Asianet Suvarna News Asianet Suvarna News

ಕಾಂಗ್ರೆಸ್ ಶಾಸಕರಲ್ಲಿ ಅತೃಪ್ತಿ; ಇದು ಬಿಜೆಪಿಗರು ಸೃಷ್ಟಿಸಿದ ಕಟ್ಟುಕಥೆ: ಸಚಿವ ವೈದ್ಯ ಕಿಡಿ

ಗ್ಯಾರಂಟಿ ಯೋಜನೆಗಳ ಜಾರಿ ಜತೆಗೆ ರಾಜ್ಯದ ಅಭಿವೃದ್ಧಿಯನ್ನೂ ಸರ್ಕಾರ ಮಾಡಲಿದೆ ಎಂದಿರುವ ಸಚಿವ ಮಂಕಾಳ ವೈದ್ಯ, ಕಾಂಗ್ರೆಸ್‌ ಶಾಸಕರು ಅತೃಪ್ತರಾಗಿದ್ದಾರೆನ್ನುವುದು ಬಿಜೆಪಿಗರ ಕಟ್ಟುಕಥೆ ಎಂದು ಕಿಡಿಕಾರಿದ್ದಾರೆ.

There is no dissatisfaction among Congress MLAs says minister mankalu vaidya at dharwad rav
Author
First Published Jul 30, 2023, 6:25 AM IST

ಭಟ್ಕಳ (ಜು.30) :  ಗ್ಯಾರಂಟಿ ಯೋಜನೆಗಳ ಜಾರಿ ಜತೆಗೆ ರಾಜ್ಯದ ಅಭಿವೃದ್ಧಿಯನ್ನೂ ಸರ್ಕಾರ ಮಾಡಲಿದೆ ಎಂದಿರುವ ಸಚಿವ ಮಂಕಾಳ ವೈದ್ಯ, ಕಾಂಗ್ರೆಸ್‌ ಶಾಸಕರು ಅತೃಪ್ತರಾಗಿದ್ದಾರೆನ್ನುವುದು ಬಿಜೆಪಿಗರ ಕಟ್ಟುಕಥೆ ಎಂದು ಕಿಡಿಕಾರಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಶಾಸಕರಿಗೂ ಸರ್ಕಾರದ ಮೇಲೆ ಅಸಮಾಧಾನವಾಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಬಿಜೆಪಿಗರ ಆರೋಪ ಮಾತ್ರ. ಬಿಜೆಪಿಗರು ಸಣ್ಣ-ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಅವರು ರಾಜ್ಯವನ್ನು ದಿವಾಳಿ ಮಾಡಿಟ್ಟು ಹೋಗಿದ್ದು ಇದನ್ನು ನಮ್ಮ ಸರ್ಕಾರ ಸರಿಪಡಿಸುವ ಕೆಲಸ ಮಾಡುತ್ತಿದೆ ಎಂದರು.

 

ದೇವಸ್ಥಾನಗಳು ಸಮಾಜದ ಆಸ್ತಿ: ಸಚಿವ ಮಂಕಾಳು ವೈದ್ಯ

ಶಾಸಕರು ಸ್ಥಳೀಯವಾಗಿ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಣಾಳಿಕೆಯಲ್ಲಿ ತಿಳಿಸಿದ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಹೆಚ್ಚು ಗಮನ ಹರಿಸುತ್ತಿದ್ದಾರೆ. ಜತೆಗೆ ರಾಜ್ಯದ ಅಭಿವೃದ್ಧಿಯ ಬಗ್ಗೆಯೂ ಆದ್ಯತೆ ನೀಡಿದ್ದಾರೆ. ಹಂತ-ಹಂತವಾಗಿ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. ತಮ್ಮ ಅಧಿಕಾರದವಧಿಯಲ್ಲಿ ಏನೂ ಮಾಡದ ಬಿಜೆಪಿ ಇದೀಗ ಹತಾಶವಾಗಿ ಕಾಂಗ್ರೆಸ್‌ ಶಾಸಕರು ಅತೃಪ್ತರಾಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ ಎಂದರು.

ಕಾರವಾರದ ಸುರಂಗ ಮಾರ್ಗ ಸೋರುತ್ತಿದ್ದು ಸರಿಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಭಟ್ಕಳ ಹೆದ್ದಾರಿಯಲ್ಲಿ ನೀರು ನಿಲ್ಲುವ ಮತ್ತಿತರ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು.

ಟೋಲ್‌ ವಸೂಲಿ ಪ್ರಶ್ನೆಗೆ, ಇದು ಕೇಂದ್ರದ ವ್ಯಾಪ್ತಿಗೆ ಬರಲಿದ್ದು, ಈಗಾಗಲೆ ಮೂರು ವರ್ಷದಿಂದ ಟೋಲ್‌ ವಸೂಲಿ ಮಾಡುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಮತ್ತೆಷ್ಟುವರ್ಷ ಬೇಕು ಎನ್ನುವುದರ ಕುರಿತಂತೆ ವಿವರದ ಮಾಹಿತಿ ಕೇಳಲಾಗಿದೆ ಎಂದರು.

 

'ಈ ದೇಶದ ಕಾನೂನೇ ಸರಿಯಿಲ್ಲ' ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ದಕ್ಕೆ ಸಚಿವ ವೈದ್ಯ ಪ್ರತಿಕ್ರಿಯೆ

Follow Us:
Download App:
  • android
  • ios