Asianet Suvarna News Asianet Suvarna News

ವಿಧಾನಸಭಾ ಚುನಾವಣೆ ಸಮೀಪದಲ್ಲಿ ಬಿಜೆಪಿಗೆ ಶಾಕ್, ಪ್ರಮುಖ ನಾಯಕ ರಾಜೀನಾಮೆ!

ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಇದೀಗ ಪಕ್ಷಾಂತರ ಪರ್ವಗಳು ಹೆಚ್ಚಾಗುತ್ತಿದೆ. ಈ ಬಿಸಿ ಬಿಜೆಪಿಗೂ ತಟ್ಟಿದೆ. ಪ್ರಮುಖ ನಾಯಕ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

Tripura Tribal BJP MLA Dibachandra Hrangkhawal resigns from party ahead of Assembly election ckm
Author
First Published Dec 28, 2022, 6:41 PM IST

ಅಗರ್ತಲಾ(ಡಿ.28):  ಕರ್ನಾಟಕ ಸೇರಿದಂತೆ ಸಾಲು ಸಾಲು ರಾಜ್ಯಗಳ ವಿಧಾನಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ನಾಯಕರ ಪಕ್ಷಾಂತರ ಪರ್ವ ಕೂಡ ನಡೆಯುತ್ತಿದೆ. ಆದರೆ ತ್ರಿಪುರಾ ಬಿಜೆಪಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಬಿಜೆಪಿಯ ಬುಡಕಟ್ಟು ಸಮುದಾಯದ ಪ್ರಮುಖ ನಾಯಕ, ಶಾಸಕ ದಿಬಾಚಂದ ಹ್ರಾಂಗಖವಾಲ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಾಯಕ ರಾಜೀನಾಮೆ ತ್ರಿಪುರಾದಲ್ಲಿರುವ ಬಿಜೆಪಿಯ ಸಮ್ಮಿಶ್ರ ಸರ್ಕಾರಕ್ಕೆ ತೀವ್ರ ಹಿನ್ನಡೆ ತರುತ್ತಿದೆ.

ದಿಬಾಚಂದ ಹ್ರಾಂಗಖವಾಲ್ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರದಿಂದ ರಾಜೀನಾಮೆ ನೀಡಿದ ನಾಯಕರ ಸಂಖ್ಯೆ 7ಕ್ಕೇರಿದೆ. ರಾಜೀನಾಮೆ ಬಳಿಕ ಮಾತನಾಡಿರುವ ದಿಬಾಚಂದ ಹ್ರಾಂಗಖವಾಲ್, ವೈಯುಕ್ತಿಕ ಕಾರಣದಿಂದ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. 

ಮತ ಗಳಿಕೆಗಾಗಿ ಹಿಂದೂ ಧರ್ಮ ಅವಮಾನಿಸಿದರೆ ಬಿಜೆಪಿ ಧಿಕ್ಕರಿಸಿ: ಸಿ.ಟಿ. ರವಿ

ಇಂದು ನಾನು ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್ ರತನ್ ಚಕ್ರಬೊರ್ತಿ ಕಾರ್ಯದರ್ಶಿಗೆ ಸಲ್ಲಿಸಿದ್ದೇನೆ. ಮುಂದಿನ ನಡೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕ್ಷೇತ್ರದ ಜನರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ನಾನು ರಾಜಕೀಯ ವ್ಯಕ್ತಿಯಾಗಿರುವ ಕಾರಣ ರಾಜಕೀಯದಲ್ಲೇ ಮುಂದುವರಿಯುತ್ತೇನೆ ಎಂದು ಪಕ್ಷಾಂತರ ಸೂಚನೆ ನೀಡಿದ್ದಾರೆ.

