Karnataka election 2023: ಕಾಂಗ್ರೆಸ್, ಬಿಜೆಪಿ ಕಾಲೆಳೆಯುವ ಆಟ ಜೋರು!
ಚುನಾವಣೆ ಘೋಷಣೆಯಾಗಿದೆ. ಟಿಕೆಟ್‌ಗಾಗಿ ಭಾರೀ ಪೈಪೋಟಿ ಮುಂದುವರಿದಿದೆ. ಕೆಲವು ಆಕಾಂಕ್ಷಿಗಳು ಪಕ್ಷಗಳ ಟಿಕೆಟ್‌ಗಾಗಿ ವಾಮಮಾರ್ಗ ಹಿಡಿದಿದ್ದು, ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಕಾರವಾರ (ಏ.1) : ಚುನಾವಣೆ ಘೋಷಣೆಯಾಗಿದೆ. ಟಿಕೆಟ್‌ಗಾಗಿ ಭಾರೀ ಪೈಪೋಟಿ ಮುಂದುವರಿದಿದೆ. ಕೆಲವು ಆಕಾಂಕ್ಷಿಗಳು ಪಕ್ಷಗಳ ಟಿಕೆಟ್‌ಗಾಗಿ ವಾಮಮಾರ್ಗ ಹಿಡಿದಿದ್ದು, ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್(BJP-Congress) ಎರಡೂ ಪಕ್ಷಗಳಲ್ಲೂ ಟಿಕೆಟ್‌ಗಾಗಿ ಸ್ವಪಕ್ಷೀಯರದ್ದೆ ಕಾಲು ಎಳೆಯುವ ಆಟ ಜೋರಾಗಿದೆ. ಕೆಲವರು ತಮಗೆ ಟಿಕೆಟ್ ನೀಡಿ ಎಂದು ಕೇಳುವುದೇ ಇಲ್ಲ. ತಮ್ಮ ಪಕ್ಷದ ಪ್ರಬಲ ಆಕಾಂಕ್ಷಿ, ಶಾಸಕರು ಅಥವಾ ಮಾಜಿ ಶಾಸಕರಿಗೆ ಟಿಕೆಟ್ ತಪ್ಪಿಸಲು ವಿವಿಧ ರೀತಿಯ ತಂತ್ರ ಕುತಂತ್ರ ನಡೆಸುತ್ತಿದ್ದಾರೆ. ಅಂದರೆ ಹೇಗಾದರೂ ಅವರಿಗೆ ಟಿಕೆಟ್ ಕೈತಪ್ಪಿದರೆ ತನ್ನ ಕಿಸೆಯೊಳಗೆ ಟಿಕೆಟ್ ಬಂದು ಬೀಳಲಿದೆ ಎನ್ನುವುದ ಇವರ ಲೆಕ್ಕಾಚಾರ. ಇದರಿಂದ ಈಗ ಉತ್ತರ ಕನ್ನಡದ ಬಹುತೇಕ ಕ್ಷೇತ್ರಗಳಲ್ಲಿ ಕಾಲೆಳೆಯುವ ಆಟವೇ ಜೋರಾಗಿ ನಡೆಯುತ್ತಿದೆ.
ಉತ್ತರ ಕನ್ನಡ: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ 2000 ಮೀನುಗಾರರು!
ಕೆಲವರು ವಿರೋಧಿ ಪಕ್ಷದೊಂದಿಗೂ ಕದ್ದುಮುಚ್ಚಿ ಶಾಮೀಲಾಗಿ ಸ್ವಪಕ್ಷೀಯ ಅಭ್ಯರ್ಥಿಯ ವಿರುದ್ಧವೇ ಮಸಲತ್ತು ನಡೆಸುತ್ತಿರುವುದೂ ರಹಸ್ಯವೇನಲ್ಲ. ಪ್ರಬಲ ಅಭ್ಯರ್ಥಿಗೆ ಟಿಕೆಟ್ ಕೈತಪ್ಪಿದರೆ ತಾವೇ ಗೆಲ್ಲಬಹುದು ಎಂದು ವಿರೋಧಿ ಪಕ್ಷದವರೂ ಇದಕ್ಕೆ ಕೈಜೋಡಿಸಿ ಅವರ ತೇಜೋವಧೆಗಿಳಿದಿದ್ದಾರೆ.
