Asianet Suvarna News Asianet Suvarna News

ನೂತನ ಸಿಎಂ ಸಿದ್ದರಾಮಯ್ಯಗೆ ಬೌದ್ಧ ಧರ್ಮಗುರು ದಲೈಲಾಮಾ ಶುಭಾಶಯ

ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿದ ರಾಜ್ಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಟಿಬೆಟಿಯನ್‌ ಆಧ್ಯಾತ್ಮಿಕ ಗುರು ದಲೈಲಾಮಾ ಶುಭಾಶಯಗಳನ್ನು ತಿಳಿಸಿದ್ದಾರೆ. 

tibetan spiritual leader dalai lama congratulates karnataka cm siddaramaiah gvd
Author
First Published May 21, 2023, 3:20 AM IST

ಧರ್ಮಶಾಲಾ (ಮೇ.21): ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿದ ರಾಜ್ಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಟಿಬೆಟಿಯನ್‌ ಆಧ್ಯಾತ್ಮಿಕ ಗುರು ದಲೈಲಾಮಾ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರ ಬರೈದಿರುವ ದಲೈಲಾಮಾ, ‘ಕಳೆದ ಏಪ್ರಿಲ್‌ಗೆ ನಾವು ಟಿಬೆಟ್‌ನಿಂದ ಬಲವಂತವಾಗಿ ಹೊರದೂಡಲ್ಪಟ್ಟು 64 ವರ್ಷಗಳು ಕಳೆದವು. ಆ ಸಮಯದಲ್ಲಿ ಭಾರತಕ್ಕೆ ಬಂದ ಟಿಬೆಟಿಯನ್ನರ ಪುನರ್ವಸತಿಗೆ ಭೂಮಿ ಒದಗಿಸುವಂತೆ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಆಗ ಟಿಬೆಟಿಯನ್ನರಿಗೆ ಜಾಗ ನೀಡಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ ನಿಜಲಿಂಗಪ್ಪ ಉದಾರತೆಯನ್ನು ತೋರಿದರು. 

ಬಳಿಕ 30,000 ಟಿಬೆಟಿಯನ್ನರು ರಾಜ್ಯದಲ್ಲಿ ನೆಲೆಸಿದರು. ಇದು ವಲಸಿಗ ಟಿಬೆಟಿಯನ್ನರ ಅತಿ ದೊಡ್ಡ ಗುಂಪು. ನಾನು ಕರ್ನಾಟಕ ರಾಜ್ಯದ ಜನೆತೆಗೆ ಕೃತಜ್ಞನಾಗಿರುತ್ತೇನೆ’ ಎಂದು ದಲೈಲಾಮಾ ಬರೆದಿದ್ದಾರೆ. ಅಲ್ಲದೇ ‘ರಾಜ್ಯಕ್ಕೆ ಧನ್ಯವಾದ ತಿಳಿಸಲು 2018ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ. ಅಲ್ಲದೇ ಕರ್ನಾಟಕದಲ್ಲಿ ಐದು ವಸತಿ ಪ್ರದೇಶಗಳನ್ನು ಸ್ಥಾಪಿಸುವುದರೊಂದಿಗೆ ಟಿಬೆಟಿಯನ್‌ ಸಮುದಾಯದ ಪುನರ್ವಸತಿಗೆ ಅವಕಾಶ ಮಾಡಿಕೊಟ್ಟು ನಮ್ಮ ಅನೇಕ ಸನ್ಯಾಸಿಗಳ ಕಲಿಕಾ ಕೇಂದ್ರಗಳನ್ನು ಮರುಸ್ಥಾಪಿಸಲಾಗಿದೆ ಎಂಬುದಕ್ಕೆ ನಾನು ಹೆಮ್ಮೆ ಪಡುತ್ತೇನೆ’ ಎಂದು ಕರ್ನಾಟಕದ ಜನರು ಮತ್ತು ಸರ್ಕಾರಕ್ಕೆ ದಲೈಲಾಮಾ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಡಾ. ಮೋರೆ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಹುಬ್ಬಳ್ಳಿ- ಧಾರವಾಡದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಹೋಳಿಗೆ ಊಟ ನೀಡಲಾಯಿತು. ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ ಉಪ್ಪಿಟ್ಟು, ಪುಲಾವ್‌, ಅನ್ನ ಸಾಂಬಾರ್‌ ಇತ್ಯಾದಿಗಳನ್ನು ಮಾತ್ರ ಜನತೆಗೆ ಪೂರೈಸಲಾಗುತ್ತಿತ್ತು. ಇಂದು ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡದಲ್ಲಿನ ಒಟ್ಟು 17 ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಿಸಿಬಿಸಿ ಹೋಳಿಗೆ ಪೂರೈಸಲಾಯಿತು.

ಶಿವಮೊಗ್ಗ ಶಾಸ​ಕ​ರ ‘ಕೈ​’ ಹಿಡಿ​ಯ​ಲಿಲ್ಲ ಸಿದ್ದ​ರಾ​ಮ​ಯ್ಯ ಸರ್ಕಾರ

ಹೋಳಿಗೆ ವಿತರಿಸಿ ಮಾತನಾಡಿದ ಸಿದ್ದರಾಮಯ್ಯ ಅಭಿಮಾನಿ ಡಾ. ಮಯೂರ ಮೋರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದಿಂದ ಹಾಗೂ ಮೋರೆ ಫೌಂಡೇಶನ್‌ ಅಡಿಯಲ್ಲಿ 17 ಇಂದಿರಾ ಕ್ಯಾಂಟೀನ್‌ಗಳ ಮೂಲಕ ಒಟ್ಟು 9 ಸಾವಿರ ಜನರಿಗೆ ಉಚಿತ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಯಿತು ಎಂದು ತಿಳಿಸಿದರು. ಬಡವರ ಧ್ವನಿಯಾಗಿರುವ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿರುವುದು ನಮಗೆ ಸಂತಸ ತಂದಿದೆ. ಅವರ ಕನಸಿನ ಕೂಸಾಗಿದ್ದ ಇಂದಿರಾ ಕ್ಯಾಂಟೀನ್‌ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಕುಂಟುತ್ತಾ, ಸಮಸ್ಯೆಗಳ ಸರಮಾಲೆಯಲ್ಲಿ ಸಾಗುತ್ತಿತ್ತು. ಈಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ದು, ಇಂದಿರಾ ಕ್ಯಾಂಟೀನ್‌ಗೆ ಮರುಜೀವ ಬಂದಂತಾಗಿದೆ. ಈ ಕ್ಯಾಂಟೀನ್‌ನಲ್ಲಿರುವ ಸಿಬ್ಬಂದಿ ವೇತನ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಈಗ ಪರಿಹಾರ ದೊರೆಯಲಿದೆ ಎಂಬ ನಂಬಿಕೆ ನಮಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Follow Us:
Download App:
  • android
  • ios