ಇಂದು, ನಾಳೆ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ: ರಾಜ್ಯ ಸೇರಿ 9 ಅಸೆಂಬ್ಲಿ ಚುನಾವಣೆ ಬಗ್ಗೆ ಚರ್ಚೆ
ಬಿಜೆಪಿಯ 2 ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ರಾಷ್ಟ್ರ ರಾಜಧಾನಿಯಲ್ಲಿ ಜ.16 ಹಾಗೂ 17ರಂದು ನಡೆಯಲಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ, ಜ.20ರಂದು ಕೊನೆಗೊಳ್ಳಲಿರುವ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅವಧಿಯ ವಿಸ್ತರಣೆಯನ್ನು ಸಭೆ ಅನುಮೋದಿಸುವ ಸಾಧ್ಯತೆಯಿದೆ.
ನವದೆಹಲಿ: ಬಿಜೆಪಿಯ 2 ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ರಾಷ್ಟ್ರ ರಾಜಧಾನಿಯಲ್ಲಿ ಜ.16 ಹಾಗೂ 17ರಂದು ನಡೆಯಲಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ, ಜ.20ರಂದು ಕೊನೆಗೊಳ್ಳಲಿರುವ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅವಧಿಯ ವಿಸ್ತರಣೆಯನ್ನು ಸಭೆ ಅನುಮೋದಿಸುವ ಸಾಧ್ಯತೆಯಿದೆ. ಇದೇ ವೇಳೆ, ಕರ್ನಾಟಕ ಸೇರಿ ಈ ವರ್ಷ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಇದರ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕೆಲವು ಸ್ಥಾನಮಾನಗಳಲ್ಲಿ ಬದಲಾವಣೆ ತರುವ ನಿರ್ಣಯಗಳನ್ನು ಸಭೆ ಕೈಗೊಳ್ಳುವ ನಿರೀಕ್ಷೆಯಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದಾರೆ.
ತ್ರಿಪುರಾ(Tripura), ನಾಗಾಲ್ಯಾಂಡ್(Nagaland), ಮೇಘಾಲಯ, ಕರ್ನಾಟಕ(Karnataka), ಮಧ್ಯಪ್ರದೇಶ (Madhya Pradesh), ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ, ಮಿಜೋರಂ ರಾಜ್ಯಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಬಿಜೆಪಿಯ ಸಾಧನೆ ಸಂಸತ್ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ. 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ವರಿಷ್ಠರು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕೆಲವು ಹೊಣೆಗಾರಿಕೆ ವಹಿಸಲಿದ್ದಾರೆ. ಈ ಹಿಂದೆ ಸೋತಿದ್ದ 160 ಸಂಸದೀಯ ಸ್ಥಾನಗಳನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎಂಬುದರ ಕುರಿತು ರಣನೀತಿ ಹೆಣೆವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಗುಜರಾತ್ ಬಳಿಕ ಕರುನಾಡಿನತ್ತ ಚಿತ್ತ: ಕರ್ನಾಟಕ ಗೆಲ್ಲಲು ಪ್ರಧಾನಿ ಮೋದಿಯಿಂದ ರಣತಂತ್ರ ಸಭೆ
ಪಕ್ಷದ ಮೂಲಗಳ ಪ್ರಕಾರ, ಮೋದಿ ಭಾನುವಾರ ಶೋ ನಡೆಸಲಿದ್ದಾರೆ. ನಡ್ಡಾ ಅವರು ಉದ್ಘಾಟನಾ ಭಾಷಣ ಮಾಡಲಿದ್ದರೆ, ಮೋದಿ ಅವರು ಸಮಾರೋಪ ಭಾಷಣ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ರಾಷ್ಟ್ರೀಯ ಕಾರ್ಯಕಾರಿಣಿಯು ಭಾರತದ ಜಿ-20 ಅಧ್ಯಕ್ಷ ಸ್ಥಾನದ ಬಗ್ಗೆ ವಿಶೇಷ ಉಲ್ಲೇಖದೊಂದಿಗೆ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳು ಮತ್ತು ವಿದೇಶಾಂಗ ನೀತಿಯ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸುವ ನಿರೀಕ್ಷೆಯಿದೆ.