ಪಶ್ಚಿಮ ಬಂಗಾಳ ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ ಟಿಎಂಸಿ, ಬಿಜೆಪಿಗೆ ಸೋಲು| ಮೂರೂ ಕ್ಷೇತ್ರಗಳಲ್ಲೀ ದೀದೀ ದರ್ಬಾರ್| ಬಿಜೆಪಿ ದರ್ಪದ ರಾಜಕೀಯಕ್ಕೆ ತಕ್ಕ ಪ್ರತಿಫಲ ಎಂದ ಮಮತಾ

ಕೋಲ್ಕತ್ತಾ[ನ.28]: ಪಶ್ಚಿಮ ಬಂಗಾಳ ವಿಧಾನಸಭಾ ಉಪ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮೂರರ ಪೈಕಿ ಎರಡು ಕ್ಷೇತ್ರಗಳು ಕಳೆದ 20 ವರ್ಷಗಳಿಂದ TMC ಹಿಡಿತದಲ್ಲಿರಲಿಲ್ಲ ಎಂಬುವುದು ಉಲ್ಲೇಖನೀಯ.

Scroll to load tweet…

ಈ ಗೆಲುವಿನ ಬಳಿಕ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ಬಿಜೆಪಿ ತನ್ನ ಅಹಂಕಾರದ ಫಲ ಅನುಭವಿಸುತ್ತಿದೆ. ದರ್ಪದ ರಾಜಕೀಯ ನಡೆಯುವುದಿಲ್ಲ. ಜನರು ಬಿಜೆಪಿಯನ್ನು ತಳ್ಳಿ ಹಾಕಿದ್ದಾರೆ' ಎಂದಿದ್ದಾರೆ. ಟಿಎಂಸಿಯು ಖಡಗ್ಪುರ್ ಸದರ್ ಹಾಗೂ ಕಾಲಿಯಾಗಂಜ್ ಕ್ಷೇತ್ರಗಳಲ್ಲಿ ಬರೋಬ್ಬರಿ 30 ವರ್ಷಗಳ ಬಳಿಕ ಗೆಲುವು ಸಾಧಿಸಿದೆ. ಕಾಲಿಯಾಗಂಜ್ ಕ್ಷೇತ್ರದಲ್ಲಿ ಟಿಎಂಸಿಯ ತಪನ್ ದೇವ್ ಗೆಲುವು ಸಾಧಿಸಿದ್ದಾರೆ. ತಪನ್, ಬಿಜೆಪಿ ಅಭ್ಯರ್ಥಿ ಕಮಲ್ ಚಂದ್ರ ಸರ್ಕಾರ್ ರನ್ನು 2 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ಕರೀಂಪುರ ಕ್ಷೇತ್ರದಲ್ಲೂ ಟಿಎಂಸಿ ಗೆಲುವು ಸಾಧಿಸಿದೆ. 

Scroll to load tweet…

ಪಶ್ಚಿಮ ಬಂಗಾಳದಲ್ಲಿ ನವೆಂಬರ್ 25 ರಂದು ನಡೆದಿದ್ದ 3 ವಿಧಾನಸಭಾ ಕ್ಷೇತ್ರಗಳ(ಕರೀಂಪುರ, ಖಡಗ್ಪುರ್ ಸದರ್ ಹಾಗೂ ಕಾಲಿಯಾಗಂಜ್) ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು, ಗುರುವಾರ ಬೆಳಗ್ಗೆ ಆರಂಭವಾಗಿತ್ತು. ಈ ಮೂರೂ ಕ್ಷೇತ್ರಗಳಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಯನ್ನು ಕ್ಲೀಬನ್ ಸ್ವೀಪ್ ಮಾಡಿದೆ.