Asianet Suvarna News Asianet Suvarna News

Koppal News: ಬ್ಯಾನರ್ ಹರಿದು ದಢೇಸೂಗೂರು ಗೂಂಡಾ ವರ್ತನೆ; ತಂಗಡಗಿ

  • ಬ್ಯಾನರ್ ಹರಿದು ದಢೇಸೂಗೂರು ಗೂಂಡಾ ವರ್ತನೆ
  • ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪ

 

torn the banner and behavior like a hooligan tangadagi rav
Author
First Published Nov 17, 2022, 3:30 PM IST

ಕಾರಟಗಿ (ನ.17) : ಸರ್ಕಾರದ ಜನವಿರೋಧಿ ನೀತಿ ಮತ್ತು ಶಾಸಕರ ವರ್ತನೆ ಖಂಡಿಸಿ ಕಾಂಗ್ರೆಸ್‌ ನ.17 ರಂದು ಸಿದ್ದಾಪುರದಿಂದ ಕಾರಟಗಿ ವರೆಗೆ ಜನ ಪ್ರತಿಜ್ಞಾ ಯಾತ್ರೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹಾಕಿದ್ದ ಬ್ಯಾನರ್‌ಗಳನ್ನು ಶಾಸಕ ಬಸವರಾಜ್‌ ದಢೇಸೂಗೂರ ಹಾಗೂ ಸಂಗಡಿಗರು ಮಧ್ಯರಾತ್ರಿ ಕಿತ್ತು ಹಾಕಿ ಗೂಂಡಾಗಿರಿಯ ವರ್ತನೆ ತೋರಿದ್ದಾರೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ಶಾಸಕರು ಖುದ್ದಾಗಿ ಹೋಗಿ ಬ್ಯಾನರ್‌ ಕೀಳಿಸುವ ಹಂತಕ್ಕೆ ಬಂದಿದ್ದು ಶೋಚನೀಯ. ಕಾನೂನು ಉಲ್ಲಂಘಿಸಿದರೆ, ಶಾಸಕರ ಹೆಸರು ಬ್ಯಾನರ್‌ಗಳಲ್ಲಿ ಇದ್ದರೆ ಅವರು ಖುದ್ದಾಗಿ ನಮ್ಮ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿತ್ತು. ಬ್ಯಾನರ್‌ ಹಾಕಲು ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಕೇಳಿದ್ದೇವೆ. ಪರವಾನಗಿ ಇಲ್ಲವಾದರೆ ಸಂಬಂಧಿಸಿದ ಇಲಾಖೆಯಿಂದ ನಮಗೆ ನೋಟಿಸ್‌ ಕೊಡಬೇಕಾಗಿತ್ತು. ಅದನ್ನು ಬಿಟ್ಟು ಖುದ್ದಾಗಿ ಶಾಸಕರು ಮಧ್ಯರಾತ್ರಿ ಹೋಗಿ ಬ್ಯಾನರ್‌ ಕಿತ್ತು ಹಾಕಿ ಗೂಂಡಾಗಿರಿ ಮಾಡುತ್ತಾರೆ ಎಂದರೆ ಸಹಿಸಲು ಅಸಾಧ್ಯ ಎಂದರು.

Koppal News: ನಿರ್ವಹಣಾ ವೈಫಲ್ಯ: ಹಲವೆಡೆ ಕುಡಿವ ನೀರಿನ ಸಮಸ್ಯೆ

ಪಿಎಸ್‌ಐ ಹಗರಣದಲ್ಲಿ ಆಡಿಯೋ ವಿಷಯದ ಕುರಿತು ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ನಾವು ಬ್ಯಾನರ್‌ನಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದೇ ಕೇವಲ ಪಿಎಸ್‌ಐ ಹಗರಣ ಎಂದು ಹೇಳಿದ್ದೇವೆ. ಕಾನೂನು ಗೌರವಿಸುತ್ತೇವೆ ಎಂದು ತಂಗಡಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಬ್ಲಾಕ್‌ ಅಧ್ಯಕ್ಷ ಶರಣೇಗೌಡ ಪೊ.ಪಾಟೀಲ ಸೇರಿದಂತೆ ಹಲವರು ಇದ್ದರು.

Follow Us:
Download App:
  • android
  • ios