Asianet Suvarna News Asianet Suvarna News

ಪ್ರಜಾಪ್ರಭುತ್ವ, ಸಂವಿಧಾನ ಉಳಿಬೇಕಾ ಎಂಬುದಕ್ಕೆ ಉತ್ತರ ಕೊಡುವ ಚುನಾವಣೆ ಇದು: ಸಚಿವ ಪರಮೇಶ್ವರ್

ದೇಶದಲ್ಲಿ ಚುನಾವಣೆ ಹೊಸ ರೀತಿಯಲ್ಲಿ ನಡೆಯುತ್ತಿದೆ. ಇದು ದೇಶದ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆ.ಪ್ರಜಾಪ್ರಭುತ್ವ, ಸಂವಿಧಾನ ಉಳಿಬೇಕಾ ಎಂಬುದಕ್ಕೆ ಉತ್ತರ ಕೊಡುವ ಚುನಾವಣೆ ಇದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. 

This is election that will answer whether democracy and constitution should remain Says Minister Dr G Parameshwar gvd
Author
First Published Apr 14, 2024, 6:11 PM IST

ತುಮಕೂರು (ಏ.14): ದೇಶದಲ್ಲಿ ಚುನಾವಣೆ ಹೊಸ ರೀತಿಯಲ್ಲಿ ನಡೆಯುತ್ತಿದೆ. ಇದು ದೇಶದ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆ.ಪ್ರಜಾಪ್ರಭುತ್ವ, ಸಂವಿಧಾನ ಉಳಿಬೇಕಾ ಎಂಬುದಕ್ಕೆ ಉತ್ತರ ಕೊಡುವ ಚುನಾವಣೆ ಇದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ದೇಶದ ಅಭಿವೃದ್ದಿಗಾಗಿ, ಬಡತನ ನಿರ್ಮೂಲನೆಗಾಗಿ ಚುನಾವಣೆ ನಡೆದಿದೆ. ಹಿಂದೆ ದೇವರು, ಧರ್ಮದ ಹೆಸರಿನಲ್ಲಿ ಚುನಾವಣೆ ನಡೆದಿಲ್ಲ. ಧರ್ಮ ಒಂದು ಕಡೆ ಅಧರ್ಮ‌ ಒಂದು ಕಡೆ ನಿಲ್ಲುವಂತ ಚುನಾವಣೆ ಇದು. 2014 ರಲ್ಲಿ ಅಧಿಕಾರಕ್ಕೆ ಬರುವಾಗ ಬಿಜೆಪಿ ಅನೇಕ‌ ಭರವಸೆ ನೀಡಿದರು. ಈವರೆಗೂ ಯಾವುದೇ ಭರವಸೆ ಈಡೇರಿಸಲಿಲ್ಲ ಎಂದರು.

ಪ್ರತಿಯೊಬ್ಬರಿಗೂ 15 ಲಕ್ಷ ಕೊಡುತ್ತೇವೆ, 2 ಕೋಟಿ ಉದ್ಯೋಗ ಕೊಡ್ತೀವಿ ಅಂತ ಹೇಳಿದ್ರು. ಭರವಸೆ ಈಡೇರಿಸಿಲ್ಲ, ಬಿಜೆಪಿ ಇವತ್ತು ಗ್ಯಾರಂಟಿ ಕೊಡ್ತೀವಿ ಅಂತ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅದೆಲ್ಲಾ ಸುಳ್ಳಿನ ಭರವಸೆಗಳು. ಡಿಸೇಲ್, ಪೆಟ್ರೋಲ್ ಗ್ಯಾಸ್, ಅಗತ್ಯವಸ್ತುಗಳ‌ ಬೆಲೆ ಏರಿಕೆಯಾಗಿದೆ. ಇದೇ ಸಾಧನೆ ಅಂತ ಹೇಳುತ್ತಿದ್ದಾರೆ. ಒಂದು ಕಡೆ ಶ್ರೀರಾಮನ ತೋರಿಸಿಕೊಂಡು ನಾವೆಲ್ಲಾರು ಹಿಂದೂಗಳು ಅಂತ ಬೇರೆ, ಬೇರೆ ಧರ್ಮದವರನ್ನ ಎತ್ತಿ ಕಟ್ಟುತ್ತಿದ್ದಾರೆ. ಸುಳ್ಳು ಹೇಳುವುದು ಮತ್ತೊಂದು ಕಡೆ. ಈ ದೇಶದಲ್ಲಿ ಪಾಠ ಕಲಿಸಬೇಕು. ಬಿಜೆಪಿ ವಿರುದ್ಧ ಜನರು ಮತಹಾಕಲಿದ್ದಾರೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.

