡು ಶಿವಣ್ಣ ಒಬ್ಬ ಬಾಯಿಗೆ ಬಂದಾಗೆ ಮಾತನಾಡ್ತಾನೆ. ಅವನೊಬ್ಬನ್ನ ಬಿಟ್ರೆ ಇನ್ಯಾರು ಇಲ್ಲ ಸದ್ಯಕ್ಕೆ ಎಂದು ಹೇಳಿದರು.
ಮತ್ತೋರ್ವ ಹಿರಿಯ ನಾಯಕ ಕಾಂಗ್ರೆಸ್‌ಗೆ ಗುಡ್ ಬೈ: ಸಿದ್ದು, ಡಿಕೆಶಿ ಭೇಟಿಯಾಗಿ ರಾಜೀನಾಮೆ ಘೋಷಣೆ
ಬಿಜೆಪಿ ಸರ್ಕಾರ 40% ಕಮಿಷನ್ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿ, ಡಿಕೆ ಶಿವಕುಮಾರ್ ಹೇಳ್ತಾನೆ ಅವನ ಕಾಲದಲ್ಲಿ ಏನೇನು ಮಾಡಿದ್ದ ಹೇಳಿ.40% ಕಮಿಷನ್ ಅಂತಾನೆ, ಈ ಪ್ರಪಂಚದಲ್ಲಿ ಹೆಚ್ಚಿಗೆ ಕಮಿಷನ್ ತಗೊಂಡು ತಿಂತ್ತಾನೆ ಅಂದ್ರೆ ನನ್ನ ದೃಷ್ಟಿಯೊಳಗೆ ಅದು ಡಿಕೆ ಶಿವಕುಮಾರ್.ಸುಮ್ನೆ ಯಾಕೆ ಹೇಳ್ಬೇಕು, ಅವರೆಲ್ಲಾ ನಮ್ಮ ಸ್ನೇಹಿತರುಗಳೇ, ಅಪಾರವಾದ ಗೌರವ ಇದೆ. ಸುಮ್ನೆ ಸುಳ್ಳು ಹೇಳಿಒಂಡು ಹೋಗ್ಬಾರದು. ನಮ್ಮ ಲೋಪ ಇಟ್ಕೊಂಡು ಇನ್ನೊಬ್ಬ ವ್ಯಬಿಚಾರಿ ಅಂದ್ರೆ ಅವನನ್ನ ಯಾರಾದ್ರು ನಂಬ್ತಾರಾ ಎಂದು ಟಾಂಗ್ ಕೊಟ್ಟರು.
ಎಷ್ಟು ಇಡಿ ಕೇಸ್ ಗಳಿವೆ, ಎಷ್ಟು ಕೇಸ್ ವಿಚಾರಣೆ ನಡೆಯುತ್ತಿವೆ.ಅವೆಲ್ಲಾ ಮಾಡ್ದೆ ಆಗಿರುತ್ತಾ.? ಇವಾಗ ಕೋರ್ಟ್ ನಲ್ಲಿದೆ ನಾವೇನು ಕಾಮೆಂಟ್ ಮಾಡೋ ಆಗಿಲ್ಲ.ಆ ಬೊಮ್ಮಾಯಿ ಅಮಾಯಕ, ಅವನ ಬಗ್ಗೆ ಬಾಯಿಗೆ ಬಂದಂಗೆ ಮಾತಾಡ್ತಾರೆ. ಕುದುರೆ ಕೊಟ್ಟು, ಕುದುರೆ ಏರೋನು ಶೂರುನು ಅಲ್ಲ. ಧೀರನು ಅಲ್ಲಾ ಅನ್ನೋ ಹಾಗೆ ಆಗಿದೆ ಇವರು ಮಾತು. ಎಲ್ಲಾ ಸೇರಿ ಸಿಎಂ ನಾ ಎಲೆಕ್ಟೆಡ್ ಮಾಡಿದ್ದಾರೆ. ಸಿಎಂ ಆಗಿದ್ದಾರೆ ಅವರ ಕೆಲಸ ಅವರು ಮಾಡ್ತಾರೆ. ಇನ್ನೇನು ಮಾಡ್ಬೇಕಿತ್ತು ಇವರಿಗೆ ಎಂದು ತಿರುಗೇಟು ನೀಡಿದರು.
ಬಿಜೆಪಿಗೆ ರಾಜಿನಾಮೆ ಕೊಡ್ತಿರಾ ಎನ್ನುವುದಕ್ಕೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಡುವುದಕ್ಕೆ ನನಗೇನು ತಲೆ ಕೆಟ್ಟಿದಿಯಾ? ವೈಯಕ್ತಿಕವಾಗಿ ನನ್ನ ಕುಟುಂಬದಲ್ಲಿ ಸಮಸ್ಯೆಯಿದೆ. ಅದೆನೆಲ್ಲಾ ಸರಿ ಮಾಡ್ಕೊಂಡು ಮಕ್ಕಳು ಮರಿ, ನೊಡ್ಕಂಡು ದೇವರು ಕೊಟ್ಟ ಆಯಸ್ಸನ್ನ ಅನುಭವಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
.