ಈ ವರ್ಷದಲ್ಲಿ ತ್ರಿಪುರಾ ಬಿಜೆಗೆ ತೀವ್ರ ಹಿನ್ನಡೆ ಅನುಭವಿಸಿದೆ. ಈ ವರ್ಷದಲ್ಲಿ ದಿಬಾಚಂದ ಹ್ರಾಂಗಖವಾಲ್ ಸೇರಿದಂತೆ ಇದುವರೆಗೆ ಒಟ್ಟು 4 ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರೆ. ದಿಬಾಚಂದ ಹ್ರಾಂಗಖವಾಲ್ ರಾಜೀನಾಮೆ ಕುರಿತು ತ್ರಿಪುರಾ ಬಿಜೆಪಿ ವಕ್ತಾರ ಸುಬ್ರೊತೊ ಚಕ್ರಬೊರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ದಿಬಾಚಂದ ಹ್ರಾಂಗಖವಾಲ್ ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕ್ಷೇತ್ರಕ್ಕೆ ತೆರಳಿ ಜನರ ಅಹವಾಲು ಸ್ವೀಕರಿಸಲು ಕ್ಷೇತ್ರದ ಅಭಿವದ್ಧಿಗಾಗಿ ಪ್ರವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಕಾರಣದಿಂದ ದಿಬಾಚಂದ ಹ್ರಾಂಗಖವಾಲ್ ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ.

ಸೀಮೆ ಎಣ್ಣೆ ನೀಡಲಾಗದಿದ್ರೆ ತೊಲಗಿ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ದಿಬಾಚಂದ ಹ್ರಾಂಗಖವಾಲ್ ರಾಜೀನಾಮೆ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪರಿಮಾಣ ಬೀರುವುದಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಸುಬ್ರತೊ ಚಕ್ರವರ್ತಿ ಸ್ಪಷ್ಪಪಡಿಸಿದ್ದಾರೆ.  ತ್ರಿಪುರಾದಲ್ಲಿ ಬಿಜೆಪಿ ಹಾಗೂ ಇಂಡಿಜೀನಿಯಸ್ ಪೀಪಲ್ ಫ್ರಂಟ್ ಆಫ್ ತ್ರಿಪುರಾ (IPFT) ಪಕ್ಷ ಸಮ್ಮಿಶ್ರವಾಗಿ ಸರ್ಕಾರ ನಡೆಸುತ್ತಿದೆ. 60 ವಿಧಾನಸಭಾ ಸ್ಥಾನಗಳ ಪೈಕಿ 34 ಶಾಸಕರನ್ನು ಬಿಜೆಪಿ ಹೊಂದಿದೆ. 

ರೆಡ್ಡಿ ಆಪ್ತ ದಮ್ಮೂರು ಶೇಖರ್‌ ಬಿಜೆಪಿಗೆ ರಾಜೀನಾಮೆ
ಕರ್ನಾಟಕ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ಮುಂದಾಗುತ್ತಿದ್ದಂತೆಯೇ ಜಿಲ್ಲಾ ಬಿಜೆಪಿಯಲ್ಲಿ ಇದೀಗ ಮೊದಲ ರಾಜೀನಾಮೆ ಸಲ್ಲಿಕೆಯಾಗಿದೆ. ರೆಡ್ಡಿ ಆಪ್ತ, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿರುವ ದಮ್ಮೂರು ಶೇಖರ್‌, ಪಕ್ಷದ ನಾಯಕರು ರೆಡ್ಡಿಯನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಘಟನೆಗಾಗಿ ಸತತ ತೊಡಗಿಸಿಕೊಂಡಿದ್ದರಿಂದಾಗಿಯೇ ರೆಡ್ಡಿ ಹಾಗೂ ಅವರ ಕುಟುಂಬ ಸದಸ್ಯರು ಸಾಕಷ್ಟುತೊಂದರೆಗಳನ್ನು ಎದುರಿಸುವಂತಾಯಿತು. ಆದಾಗ್ಯೂ ಪಕ್ಷಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟುಕೆಲಸ ಮಾಡಿದರು. ಇಷ್ಟಾಗಿಯೂ ಪಕ್ಷದ ಹೈಕಮಾಂಡ್‌ ಗುರುತಿಸದಿರುವುದು ನಮ್ಮಂಥ ಅಪಾರ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಹೀಗಾಗಿಯೇ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿರುವುದಾಗಿ ದಮ್ಮೂರು ಶೇಖರ್‌ ನೀಡಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ದಮ್ಮೂರು ಶೇಖರ್‌ ಈ ಹಿಂದೆ ಬಿಜೆಪಿ ಯುವಮೋರ್ಚಾದ ರಾಜ್ಯಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

Follow Us:
Download App:
  • android
  • ios