Asianet Suvarna News Asianet Suvarna News

Karnataka Politics: ಪಾದಯಾತ್ರೆ ವಿರುದ್ಧ ಯಾವುದೇ ಷಡ್ಯಂತ್ರ ನಡೆಸಿಲ್ಲ: ಆರಗ ಜ್ಞಾನೇಂದ್ರ

*  ಕೋವಿಡ್‌ ವೇಳೆ ಪಾದಯಾತ್ರೆ ಮಾಡಿದ್ದೇ ಮಹಾ ತಪ್ಪು
*  ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ಸಿಗರು
*  ಕಾಲ್ನಡಿಗೆ, ಜಾಥಾ ಹೆಸರಲ್ಲಿ ರಾಜಕೀಯ 

There Was No Conspiracy Against Congress Padayatra Says Minister Araga Jnanendra grg
Author
Bengaluru, First Published Jan 15, 2022, 6:56 AM IST

ಬೆಂಗಳೂರು(ಜ.15):  ಕಾಂಗ್ರೆಸ್‌ನ ಪಾದಯಾತ್ರೆಯನ್ನು(Congress Padayatra) ತಡೆಯಲು ಯಾವುದೇ ಷಡ್ಯಂತ್ರ ನಡೆಸಿಲ್ಲ. ಅವರ ವಿಫಲತೆಗೆ ಏನು ಬೇಕಾದರೂ ಮಾತನಾಡಬಹುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra)ವಾಗ್ದಾಳಿ ನಡೆಸಿದ್ದಾರೆ. 

ಕೋವಿಡ್‌(Covid-19) ವೇಳೆ ಪಾದಯಾತ್ರೆ ಮಾಡಿದ್ದೇ ಮಹಾತಪ್ಪು. ರಾಜಕೀಯ(Politics) ಲಾಭಕ್ಕಾಗಿ ಕಾಂಗ್ರೆಸ್‌ ಮುಖಂಡರು ಪಾದಯಾತ್ರೆ ಕೈಗೊಂಡರು. ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಜನರ ಅನುಕೂಲಕ್ಕಿಂತ ಸ್ವಾರ್ಥವೇ ಅದರಲ್ಲಿ ಅಡಗಿತ್ತು. ಮೇಕೆದಾಟು ಯೋಜನೆ(Mekedatu Project) ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಯಾರು ವಿರೋಧ ವ್ಯಕ್ತಪಡಿಸಿದ್ದಾರೆ? ಪಾದಯಾತ್ರೆ ಏಕೆ, ಯಾರ ವಿರುದ್ಧ ಮಾಡಿದರು? ಅಧಿಕಾರದಲ್ಲಿದ್ದಾಗ ಏನೂ ಮಾಡಲಾಗದೆ, ಈಗ ಕಾಲ್ನಡಿಗೆ ಜಾಥಾ ನಡೆಸಿ ಅದರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Mekedatu Padayatre: ಹೈಕೋರ್ಟ್ ಗರಂ, ಗೃಹ ಸಚಿವರಿಂದ ತುರ್ತು ಸಭೆ, ಪಾದಯಾತ್ರೆಗೆ ತಡೆ.?

ಮೇಕೆದಾಟು ಯೋಜನೆಯ ಉದ್ದೇಶವೇ ಜನರಿಗೆ ಅನುಕೂಲವಾಗಬೇಕು ಎಂಬುದು. ಆದರೆ, ಕಾಂಗ್ರೆಸ್ಸಿಗರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆಗೆ ಲಾಭವಾಗುವುದಕ್ಕಿಂತ ತಮಗೆ ಲಾಭವಾಗಲಿ ಎಂಬುದು ಕಾಂಗ್ರೆಸ್ಸಿಗರ ದುರಾಲೋಚನೆಯಾಗಿತ್ತು. ಇದು ನಾಚಿಕೆಗೇಡಿನ ಸಂಗತಿ. ಈ ಹಿಂದೆ ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ ಎಂಬ ನಡಿಗೆಯನ್ನು ಮಾಡಿದರು. ಈ ವೇಳೆ ನೀರು ಹಿಡಿದು ಶಪಥ ಮಾಡಿ ವರ್ಷಕ್ಕೆ 10 ಸಾವಿರ ಕೋಟಿ ರು. ಕೊಡುತ್ತೇವೆ ಎಂದು ವಾಗ್ದಾನ ಮಾಡಿದರು. ಐದು ವರ್ಷ ಇವರ ಪಕ್ಷ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಖರ್ಚು ಮಾಡಿದ್ದ ಕೇವಲ 7.5 ಸಾವಿರ ಕೋಟಿ ರು. ಮಾತ್ರ. ಕಾಂಗ್ರೆಸ್ಸಿಗರಿಗೆ ನೀರಾವರಿ ಯೋಜನೆ(Irrigation Project) ಬಗ್ಗೆ ಬದ್ಧತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಲಾಕ್‌ಡೌನ್‌ ಪ್ರಸ್ತಾವನೆ ಇಲ್ಲ: ಗೃಹ ಸಚಿವ ಆರಗ ಸ್ಪಷ್ಟನೆ

