ರಾಜ್ಯದಲ್ಲಿ ಹಿಂದೂಗಳು ಬದುಕಲು ಆಗದ ವಾತಾವರಣ ಇದೆ: ಯತ್ನಾಳ್‌

ರಾಜ್ಯದಲ್ಲಿ ಹಿಂದೂಗಳು ಜೀವನ ನಡೆಸಲಾಗದ ವಾತಾವರಣ ನಿರ್ಮಾಣವಾಗಿದೆ. ಹತ್ಯೆಗಳು, ಜೋಡಿ ಕೊಲೆ, ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗುವವರಿಗೆ ಈಗ ಹೊಸ ಹುಮ್ಮಸ್ಸು ಬಂದಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಆರೋಪಿಸಿದ್ದಾರೆ. 

There is an environment where Hindus cannot live in the state Says Basanagouda Patil Yatnal gvd

ಟಿ.ನರಸೀಪುರ (ಮೈಸೂರು) (ಜು.19): ರಾಜ್ಯದಲ್ಲಿ ಹಿಂದೂಗಳು ಜೀವನ ನಡೆಸಲಾಗದ ವಾತಾವರಣ ನಿರ್ಮಾಣವಾಗಿದೆ. ಹತ್ಯೆಗಳು, ಜೋಡಿ ಕೊಲೆ, ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗುವವರಿಗೆ ಈಗ ಹೊಸ ಹುಮ್ಮಸ್ಸು ಬಂದಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಆರೋಪಿಸಿದ್ದಾರೆ. ಹನುಮ ಜಯಂತಿ ವೇಳೆ ಇತ್ತೀಚೆಗೆ ಹತ್ಯೆಗೀಡಾದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ನಾಯಕ್‌ ಗೌರವಾರ್ಥ ಮಂಗಳವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ರಾಮನ ಹಾಡನ್ನು ಹಾಡಲು ಕೂಡ ಅನುಮತಿ ಪಡೆದುಕೊಳ್ಳುವ ದುಃಸ್ಥಿತಿ ಇದೀಗ ಎದುರಾಗಿದೆ. 

ಗಣಪತಿ ಕೂರಿಸಲು ಕೂಡ ಪರದಾಡುವ ಸ್ಥಿತಿ ಇದೆ.  ದೇಶಪ್ರೇಮ ಬೆಳೆಸುವ ಕಾರ್ಯಕ್ರಮಕ್ಕೂ ಅನುಮತಿ ಅನಿವಾರ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ವೇಣುಗೋಪಾಲ್‌ ದೇಶದ್ರೋಹಿ ಚಟುವಟಿಕೆ ಮಾಡಿದ್ರಾ? ಪಾಕಿಸ್ತಾನದ ಪರ ಜೈಕಾರ ಕೂಗಿದ್ರಾ? ನಮ್ಮೆಲ್ಲರ ಪುಣ್ಯ ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ಇದೆ. ಸದ್ಯ ನ್ಯಾಯಾಲಯದಲ್ಲಿ ಕಾನೂನು ಸಿಗುತ್ತಿದೆ. ಇಲ್ಲವಾಗಿದ್ದರೆ ನಮ್ಮ ಸ್ಥಿತಿ ಚಿಂತಾಜನಕವಾಗುತ್ತಿತ್ತು ಎಂದರು.

ಶಾಲಾ ವಿದ್ಯಾರ್ಥಿನಿಯರಿಂದಲೇ ತರಗತಿ ನೆಲ ಒರೆಸೋ ಕೆಲಸ ಮಾಡಿಸಿದ ಶಿಕ್ಷಕಿ!

ಹನುಮ ಜಯಂತಿ ನಿಲ್ಲಬಾರದು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಇಲ್ಲಿ ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು. ಮುಂದಿನ ವರ್ಷ ಈ ವರ್ಷಕ್ಕಿಂತಲೂ ಜೋರಾಗಿ ಜಯಂತಿ ನಡೆಯಬೇಕು. ಇದೇ ವೇಣುಗೋಪಾಲ್‌ ಸಾವಿಗೆ ನಿಜವಾದ ಶ್ರದ್ಧಾಂಜಲಿ ಎಂದು ಕರೆ ನೀಡಿದರು. ನಮ್ಮದೇ ಹುಡುಗನ ಸಾವಿಗೆ ಶ್ರದ್ಧಾಂಜಲಿ ಸಭೆ ಮಾಡಲು ಅನುಮತಿ ಸಿಗುವುದಿಲ್ಲ ಎಂದಾದರೆ ನಾವು ಯಾವ ಸಮಾಜದಲ್ಲಿದ್ದೇವೆ? ವೇಣುಗೋಪಾಲ್‌ ಮನೆ ಹತ್ತಿರ 20 ಮಂದಿ ಸೇರಿ ಸಭೆ ಮಾಡಿಕೊಳ್ಳಿ ಅಂದಿದ್ದರು. ಕೊನೆಗೆ ಹೈಕೋರ್ಚ್‌ಗೆ ಹೋಗಿ ಹೋರಾಡಿ ಅನುಮತಿ ಪಡೆಯಬೇಕಾಯಿತು. ಹಿಂದೂ ಸಮಾಜವನ್ನು ಹೆದರಿಸುವ, ಬೆದರಿಸುವ ಕೆಲಸ ನಡೆಯುತ್ತಿದೆ ಎಂದರು.

ಬಂಡೀಪುರದಲ್ಲೊಂದು ದಿ ಎಲಿಫೆಂಟ್ ವಿಸ್ಪರರ್ಸ್ ಕಥನ: ಅನಾಥ ಆನೆ ಮರಿಗೆ ಆಸರೆಯಾದ ಕಾವಾಡಿ ದಂಪತಿ

ಹೈಕೋರ್ಟಿಂದ ಸಭೆಗೆ ಸಿಕ್ಕಿತು ಅನುಮತಿ: ಇದಕ್ಕೂ ಮುನ್ನ ವೇಣುಗೋಪಾಲ ಅವರ ಶ್ರದ್ಧಾಂಜಲಿ ಸಭೆಗೆ ಅನುಮತಿ ಕೋರಿ ಪಟ್ಟಣದ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಮತ್ತು ತಹಸೀಲ್ದಾರ್‌ ಅವರಿಗೆ ಆಯೋಜಕರು ಮನವಿ ಸಲ್ಲಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಕಾರಣ ಮುಂದಿಟ್ಟುಕೊಂಡು ಅನುಮತಿ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆಯೋಜಕರು ಹೈಕೋರ್ಚ್‌ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಒಪ್ಪಿಗೆ ನೀಡಿತು.

Latest Videos
Follow Us:
Download App:
  • android
  • ios