Asianet Suvarna News Asianet Suvarna News

ಬಿಜೆಪಿಯಲ್ಲಿ ಟಿಕೆಟ್ ಸೇಲ್‌ಗಿಲ್ಲ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ: ಸಿ.ಟಿ.ರವಿ

ಬಿಜೆಪಿಯಲ್ಲಿ ಟಿಕೆಟ್ ಸೇಲ್‌ಗಿಲ್ಲ, ಹಣ ಕೊಟ್ಟು ಟಿಕೆಟ್ ಖರೀದಿ ನಮ್ಮ ಪಕ್ಷದಲ್ಲಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ಈ ವಂಚನೆ ಪ್ರಕರಣದಲ್ಲಿ ಸಂದರ್ಭದ ದುರ್ಬಳಕೆಯಾಗಿದೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ. ಬಿಜೆಪಿಯಲ್ಲಿ ಟಿಕೆಟ್ ಸೇಲ್ ಗಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 

This incident is proof that there is no ticket sale in BJP Says CT Ravi gvd
Author
First Published Sep 16, 2023, 4:23 AM IST

ನವದೆಹಲಿ (ಸೆ.16): ಬಿಜೆಪಿಯಲ್ಲಿ ಟಿಕೆಟ್ ಸೇಲ್‌ಗಿಲ್ಲ, ಹಣ ಕೊಟ್ಟು ಟಿಕೆಟ್ ಖರೀದಿ ನಮ್ಮ ಪಕ್ಷದಲ್ಲಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ವಾಗ್ಮಿ ಚೈತ್ರಾ ಕುಂದಾಪುರ ಅವರು ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಈ ವಂಚನೆ ಪ್ರಕರಣದಲ್ಲಿ ಸಂದರ್ಭದ ದುರ್ಬಳಕೆಯಾಗಿದೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ. ಬಿಜೆಪಿಯಲ್ಲಿ ಟಿಕೆಟ್ ಸೇಲ್ ಗಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 

ಹಣದ ಮೂಲಕ ಟಿಕೆಟ್ ಪಡೆಯುವ ಪ್ರಯತ್ನವನ್ನು ಮುಂದೆ ಯಾರೂ ಮಾಡಬಾರದು. ಮೋಸ ಮಾಡಲೆಂದೇ ದೊಡ್ಡವರ ಹೆಸರು ಬಳಕೆ ಮಾಡಲಾಗುತ್ತಿದೆ ಎಂದರು. ಬಿಜೆಪಿ ದೊಡ್ಡ ಪಕ್ಷ. ಎಲ್ಲ ರೀತಿಯ ಜನರೂ ಇರುತ್ತಾರೆ. ಸಿದ್ಧಾಂತ, ಸೇವೆ, ಜನಪ್ರತಿನಿಧಿಯಾಗಲು ನಮ್ಮಲ್ಲಿ ಬರುತ್ತಾರೆ. ಕೆಲವರು‌ ಸಮಯದ ದುರ್ಬಳಕೆ ‌ಮಾಡಿಕೊಳ್ಳಲು ಪಕ್ಷಕ್ಕೆ ಬರುತ್ತಾರೆ. ನಮ್ಮದು ಚಪ್ಪಲಿ ಹಾಕದವರಿಗೆ ಟಿಕೆಟ್‌ ನೀಡಿದ ಪಕ್ಷ. ಟಿಕೆಟ್‌ ಇದಕ್ಕೂ ಮುನ್ನ ನಮ್ಮಲ್ಲಿ ಟಿಕೆಟ್‌ ವಂಚನೆಯ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಈ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿಲ್ಲ, ಚಿಕ್ಕಮಗಳೂರು ಮೂಲಕ ನಡೆದಿದೆ ಎಂದರು.

ವಿಜಯೇಂದ್ರರಿಗೆ ಅಧ್ಯಕ್ಷ ಸ್ಥಾನ ಬಗ್ಗೆ ನಾಯಕರು ತಿರ್ಮಾನಿಸುತ್ತಾರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳಾಗಿದೆ. ಅಷ್ಟರಲ್ಲಿ ಅಸಮಾಧಾನ ಹೊಮ್ಮಿದೆ. ಜನರು, ರೈತರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಕ್ಷ ನಾಯಕರು ಆಡಿದ ಮಾತು ಅಸಮಾಧಾನಕ್ಕೆ ಸಾಕ್ಷಿಯಾಗಿದೆ. ನಮಗೆ ಈ ಸರ್ಕಾರದ ಬಗ್ಗೆ ಭಯವಿಲ್ಲ. ಜನರೇ ಈ ಬಗ್ಗೆ ಶಾಪ ಹಾಕುತ್ತಿದ್ದಾರೆ, ರೈತರೂ ಶಾಪ ಹಾಕುತ್ತಿದ್ದಾರೆ ಎಂದರು.

ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?

ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಚರ್ಚೆ ಮಾಡುತ್ತಿದ್ದಾರೆ. ಆದರೆ, ನಾಯಕರು ಈ ಬಗ್ಗೆ ತೀರ್ಮಾನಿಸುತ್ತಾರೆ. ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು. ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಇಂದಿರಾ ಗಾಂಧಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಹರಿಪ್ರಸಾದ್‌ ಅವರ ಒಳಕುದಿಯು ಹೊರಕ್ಕೆಬಂದಿದೆ. ಕಾಂಗ್ರೆಸ್​ನಲ್ಲಿನ ಬೆಳವಣಿಗೆಗಳನ್ನು ಸಾಕ್ಷೀಕರಿಸುತ್ತಿದೆ. ರಾಹುಲ್ ಗಾಂಧಿ ಅವರು ವಿದೇಶದಲ್ಲಿದ್ದುಕೊಂಡು ರಾಷ್ಟ್ರದ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios