Asianet Suvarna News Asianet Suvarna News

ಉ.ಪ್ರ. ಮಾದರಿಯಲ್ಲಿ ರಾಜ್ಯದಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ ಇಲ್ಲ; ಆರಗ

  • ಉ.ಪ್ರ. ಮಾದರಿಯಲ್ಲಿರಾಜ್ಯದಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ ಇಲ್ಲ
  •  ಕೋಮುಗಲಭೆಕೋರರ ಆಸ್ತಿ ಧ್ವಂಸ ಮಾಡಲ್ಲ
  •  ಒಳಾಡಳಿತ ಇಲಾಖೆ ಪ್ರಸ್ತಾವ ನೀಡಿಲ್ಲ: ಆರಗ
  • ಗಲಭೆ ತಡೆಗೆ ಹಲವು ಕ್ರಮ
There is no bulldozer operation in the Uttar Pradesh model says aragajnanendra rav
Author
First Published Sep 16, 2022, 5:10 AM IST

ವಿಧಾನ ಪರಿಷತ್‌ (ಸೆ.16) : ಕೋಮು ಗಲಭೆಗೆ ಕಾರಣರಾದ ವ್ಯಕ್ತಿಗಳು ಹೊಂದಿರುವ ಅನಧಿಕೃತ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಅವುಗಳನ್ನು ನೆಲಸಮ ಮಾಡುವ ಸಂಬಂಧ ಪ್ರಸ್ತುತ ಒಳಾಡಳಿತ ಇಲಾಖೆಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ತನ್ಮೂಲಕ ರಾಜ್ಯದಲ್ಲಿ ಉತ್ತರ ಪ್ರದೇಶದ ರೀತಿಯಲ್ಲಿ ಗಲಭೆಕೋರರ ಅಕ್ರಮ ಆಸ್ತಿಗಳನ್ನು ಬುಲ್ಡೋಜರ್‌ ಹರಿಸಿ ನೆಲಸಮ ಮಾಡುವಂತಹ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಪಿಎಸ್‌ಐ ಕೇಸಲ್ಲಿ ಆರಗ ಕೂಡ ಜೈಲಿಗೆ ಹೋಗ್ತಾರೆ: ಹರಿಪ್ರಸಾದ್‌

ಬಿಜೆಪಿಯ ಎನ್‌.ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಸಂಘಟನೆಗಳು ಬೇರೆ ಬೇರೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಅಂತಹ ಸಂಘಟನೆಗಳ ಸದಸ್ಯರು ನಮ್ಮ ರಾಜ್ಯಕ್ಕೆ ಬರುವ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಕೋಮು ಸಾಮರಸ್ಯ ಕದಡುವವರ ಗಡೀಪಾರು, ವಿವಿಧ ಕೋಮುಗಳ ಮುಖಂಡರೊಂದಿಗೆ ಶಾಂತಿ ಸಭೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದು ಇಲ್ಲಿನ ಜನರನ್ನು ಹತ್ಯೆ ಮಾಡಿದ ಘಟನೆ ನಡೆದಿಲ್ಲ. ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ನಷ್ಟವಾದ ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಅಂದಾಜು ಮಾಡಲು ಸರ್ಕಾರ ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ಅವರನ್ನು ಕ್ಲೈಮ್‌ ಕಮಿಷನರ್‌ ಆಗಿ ನೇಮಕ ಮಾಡಿದೆ. ಅವರು ಸಲ್ಲಿಸುವ ವರದಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಹೇಳಿದರು. Shivamogga; ಕಂದಾಯ ಇಲಾಖೆ ಅಧಿಕಾರಿಗಳಿಂದ ಮನೆ ತೆರವು, ಆರಗ ವಿರುದ್ಧ ಕಿಮ್ಮನೆ ಕಿಡಿ

ಕೋಮು ಗಲಭೆಗಳನ್ನು ತಡೆಯಲು ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಕೋಮು ಸಾಮರಸ್ಯ ಕದಡುವವರ ಗಡೀಪಾರು, ವಿವಿಧ ಕೋಮುಗಳ ಮುಖಂಡರೊಂದಿಗೆ ಶಾಂತಿ ಸಭೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು.

- ಆರಗ ಜ್ಞಾನೇಂದ್ರ, ಗೃಹ ಸಚಿವ

Follow Us:
Download App:
  • android
  • ios