ಆಪರೇಷನ್ ಹಸ್ತದ ಅವಶ್ಯಕತೆಯೇ ನಮಗೆ ಇಲ್ಲ. ಬೇರೆ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಪಕ್ಷ ಆಮಿಶ ಒಡ್ಡುವ ಪ್ರಮೇಯವೇ ಇಲ್ಲ. ನಮ್ಮಲ್ಲೇ 138 ಶಾಸಕರಿದ್ದಾರೆ. ನಮಗೆ ಬೇರೆ ಪಕ್ಷಗಳ ಶಾಸಕರ ಕರೆ ತರುವ, ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ (ಜ.11): ಆಪರೇಷನ್ ಹಸ್ತದ ಅವಶ್ಯಕತೆಯೇ ನಮಗೆ ಇಲ್ಲ. ಬೇರೆ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಪಕ್ಷ ಆಮಿಶ ಒಡ್ಡುವ ಪ್ರಮೇಯವೇ ಇಲ್ಲ. ನಮ್ಮಲ್ಲೇ 138 ಶಾಸಕರಿದ್ದಾರೆ. ನಮಗೆ ಬೇರೆ ಪಕ್ಷಗಳ ಶಾಸಕರ ಕರೆ ತರುವ, ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿಯೇ ಮಂತ್ರಿಯಾಗುವವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಬೇರೆ ಪಕ್ಷದವರ ಕರೆ ತಂದು, ಬೇರೆ ಪಕ್ಷದವರ ಮಂತ್ರಿ ಮಾಡುವ ಅವಶ್ಯಕತೆಯಾದರೂ ನಮಗೆ ಏನಿದೆ? ಅನ್ಯ ಪಕ್ಷದವರನ್ನು ಕಾಂಗ್ರೆಸ್ ಗೆ ಕರೆ ತರುವ ಯಾವುದೇ ಪ್ರಯತ್ನ ಆಗಿಲ್ಲ, ಆಗುವುದೂ ಇಲ್ಲ ಎಂದು ತಿಳಿಸಿದರು.
ನವದೆಹಲಿಯಲ್ಲಿ 11ರಂದು ಎಲ್ಲ ಸಚಿವರ ಸಭೆ: ನವದೆಹಲಿಯಲ್ಲಿ ಜ.11ರಂದು ಸಚಿವರ ಸಭೆ ಇದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ದೆಹಲಿ ಸಭೆಗೆ ಹೋಗುತ್ತಿದ್ದೇವೆ. ಲೋಕಸಭೆ ಚುನಾವಣೆ ಕುರಿತು ಅಂದು ಚರ್ಚೆಯಾಗಲಿದೆ ಎಂದು ಸಚಿವ ಕೆ.ಎನ್.ರಾಜಣ್ಣ ಮಾಹಿತಿ ನೀಡಿದರು.
ಸಚಿವರ ಬಾಯಿಗೆ ಹೈಕಮಾಂಡ್ ಬೀಗ?: ಮೂರು ಡಿಸಿಎಂ ಹುದ್ದೆ ಸೃಷ್ಟಿಗಾಗಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮೇಲೆ ಒತ್ತಡ ಹಾಕಿದ ಸಚಿವರಿಗೆ ಮಂಗಳವಾರ ಹೈಕಮಾಂಡ್‌ನಿಂದ ಕರೆ ಬಂದಿದ್ದು, ಚುನಾವಣೆ ಸಾಮೀಪ್ಯವಿರುವಾಗ ಗೊಂದಲ ಹುಟ್ಟುಹಾಕದಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದ ಏಳು ಸಚಿವರ ಪೈಕಿ ಮೂರ್ನಾಲ್ಕು ಸಚಿವರು ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆ ಮಂಗಳವಾರ ಬಹಿರಂಗ ಹೇಳಿಕೆ ನೀಡಿದ್ದರು.
ಶ್ರೀರಾಮನ ಪೇಟೆಂಟ್ ಅನ್ನು ಬಿಜೆಪಿಗೆ ಕೊಟ್ಟಿದ್ದೆ ಕಾಂಗ್ರೆಸ್: ಸಂಸದ ಪ್ರತಾಪ್ ಸಿಂಹ
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸದರಿ ಸಚಿವರಿಗೆ ದೂರವಾಣಿ ಕರೆ ಮಾಡಿ ಇಂತಹ ಗೊಂದಲ ಹುಟ್ಟುಹಾಕದಂತೆ ಸೂಚಿಸಿದರು ಎನ್ನಲಾಗಿದೆ. ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಡಿಸಿಎಂ ಹುದ್ದೆ ಸೃಷ್ಟಿಗಾಗಿ ಬೇಡಿಕೆ ಮಂಡಿಸಿದ್ದ ಸಚಿವರ ಪೈಕಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಾಗೂ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಡಿಸಿಎಂ ಹುದ್ದೆ ಬೇಡಿಕೆಯಿಟ್ಟಿರುವುದಾಗಿ ಸ್ಪಷ್ಟಪಡಿಸಿದ್ದರು.
