Asianet Suvarna News Asianet Suvarna News

ಬಿಜೆಪಿಗೆ ಹೋಗುವ ಮಾತೇ ಇಲ್ಲ: ಶಾಸಕ ರಾಜು ಕಾಗೆ

ನನ್ನ ಆಪ್ತ ಸ್ನೇಹಿತ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ರಾಜು ಕಾಗೆ ಸ್ಪಷ್ಟ ಪಡಿಸಿದರು.
 

There is no talk of going to BJP Says MLA Raju Kage gvd
Author
First Published Feb 11, 2024, 8:35 AM IST

ಕಾಗವಾಡ (ಫೆ.11): ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ ಅವರು ಪುನಃ ಬಿಜೆಪಿ ಮರಳಿದ ಬೆನ್ನಲ್ಲೆ ರಾಜಕೀಯ ವಲಯದಲ್ಲಿ ಹಲವು ಉಹಾಪೋಹಗಳು ಸೃಷ್ಠಿಯಾಗಿವೆ. ನನ್ನ ಆಪ್ತ ಸ್ನೇಹಿತ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ರಾಜು ಕಾಗೆ ಸ್ಪಷ್ಟ ಪಡಿಸಿದರು.

ಅವರು ತಾಲೂಕಿನ ಉಗಾರ ಖುರ್ದ ಪುರಸಭೆಯ ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ ಅನುದಾನದಡಿ, 15ನೇ ಹಣಕಾಸು ಯೋಜನೆಯ ಸ್ಚಚ್ಛ ಭಾರತ ಮಿಷನ್‌ದಡಿ ಮಂಜೂರಾದ ₹2.53 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ವಾರ್ಡಗಳಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಆ ಪಕ್ಷ ಬೇಡವೆಂದೇ ಬಿಟ್ಟು ಬಂದಿರುವಾಗ ಮರಳಿ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಕೇವಲ ಮಾಧ್ಯಮದವರ ಸೃಷ್ಟಿ. ಕೆಲವು ಸುದ್ದಿ ವಾಹಿನಿಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವುದಕ್ಕೆ ಇಂತಹ ಸುದ್ದಿಗಳನ್ನು ಬಿತ್ತರಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ನಿರ್ಮಾಣ, ಸಿಸಿ ರಸ್ತೆ, ಫೇವರ್ಸ್‌ ಅಳವಡಿಕೆ, ಒಳಚರಂಡಿ, ಬೋರವೆಲ್ ಕೊರೆಸುವುದು, ಜಲಕುಂಭ ನಿರ್ಮಾಣ, ಮೋಟಾರ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರರು ಗುಣಮಟ್ಟದಿಂದ ಹಾಗೂ ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ರಾಜ್ಯ ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡುತ್ತಿದ್ದು, ಉಗಾರ ಖುರ್ದ ಪಟ್ಟಣದ ಅಭಿವೃದ್ಧಿಗಾಗಿ ಸುಮಾರು ₹2.53 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಸಚಿವ ಎಚ್‌.ಕೆ.ಪಾಟೀಲ್‌ಗೆ ತಾಕತ್ತಿದ್ದರೆ ಬಂಧಿಸಲಿ: ಕೆ.ಎಸ್‌.ಈಶ್ವರಪ್ಪ

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸುನೀಲ ಬಬಲಾದಿ, ಮುಖಂಡರಾದ ಶಂಕರ ವಾಘಮೋಡೆ, ವಸಂತ ಖೋತ, ಗಂಗಾಧರ, ಜೋರಾಪೂರ ವಲ್ಲಭ ಕಾಗೆ, ಪ್ರಫುಲ್ ಥೋರೂಸೆ, ಈಶ್ವರ ಕಾಂಬಳೆ, ರಾಘವೇಂದ್ರ ಜಾಯಗೊಂಡೆ, ಅಮರ ಜಗತಾಪ, ವಸಂತ ಖೋತ, ಪ್ರಕಾಶ ಥೋರೂಸೆ, ರಾಜು ಗುರುವ, ಹರುಣ ಮುಲ್ಲಾ, ವಿಜಯ ಅಸೋದೆ, ದೀಲಿಪ ಹುಲ್ಲೋಳ್ಳಿ, ರಸೂಲ ನದಾಫ, ಬಸ್ಸು ಸಾಂಗಾವೆ, ಸೋನಾಬಾಯಿ ಸಾಂಗಾವೆ, ಶೈಲಾ ಮಾದರ, ರಾಜು ಪಾಟೀಲ, ಬಸವರಾಜ ಪಾಟೀಲ, ಪ್ರತಾಪ ಜತ್ರಾಟೆ, ವಿಕ್ರಂ ಧನಗರ, ರುಸ್ತುಂ ಸುತಾರ, ರವಿ ರಾಜಮಾನೆ, ಗುತ್ತಿಗೆದಾರರಾದ ಸಂದೀಪ ಖರಾಡೆ, ಚಂದ್ರಕಾಂತ ಕಾಂಬಳೆ, ಶ್ರೀಶೈಲ ಪಾಟೀಲ, ಅಜೀತ ಭೋಸಲೆ, ಹುಸೆನ ನದಾಫ, ಸೇರಿದಂತೆ ಅನೇಕರು ಇದ್ದರು.

Follow Us:
Download App:
  • android
  • ios