ಕರ್ನಾಟಕದಲ್ಲಿ ಅಭಿವೃದ್ಧಿಯೇ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಈ ಸಲ ಮಂತ್ರಿಗಳಿಗೂ ಹೆಚ್ಚಿನ ಅನುದಾನ ಸಿಗುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತೀವ್ರ ಕಿಡಿಕಾರಿದ್ದಾರೆ.

There is no development in Karnataka Says Union Minister Pralhad Joshi gvd

ಹುಬ್ಬಳ್ಳಿ (ಜು.28): ಈ ಸಲ ಮಂತ್ರಿಗಳಿಗೂ ಹೆಚ್ಚಿನ ಅನುದಾನ ಸಿಗುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತೀವ್ರ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಯೇ ಇಲ್ಲ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಅಧಿಕಾರದ ಹಸಿವಿನಿಂದ ಆಶ್ವಾಸನೆ ಕೊಟ್ಟು ಅವುಗಳನ್ನು ಪೂರೈಸಲೂ ಆಗದೆ ಅಭಿವೃದ್ಧಿಗೆ ಹಣ ಇಲ್ಲ ಎಂದು ಉಪ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಈ ಸರ್ಕಾರಕ್ಕೆ ದೂರದೃಷ್ಟಿಯೂ ಇಲ್ಲ, ಜವಾಬ್ದಾರಿಯೂ ಇಲ್ಲ ಎಂದಿದ್ದಾರೆ.

17 ಸಾವಿರ ಕೋಟಿ ಬಿಡುಗಡೆ: ಈ ಮಧ್ಯೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 14ನೇ ಕಂತಿನ ದೇಶದ 8.5 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ 17 ಸಾವಿರ ಕೋಟಿ ಬಿಡುಗಡೆಯಾಗಿದೆ. ರಾಜ್ಯದ ಒಟ್ಟು 50.45ಲಕ್ಷ ರೈತರಿಗೆ 1,009 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಧಾರವಾಡ ಜಿಲ್ಲೆಯ 1.08 ಲಕ್ಷ ರೈತರ ಖಾತೆಗೆ .21.65 ಕೋಟಿ ಜಮೆಯಾಗಿದೆ ಎಂದು ಜೋಶಿ ತಿಳಿಸಿದ್ದಾರೆ. ಇದೇ ಸಮಯದಲ್ಲಿ ರೈತರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ದೊರಕುವ 1.25 ಲಕ್ಷ ಪ್ರಧಾನಮಂತ್ರಿ ಕಿಸಾನ್‌ ಸಮೃದ್ಧಿ ಕೇಂದ್ರಗಳನ್ನು ಪ್ರಧಾನಿ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 225 ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.

ಬೆಳೆಹಾನಿ ವೈಜ್ಞಾನಿಕ ವರದಿ ಸಲ್ಲಿ​ಸಲು ಸೂಚನೆ: ಸಚಿ​ವ ಮಧು ಬಂಗಾರಪ್ಪ

ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 784 ಕೋಟಿ ಅನುದಾನ: ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯ ಸೇತುಬಂಧನ್‌ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ .784 ಕೋಟಿ ವೆಚ್ಚದಲ್ಲಿ 22 ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಈ ಅನುಮೋದನೆಯಲ್ಲಿ ನನ್ನ ಲೋಕಸಭಾ ಕ್ಷೇತ್ರದ 2 ಕಾಮಗಾರಿಗಳೂ ಸೇರಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿ, ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಬಳಿ ಸಂಭವಿಸುತ್ತಿರುವ ಅಪಘಾತ ತಡೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. 

ಹಿಂದೆ ನಾನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಲೋಕಸಭಾ ಕ್ಷೇತ್ರದ ಅಣ್ಣಿಗೇರಿ ಪಟ್ಟಣದ ರೈಲ್ವೆ ಗೇಟ್‌ ನಂ. 19ಕ್ಕೆ ಮೇಲ್ಸೇತುವೆ ಹಾಗೂ ಅಳ್ನಾವರ ಪಟ್ಟಣದ ರೈಲ್ವೆ ಅಂಡರ ಬ್ರಿಡ್ಜ್‌ ತುಂಬಾ ಕಿರಿದಾಗಿದ್ದು, ಅದರ ಅಗಲೀಕರಣಕ್ಕೆ ವಿನಂತಿಸಿದ್ದೆ. ನನ್ನ ವಿನಂತಿಯ ಮೇರೆಗೆ ಕೇಂದ್ರ ಸಚಿವರು ಈ ಎರಡೂ ಕಾಮಗಾರಿಗಳಿಗೆ ತಲಾ .30 ಕೋಟಿಯಂತೆ ಒಟ್ಟು .60 ಕೋಟಿ ಅನುದಾನ ಒದಗಿಸಿದ್ದಾರೆ. ಇದರಿಂದ ಖಾನಾಪೂರ-ಅಳ್ನಾವರ-ಹಳಿಯಾಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸಂಪರ್ಕ ವ್ಯವಸ್ಥೆ ಸುಗಮಗೊಳ್ಳಲಿದೆ. ಇದರ ಜೊತೆಗೆ ಅಳ್ನಾವರ ಪಟ್ಟಣದ ನಾಗರಿಕರಿಗೆ ದಿನನಿತ್ಯದ ಸಂಚಾರದಲ್ಲಿ ಆಗುತ್ತಿದ್ದ ಅಡೆತಡೆ ನಿವಾರಣೆಯಾಗಲಿದೆ.

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್‌ ಪಡೆಯಲ್ಲ: ಸಚಿವ ಎಂ.ಬಿ.ಪಾಟೀಲ್‌

ಹಾಗೆಯೇ ಅಣ್ಣಿಗೇರಿ ಪಟ್ಟಣದ ಓವರ್‌ ಬ್ರಿಡ್ಜ್‌ ನಿರ್ಮಾಣದಿಂದ ಅಣ್ಣಿಗೇರಿ- ಹಳ್ಳಕೇರಿ- ಇಬ್ರಾಹಿಂಪೂರ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ರೈಲ್ವೆ ಗೇಟ್‌ ರಹಿತವಾಗಿ ಯಾವುದೇ ಅಡತಡೆ ಇಲ್ಲದೇ ಸಂಚರಿಸಬಹುದು. ಈ ಎರಡು ಬೇಡಿಕೆಗಳು ಬಹುದಿನಗಳಿಂದ ಇದ್ದು, ಅವುಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮಾಡಿದ್ದು, 24 ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವಂತೆ ರಾಜ್ಯದ ಲೋಕೋಪಯೋಗಿ ಇಲಾಖೆಯ ರಾಷಿತ್ರೕಯ ಹೆದ್ದಾರಿ ವಿಭಾಗಕ್ಕೆ ತಿಳಿಸಲಾಗಿದೆ. ಈ ಕಾಮಗಾರಿಯನ್ನು ಕೈಗೊಳ್ಳಲು ಕೂಡಲೇ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಲೋಕೋಪಯೋಗಿ ಸಚಿವರಿಗೆ ಕೋರುತ್ತೇನೆ ಎಂದು ಸಚಿವ ಜೋಶಿಯವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios