Asianet Suvarna News Asianet Suvarna News

ಫೆ.3ರಂದು ಹಾಸನ ಜಿಲ್ಲೆಯ ಎಲ್ಲ ಕ್ಷೇತ್ರದ ಟಿಕೆಟ್‌ ಫೈನಲ್‌: ಎಚ್‌.ಡಿ.ಕುಮಾರಸ್ವಾಮಿ

ಹಾಸನ ಜಿಲ್ಲೆಯ ಪಕ್ಷದ ಟಿಕೆಟ್‌ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಫೆ.3ರಂದು ಜಿಲ್ಲೆಯ ಎಲ್ಲ 7 ಕ್ಷೇತ್ರಗಳ ಟಿಕೆಟ್‌ ಫೈನಲ್‌ ಮಾಡಲಾಗುವುದು. ಫೆ.4ರಂದು ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Ticket final for all Constituencies of Hassan district on February 3 Says HD Kumaraswamy gvd
Author
First Published Feb 1, 2023, 2:10 PM IST

ಸಂಡೂರು (ಫೆ.01): ಹಾಸನ ಜಿಲ್ಲೆಯ ಪಕ್ಷದ ಟಿಕೆಟ್‌ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಫೆ.3ರಂದು ಜಿಲ್ಲೆಯ ಎಲ್ಲ 7 ಕ್ಷೇತ್ರಗಳ ಟಿಕೆಟ್‌ ಫೈನಲ್‌ ಮಾಡಲಾಗುವುದು. ಫೆ.4ರಂದು ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪಂಚರತ್ನ ರಥಯಾತ್ರೆ ಅಂಗವಾಗಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರೆಕುಪ್ಪ ಹಾಗೂ ದಾವಣಗೆರೆ ಜಿಲ್ಲೆ ಕೊಂಡಜ್ಜಿಯಲ್ಲಿ ಮಾತನಾಡಿ, ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಪಕ್ಷದಿಂದ ಒಳ್ಳೆಯ ಅಭ್ಯರ್ಥಿ ಹಾಕಿ. ನಾವು ನಿಮ್ಮ ಋುಣ ತೀರಿಸುತ್ತೇವೆ ಎಂದು ಜನರೇ ಹೇಳುತ್ತಿದ್ದಾರೆ. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೊತೆ ಚರ್ಚಿಸಿ ಫೆ.ರಂದು 40-50 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಫ್ರೀ ಶಿಕ್ಷಣ: ಎಚ್‌ಡಿಕೆ ಭರವಸೆ

ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ?. ಸಿದ್ದರಾಮಯ್ಯ ಯಾಕೆ ವರುಣ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಟ್ಟರು? ಅವರೂ ಮಗನ ರಾಜಕೀಯದ ಬಗ್ಗೆ ಯೋಚಿಸುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ತಮ್ಮ ಮಗನ ರಾಜಕೀಯ ಭವಿಷ್ಯ ಮುಖ್ಯವಾಗಿದೆ. ಯಡಿಯೂರಪ್ಪ ಸಹ ತಮ್ಮ ಮಗನ ಭವಿಷ್ಯ ಕಟ್ಟುವ ಯೋಚನೆಯಲ್ಲಿದ್ದಾರೆ. ಆದರೆ, ಜೆಡಿಎಸ್‌ ವಿಚಾರ ಬಂದಾಗ ಕುಟುಂಬ ರಾಜಕಾರಣ ಎನ್ನುತ್ತಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯವರಿಗೆ ತಮ್ಮ ಮಕ್ಕಳ ಭವಿಷ್ಯದ ಚಿಂತೆಯಾದರೆ, ನಾನು ನಾಡಿನ ಆರು ಕೋಟಿ ಜನರ ಬಗ್ಗೆ ಚಿಂತೆ ಮಾಡುತ್ತಿದ್ದೇನೆ ಎಂದರು.

ಅಧಿಕಾರಕ್ಕಾಗಿ ಸಿದ್ದು ಪಕ್ಷಾಂತರ: ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿ ಆಗಬೇಕೆಂದು ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದರು. ಸಿದ್ದರಾಮಯ್ಯ ಜೆಡಿಎಸ್‌ ಪಕ್ಷದಲ್ಲೇ ಬೆಳೆದವರು, ಈಗ ಅದನ್ನು ಮರೆತಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಕ್ಷೇತ್ರ ಹುಡುಕಾಟ ಮಾಡುವವರಿಗೆ ನಮ್ಮ ಪಕ್ಷದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮನ್ನು ಗುಲಾಮರಂತೆ ಟ್ರೀಟ್‌ ಮಾಡಿದರು. ಅನ್‌ ಕಂಡಿಷನಲ್‌ ಬೆಂಬಲ ಎಂದೇಳಿ, ಕಂಡಿಷನ್‌ ಹಾಕುತ್ತಿದ್ದರು ಎಂದು ಆರೋಪಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವೃದ್ಧರಿಗೆ 5000, ರೈತರಿಗೆ ಎಕರೆಗೆ ವರ್ಷಕ್ಕೊಮ್ಮೆ 10000: ಎಚ್‌ಡಿಕೆ ಘೋಷಣೆ

ಅಂದು ಬಳ್ಳಾರಿ ಗಣಿಗಾರಿಕೆ ಹಗರಣ ಹೊರಬರಲು ನಾನೇ ಕಾರಣ. ನನ್ನ ಬಗ್ಗೆ .150 ಕೋಟಿ ಸಿಡಿ ಬಿಡುಗಡೆ ಮಾಡುವೆ ಎಂದರು. ಅದು ಏನಾಯ್ತು?. ಬಳ್ಳಾರಿ ಜಿಲ್ಲೆಯನ್ನು ಲೂಟಿ ಮಾಡಿ ವಾಮಮಾರ್ಗದ ಮೂಲಕ ಹಣ ಗಳಿಸಿ ನಿಮ್ಮ ಮುಂದೆ ದಾನಶೂರ ಕರ್ಣರಂತೆ ಬರುವ ಬೂಟಾಟಿಕೆ ಶ್ರೀಮಂತರಿಗೆ ಬುದ್ದಿ ಕಲಿಸಿ. ಕಾಂಗ್ರೆಸ್‌, ಬಿಜೆಪಿ ಹಣದ ಹೊಳೆಯನ್ನೇ ಹರಿಸಿದರೂ ಅವರ ಮಾತುಗಳಿಗೆ ಬೆಲೆ ಕೊಡಬೇಡಿ ಎಂದರು.

Follow Us:
Download App:
  • android
  • ios