ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಬೇಕೆಂದರೆ ಮಹಿಳೆಯರು ಮಂಚ ಹತ್ತಬೇಕು: ಪ್ರಿಯಾಂಕ ಖರ್ಗೆ ವಾಗ್ದಾಳಿ

ಹಲವು ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲೇ ಹಗರಣಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಬಿಜೆಪಿ ಲಂಚ, ಮಂಚದ ಸರ್ಕಾರ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದರು.

There is a corrupt government in the state  Priyanka Gandhi attacked the BJP government kalburagi rav

ಕಲಬುರಗಿ (ಆ.13): ಹಲವು ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲೇ ಹಗರಣಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು, ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದೆ. ಇದೊಂದು ಲಂಚದ ಮಂಚದ ಸರ್ಕಾರ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಅಸಮರ್ಥ ಸರ್ಕಾರ ಎಂದು ಆರೋಪಿಸಿದರು. ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆಯಲ್ಲೂ ಕನಿಷ್ಠ 600 ಹುದ್ದೆಗಳು 30ರಿಂದ 40 ಲಕ್ಷ ರು.ಗೆ ಮಾರಾಟವಾಗಿರುವ ಶಂಕೆಯನ್ನು ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ತಮ್ಮೊಂದಿಗೆ ಮಾತನಾಡುವಾಗ ವ್ಯಕ್ತಪಡಿಸಿದ್ದಾರೆ. ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಶೇ.40 ವ್ಯವಹಾರದಲ್ಲಿ ವಿಧಾನಸೌಧವನ್ನೇ ವ್ಯಾಪಾರ ಸೌಧ ಮಾಡಿಕೊಂಡವರಿಗೆ ಇದೆಲ್ಲ ಅರ್ಥವಾಗೋದಿಲ್ಲ ಎಂದು ತಿವಿದರು.

PSI Scam: ರಾಜ್ಯ ಸರ್ಕಾರಕ್ಕೆ 6 ಪ್ರಶ್ನೆ ಕೇಳಿದ ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ನಕಲಿ ದೇಶಭಕ್ತರು:

ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಮುಖಂಡರು ಯಾವುದೇ ಹೋರಾಟ, ತ್ಯಾಗ, ಬಲಿದಾನ ಮಾಡಿಲಿಲ್ಲ. ಬಿಜೆಪಿ ನಾಯಿ ಕೂಡ ದೇಶಕ್ಕಾಗಿ ಪ್ರಾಣ ಕೊಟ್ಟಿಲ್ಲ. ಬಿಜೆಪಿಯವರು ನಕಲಿ ದೇಶಭಕ್ತರು. ಕಾಂಗ್ರೆಸ್‌ನವರು ಮಾತ್ರ ನಿಜವಾದ ದೇಶ ಭಕ್ತರು ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು. ಪಟ್ಟಣದಲ್ಲಿ ನಡೆದ ಅಮೃತ ನಡಿಗೆ ಸಮಾರೋಪದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ದೇಶದ ಧ್ವಜ ಎಂದಿಗೂ ಹಾರಿಸಿಲ್ಲ. ಇದೀಗ ದೇಶ ಭಕ್ತ ಬಗ್ಗೆ ಹೇಳಿಕೊಳ್ಳುತ್ತಿದೆ. ಮಹಾತ್ಮ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ದೇಶಭಕ್ತ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಕೆಂಪುಕೋಟೆ ಮೇಲೆ ಬಿಜೆಪಿ ಧ್ವಜ ಹಾರಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ ಬಗ್ಗೆ ಬಿಜೆಪಿಯವರು ಯಾರು ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಟೀಕಿಸಿದರು.

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಪ್ರಜಾಪ್ರಭುತ್ವವನ್ನು ಭದ್ರಬುನಾದಿ ಹಾಕಿದೆ. ಸ್ವಾಭಿಮಾನ ಬದುಕು ನೀಡಿದೆ. ದೇಶ ಕಟ್ಟುವುದಕ್ಕಾಗಿ ಕಾಂಗ್ರೆಸ್‌ ತ್ಯಾಗ ಮಾಡಿದೆ. ದೇಶಕ್ಕಾಗಿ ಕ್ರಾಂತಿಕಾರಿ ಕಾನೂನುಗಳನ್ನು ರಚಿಸಿದೆ, ದೇಶದ ಪ್ರಗತಿಯಲ್ಲಿ ಸಿಂಹಪಾಲು ನಮ್ಮ ಕಾಂಗ್ರೆಸ್‌ದಾಗಿದೆ ಎಂದರು.

ಪ್ರಿಯಾಂಕ್ ಖರ್ಗೆ ಆರೋಪಿಸ್ತಾರೆ, ದಾಖಲೆ ನೀಡಲ್ಲ: ಭಷ್ಟಾಚಾರ ಅಂದ್ರೆ ಸಿದ್ದು ಸರ್ಕಾರ: ಕಟೀಲ್‌

ಕಾಂಗ್ರೆಸ್‌ ಮುಖಂಡ ಸುಭಾಷ ರಾಠೋಡ, ಶಿವಾನಂದ ಪಾಟೀಲ, ದೀಪಕನಾಗ ಪುಣ್ಯಶೆಟ್ಟಿ, ಮಧುಸೂಧನರೆಡ್ಡಿ ಪಾಟೀಲ, ಪ್ರಭುಲಿಂಗ ಲೇವಡಿ, ಭೀಮರಾವ ಟಿಟಿ, ಜಗದೇವ ಗುತ್ತೆದಾರ, ರವಿರಾಜ ಕೊರವಿ, ಬಸಯ್ಯ ಮೇಘರಾಗ ರಾಠೋಡ, ಗುತ್ತೆದಾರ, ದೇವೇಂದ್ರಪ್ಪ ಸಾಲೋಳ್ಳಿ, ಗೋಪಾಲರಾವ ಕಟ್ಟಿಮನಿ, ಜಗನ್ನಾಥ ಕಟ್ಟಿ, ಬಾಸೀತ, ಶಬ್ಬೀರ ಅಹೆಮದ, ಚೇತನ ಗೋನಾಯಕ, ಚಿರಂಜೀವಿ, ನರಸಿಂಹಲು ಕುಂಬಾರ, ವೀರಶೆಟ್ಟಿಪಾಟೀಲ, ವೀರಮ್ಮ ಸಂಗಯ್ಯ ಸ್ವಾಮಿ ಇದ್ದರು.

 

Latest Videos
Follow Us:
Download App:
  • android
  • ios