ಡಿಕೆಶಿ- ಸಿದ್ದರಾಮಯ್ಯ ಭರವಸೆ ಕೊಟ್ಟರು. ಗ್ಯಾರಂಟೊ ಕೊಡ್ತೀವಿ ಅಂತ ಭರವಸೆ ನೀಡಿದ್ವಿ. ಅದನ್ನು ಪೂರೈಸಿದ್ದೇವೆ. ನಾವು ಸುಳ್ಳು ಹೇಳುವ ಅಗತ್ಯತೆ ಇಲ್ಲ. ಸಜ್ಜನ, ನ್ಯಾಯಾಧೀಶರಾಗಿ ಕೆಲಸ ಮಾಡಿದ್ದ ವ್ಯಕ್ತಿಗೆ ಮತ ಕೇಳುತ್ತಿದ್ದೇವೆ. ಮುದ್ದಹನುಮೇಗೌಡರಿಗೆ ಮತ ಕೇಳುತ್ತಿದ್ದೇವೆ. ಸಂಸತದ ನಲ್ಲಿ ಮುದ್ದಹನುಮಡಗೌಡರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ಐದು ಬಾರಿ ಸಂಸದರಾದವರು ದೆಹಲಿಯಲ್ಲಿ ಮಲಗಿದರು. ಸಂಸತ್ ನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ತುಮಕೂರು ಜನರಿಗೆ ಅನ್ಯಾಯ ಮಾಡಿದ್ರು. ಎಚ್ಎಂಟಿ ಜಾಗ ಉಳಿಸಿ ಇಸ್ರೋ ಸಂಸ್ಥೆ ತಂದವರು ಮುದ್ದಹನುಮೇಗೌಡರು. ಚಂದ್ರಯಾನ 3ಕ್ಕೆ ಕ್ರಯೋಜಿನ್ ಯಂತ್ರ ಇಲ್ಲಿ ತಯಾರಾಗಿದೆ. ಇದಕ್ಕೆ ಮುದ್ದಹನುಮೇಗೌಡರು ಕಾರಣ.‌

Lok Sabha Election 2024: ಈ ದಿನ ನನಗೆ ಅತ್ಯಂತ ದುಃಖ ತಂದ ದಿನ: ಡಿಸಿಎಂ ಡಿ.ಕೆ.ಶಿವಕುಮಾರ್

ಬಿಜೆಪಿಯವರು ಬರುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗೂ ನಮ್ಮ‌ಜಿಲ್ಲೆಗೆ ಸಂಬಂಧ ವಿಲ್ಲ, ನಮ ಜಿಲ್ಲೆಗೆ ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯ ವಿರುದ್ಧ ನಿಂತು ಸೋತರು. ಇಲ್ಲಿ ಕೂಡ ಸೋಲಬೇಕು, ಅವರು ಬೇರೆ ಕಡೆ ನಿಲ್ಲಬೇಕು. ತುರುವೇಕೆರೆ, ಹೆಬ್ಬೂರಿನಲ್ಲಿ ಬಂದು ಕುಮಾರಸ್ವಾಮಿ ಬಂದು ಪ್ರಚಾರ  ಮಾಡಿದ್ರು. ಕಳೆದ ಬಾರಿ ನಮ್ಮ ಜೊತೆಗೆ ಇದ್ದರು. ಮುದ್ದಹನುಮೇಗೌಡರಿ ಟಿಕೆಟ್ ತಪ್ಪಿಸಿದ್ರು. ನಾವು ಮನೆಗೆ ಹೋಗಿ ಕರೆದರೆ ಬರಲ್ಲ ಅಂದ್ರು, ಅದಾ ಬಳಿಕ  ಬಂದು ನಾಮಪತ್ರ ಸಲ್ಲಿಸಿದ್ರು. ಇದೀಗ ಅನ್ಯಾಯ ಮಾಡಿದ್ರು ಅಂತ ಹೇಳ್ತಾರೆ. ಪ್ರತಿ ಸಲ ಕಣ್ಣೀರು ಬರುತ್ತೆ, ಜೇಬಲ್ಲಿ ಅದೇನು ಬಾಟ್ಲು ಇಟ್ಟು ಕೊಂಡಿರುತ್ತಾರೋ ಗೊತ್ತಿಲ್ಲ. ಮಹಿಳೆಯರಿಗೆ ನೀಡಿರುವ ಗ್ಯಾರಂಟಿ ಬಗ್ಗೆ ಏನು ಹೇಳ್ತಾರೀ ನೀವು. ಮಹಿಳೆಯರು ಕೆಟ್ಟು ಹೋಗಿದ್ದಾರೆ ಅಂತ ಹೇಳ್ತಾರೆ.‌ ಒಬ್ಬ ಮುಖ್ಯಮಂತ್ರಿಯಾಗಿದ್ದವರು ನಮ್ಮ‌ಹೆಣ್ಣು ಮಕ್ಕಳಿಗೆ ಹೇಳುವ ಮಾತಾ ಅದು ಎಂದು ಪರಮೇಶ್ವರ್ ಪ್ರಶ್ನಿಸಿದರು.

Follow Us:
Download App:
  • android
  • ios