Asianet Suvarna News Asianet Suvarna News

ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು!

ನಮ್ಮನ್ನು ಡಿಎಂಕೆ ಸರಿ​ಯಾಗಿ ನಡೆ​ಸಿ​ಕೊ​ಳ್ಳುತ್ತಿಲ್ಲ: ಅಳ​ಗಿ​ರಿ| ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು| ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ ತಮಿ​ಳು​ನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌ ಅಳ​ಗಿರಿ

Trouble in alliance Congress KS Alagiri in tears after DMK shames Congress in seat sharing pod
Author
Bangalore, First Published Mar 7, 2021, 8:28 AM IST

ಚೆನ್ನೈ(ಮಾ.07): ತಮಿಳುನಾಡಿನಲ್ಲಿ ಕಾಂಗ್ರೆಸ್‌-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಸಲ ಎಐ​ಎ​ಡಿ​ಎಂಕೆ​ ಸರ್ಕಾ​ರ​ವನ್ನು ಹೊರ​ದಬ್ಬಿ ಆಡ​ಳಿ​ತದ ಚುಕ್ಕಾಣಿ ಹಿಡಿ​ಯಲು ಕನಸು ಕಾಣು​ತ್ತಿ​ರುವ ಡಿಎಂಕೆ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ ತಮಿ​ಳು​ನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌ ಅಳ​ಗಿರಿ ಅವರು, ‘ಸೀಟು ಹಂಚಿಕೆ ಬಗ್ಗೆ ಮಾತು​ಕ​ತೆಗೆ ಹೋದಾಗ ಕಾಂಗ್ರೆಸ್‌ ನಿಯೋ​ಗ​ವನ್ನು ಡಿಎಂಕೆ ನಡೆ​ಸಿ​ಕೊಂಡ ಬಗ್ಗೆ ಭಾರೀ ಘಾಸಿ​ಗೊ​ಳಿ​ಸಿದೆ. ನಮಗೆ ಇಂತಿಷ್ಟುಸೀಟು ಅನ್ನು​ವು​ದ​ಕ್ಕಿಂತ ಮಾಜಿ ಮುಖ್ಯ​ಮಂತ್ರಿ ಊಮ್ಮನ್‌ ಚಾಂಡಿ ಅವ​ರನ್ನು ನಡೆ​ಸಿ​ಕೊಂಡ ರೀತಿ ನೋವು ತರಿ​ಸಿದೆ’ ಎಂದು ಭಾವ​ನಾ​ತ್ಮ​ಕ​ವಾಗಿ ನುಡಿ​ದಿ​ದ್ದಾರೆ.

ಅಳ​ಗಿರಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು, ‘ಪಕ್ಷಕ್ಕೆ ಸರಿ​ಯಾದ ಸೀಟು ಪಡೆ​ಯುವ ಮೂಲಕ ಡಿಎಂಕೆ ಜೊತೆ​ಗಿನ ಮೈತ್ರಿ​ಯನ್ನು ಉಳಿ​ಸ​ಬೇ​ಕು’ ಎಂದು ಸೂಚಿ​ಸಿ​ದ್ದಾರೆ.

ಡಿಎಂಕೆ ಈಗಾಗಲೇ ವಿಸಿಕೆ, ಸಿಪಿಐ, ಐಯು​ಎಂಎಲ್‌, ವೈಕೋ ಅವರ ಎಂಡಿಎಂಕೆ ಹಾಗೂ ಎಂಎಂಕೆ ಪಕ್ಷ​ಗ​ಳೊಂದಿಗೆ ಮೈತ್ರಿ ಮಾಡಿ​ಕೊಂಡಿದೆ. ಆದರೆ ಕಾಂಗ್ರೆಸ್‌ ಜತೆಗಿನ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿದೆ.

Follow Us:
Download App:
  • android
  • ios