ಸಾಮಾಜಿಕ ಜಾಲತಾಣ(Social media)ಗಳಲ್ಲಿ ಅವಹೇಳನ ಮಾಡುವುದು, ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಅವರ ತೇಜೋವಧೆ ಮಾಡುವುದು, ಯಾವುದೋ ಪ್ರಕರಣವನ್ನು ಅವರಿಗೆ ತಳುಕು ಹಾಕಿ ವಿಕೃತ ಸಂತೋಷ ಪಡುವುದು ಇಂತಹ ಕಾಲೆಳೆಯುವ ಆಟ ನಡೆಯುತ್ತಿದೆ.
ಭಟ್ಕಳ, ಕುಮಟಾ ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದರೆ, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ಮೇಲೆ ಇಂತಹ ತಂತ್ರಗಳು ಕೊನೆಯಾಗಿವೆ.
ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲೂ ಇಂತಹ ತೆರೆಯ ಮರೆಯ ಆಟಗಾರರು ಇದ್ದಾರೆ. ಕಾಂಗ್ರೆಸ್‌ನಲ್ಲಿ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆಯಾಗಿರುವುದರಿಂದ ಆ ಕ್ಷೇತ್ರಗಳಲ್ಲಿ ಇಂತಹ ಕಿಡಿಗೇಡಿತನಕ್ಕೆ ವಿರಾಮ ಬಿದ್ದಿದೆ.
ಗ್ಯಾಸ್ ದರ ಏರಿಕೆ: ಗ್ರಾಹಕರಿಗೆ ಇನ್ನಷ್ಟು ಶಾಕ್ ನೀಡಲು ಹೋಟೆಲ್ ಸಜ್ಜು!
ಹಾಗಂತ ಇವರು ಪಕ್ಷಕ್ಕಾಗಿ ದುಡಿದವರೂ ಅಲ್ಲ. ಪಕ್ಷಕ್ಕೆ ಇವರ ಸೇವೆ ಏನೂ ಇಲ್ಲ. ಶಾಸಕರು, ಹಾಲಿ ಶಾಸಕರು ಹಾಕಿದ ಅಡಿಪಾಯದ ಮೇಲೆ ಆಸೀನರಾಗಲು ಪ್ರಯತ್ನಿಸುತ್ತಿದ್ದಾರೆ. ತಾವಾಗಿ ಟಿಕೆಟ್ ಕೇಳಿದರೆ ಸಿಗುವುದಿಲ್ಲ ಎನ್ನುವುದೂ ಇವರಿಗೆ ಗೊತ್ತು. ಅದೇ ಕಾರಣಕ್ಕೆ ಪ್ರಬಲ ಆಕಾಂಕ್ಷಿಗಳ ಕಾಲೆಳೆದು ಅಪಪ್ರಚಾರ ಮಾಡಿ ಅವರಿಗೆ ಟಿಕೆಟ್ ತಪ್ಪಿದರೆ ಸಾಕು. ತಮ್ಮದೆ ಹೆಸರು ಮೇಲೆ ಬರಲಿದೆ ಎಂದು ಇಂತಹ ಕೃತ್ಯಕ್ಕಿಳಿದಿದ್ದಾರೆ. ಪಕ್ಷದ ಅಧ್ಯಕ್ಷರು ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕಿದೆ ಎಂಬ ಆಗ್ರಹ ಆಯಾ ಪಕ್ಷಗಳ ಕಾರ್ಯಕರ್ತರಿಂದ ಕೇಳಿಬರುತ್ತಿದೆ.