ನಾನು ಕ್ರಿಶ್ಚಿಯನ್, ಧರ್ಮಸ್ಥಳದಲ್ಲಿ ಆಣೆ ಮಾಡಿದ್ರೆ ನಂಬ್ತಾರಾ?: ಸಚಿವ ಕೆ.ಜೆ.ಜಾರ್ಜ್
ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಹಿಮಾಚಲ ಪ್ರದೇಶದಿಂದಲೂ ವಿದ್ಯುತ್ ಖರೀದಿ ಮಾಡಲಾಗುತ್ತದೆ. ನಾವು ಯಾವುದೇ ಖಾಸಗಿ ಸಂಸ್ಥೆಗಳಿಂದ ವಿದ್ಯುತ್ ಖರೀದಿ ಮಾಡುತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನವದೆಹಲಿ (ಅ.27): ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಹಿಮಾಚಲ ಪ್ರದೇಶದಿಂದಲೂ ವಿದ್ಯುತ್ ಖರೀದಿ ಮಾಡಲಾಗುತ್ತದೆ. ನಾವು ಯಾವುದೇ ಖಾಸಗಿ ಸಂಸ್ಥೆಗಳಿಂದ ವಿದ್ಯುತ್ ಖರೀದಿ ಮಾಡುತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೃಹಜ್ಯೋತಿಗೆ ನಿತ್ಯ ಸರಾಸರಿ 43 ಮಿಲಿಯನ್ ಯುನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳಿಗೆ 750 ಕೋಟಿ ರುಪಾಯಿ ವೆಚ್ಚ ಮಾಡಲಾಗುತ್ತಿದೆ. ಕೋಜನರೇಷನ್ ನಿಂದ 600 ಮೆಗಾವ್ಯಾಟ್ ವಿದ್ಯುತ್ ನಿರೀಕ್ಷೆ ಮಾಡಲಾಗುತ್ತಿದೆ ಎಂದರು.
ಕೃತಕ ಅಭಾವ ಸೃಷ್ಟಿ ಮಾಡಿ, ವಿದ್ಯುತ್ ಖರೀದಿ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಇದೇ ವೇಳೆ ಪ್ರತಿಕ್ರಯಿಸಿದ ಸಚಿವರು, ಇದು ಆಧಾರ ರಹಿತ ಆರೋಪ. ಕುಮಾರಸ್ವಾಮಿ ಅವರಿಗೆ ಮಾಹಿತಿ ಕೊರತೆ ಇದೆ. ನಿಮಗೆ ಅನುಮಾನ ಇದ್ದರೆ ನಿಮ್ಮ ಸಹೋದರ ಎಚ್.ಡಿ. ರೇವಣ್ಣ ಅವರನ್ನು ಕೇಳಿ. ನಿಮಗೆ ಯಾರೋ ದಾರಿ ತಪ್ಪಿಸಿರಬಹುದು. ಸೆಂಟ್ರಲ್ ಗ್ರಿಡ್ ನಿಂದ ಇಂಧನ ಖರೀದಿ ಮಾಡಲಾಗುತ್ತದೆ. ಬೇಕಿದ್ದರೆ ಮಾಹಿತಿ ನೀಡಲು ಸಿದ್ಧ ಎಂದರು.
ನನಗೆ 61 ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು: ಹುಲಿ ಉಗುರು ಸಂಕಟ ಬಿಚ್ಚಿಟ್ಟ ನಟ ಜಗ್ಗೇಶ್!
ನಾನು ಕ್ರಿಶ್ಚಿಯನ್, ಧರ್ಮಸ್ಥಳದಲ್ಲಿ ಆಣೆ ಮಾಡಿದ್ರೆ ನಂಬ್ತಾರಾ?: ನಾನು ಕುಮಾರಸ್ವಾಮಿ ಸಂಪುಟದಲ್ಲೂ ಮಂತ್ರಿಯಾಗಿದ್ದೆ. ನನ್ನ ಅವಧಿಯಲ್ಲಿ ನಾನು ವರ್ಗಾವಣೆ, ಪ್ರಮೋಷನ್ ಗೆ ಹಣ ಪಡೆದಿಲ್ಲ. ನನ್ನ ಗಮನಕ್ಕೆ ಬಾರದೆ ಆಗುವ ಘಟನೆಗಳಿದ್ದರೆ ನಾನು ಕ್ರಮ ಕೈಗೊಳ್ಳುವೆ. ಸರ್ಕಾರದ ಮೇಲಿನ ಆಪಾದನೆಗಳ ಕುರಿತು ದಾಖಲೆಗಳಿದ್ದರೆ ನೀಡಲಿ. ಆ ದಾಖಲೆ ಆಧಾರದ ಮೇಲೆ ತನಿಖೆ ಮಾಡಬಹುದು. ನಾನೊಬ್ಬ ಕ್ರಿಶ್ಚಿಯನ್ ನಾನು ಧರ್ಮಸ್ಥಳದಲ್ಲಿ ಆಣೆ ಮಾಡಿದರೆ ನಂಬುತ್ತಾರಾ?. ನಾನು ಎಲ್ಲ ಧರ್ಮದ ಮೇಲೆ ನಂಬಿಕೆ ಇಟ್ಟಿದ್ದೇನೆ. ನನ್ನ ಆತ್ಮ ಸಾಕ್ಷೀಯೇ ನನ್ನ ದೇವರು. ಆತ್ಮ ಸಾಕ್ಷಿಯಾಗಿ ನಾನು ಯಾವುದಕ್ಕೂ ಹಣ ಪಡೆದಿಲ್ಲ ಎಂದರು.