ಲಾಕ್‌ಡೌನ್‌(Lockdown) ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಜನರ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಕೊಟ್ಟು ಲಾಕ್‌ಡೌನ್‌ ಮಾಡುವ ಉದ್ದೇಶವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿದಿನ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚಾಗತ್ತಿವೆ. ಜನರು ಕೋವಿಡ್‌ ಮಾರ್ಗಸೂಚಿಗಳನ್ನು(Covid Guidelines) ಪಾಲನೆ ಮಾಡಬೇಕು. ಜನರಿಗೆ ತೊಂದರೆ ಕೊಟ್ಟು ನಾವು ಲಾಕ್‌ಡೌನ್‌ ಮಾಡಬೇಕಾದ ಅಗತ್ಯವಿಲ್ಲ. ಪ್ರಧಾನಿಯೊಂದಿಗಿನ ಸಭೆಯಲ್ಲಿಯೂ ಸಹ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಮತ್ತು ಎರಡನೇ ಅಲೆ ವೇಳೆಯಲ್ಲಿ ಜನಸಾಮಾನ್ಯರಿಗೆ ಎಷ್ಟುತೊಂದರೆಯಾಗಿದೆ ಎಂಬುದು ನಮಗೂ ಗೊತ್ತು. ಕೆಲವು ಸಂದರ್ಭದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣವಾದ ನಿಯಮಗಳು ಅನಿವಾರ್ಯ ಎಂದರು.

Mekedatu Padayatre: ಪಾದಯಾತ್ರೆ ಲಾಭ ಯಾರಿಗೆ? ಡ್ಯಾಮ್‌ಗಂತೂ ಅಲ್ಲ!

ಲಾಕ್‌ಡೌನ್‌ ಬಗ್ಗೆ ಹೇಳಿ ಉಲ್ಟಾ ಹೊಡೆದ ಸಚಿವ ಜ್ಞಾನೇಂದ್ರ

ಕಾಂಗ್ರೆಸ್‌ ಪಾದಯಾತ್ರೆಯಿಂದ(Congress Padayatra)  ಲಾಕ್‌ಡೌನ್‌(Lockdown) ಆಗುವ ಪರಿಸ್ಥಿತಿ ಎದುರಾಗಬಹುದು, ಲಾಕ್‌ಡೌನ್‌ ಜಾರಿಯಾದರೆ ಕಾಂಗ್ರೆಸ್‌(Coongress) ನಾಯಕರೇ ಕಾರಣ ಎಂದು ಹೇಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರು ಕೆಲ ಸಮಯದ ಬಳಿಕ ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಲಾಕ್‌ಡೌನ್‌ ಮಾಡುವುದೂ ಇಲ್ಲ ಎಂದು ಉಲ್ಟಾಹೊಡೆದಿದ್ದರು.

ಕೋವಿಡ್‌(Covid19) ಸೋಂಕನ್ನು ತಡೆಗಟ್ಟಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ಕಳೆದ ಹಲವು ದಿನಗಳಿಂದ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಕೈಮೀರಿದರೆ ಲಾಕ್‌ಡೌನ್‌ ಅನಿವಾರ್ಯ. ಪಾದಯಾತ್ರೆಯಿಂದ ಲಾಕ್‌ಡೌನ್‌ ಜಾರಿಯಾದರೆ ಕಾಂಗ್ರೆಸ್‌ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.
 

Follow Us:
Download App:
  • android
  • ios