ಹಿಂಡಲಗಾ ಜೈಲಿನಲ್ಲಿರುವ ಶಾಹಿರ್‌ಶೇಖ್‌ ಎಂಬಾತ ನನ್ನ ಕೊಲೆಗೆ ಸ್ಕೆಚ್‌ ಹಾಕಿದ್ದಾನೆ ಎಂಬ ಆಘಾತಕಾರಿ ಸಂಗತಿ ಇಂದು ಗೊತ್ತಾಗಿದೆ. ನಾಗ್ಪುರ ಮೂಲದ ಈತ ಈ ಹಿಂದೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಸಹ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. 

ಬಳ್ಳಾರಿ (ಏ.15): ಹಿಂಡಲಗಾ ಜೈಲಿನಲ್ಲಿರುವ ಶಾಹಿರ್‌ಶೇಖ್‌ ಎಂಬಾತ ನನ್ನ ಕೊಲೆಗೆ ಸ್ಕೆಚ್‌ ಹಾಕಿದ್ದಾನೆ ಎಂಬ ಆಘಾತಕಾರಿ ಸಂಗತಿ ಇಂದು ಗೊತ್ತಾಗಿದೆ. ನಾಗ್ಪುರ ಮೂಲದ ಈತ ಈ ಹಿಂದೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಸಹ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಹಿರ್‌ ಶೇಖ್‌ ನನ್ನ ಕೊಲೆಗೆ ಸ್ಕೆಚ್‌ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಮಾತನಾಡಿರುವೆ. ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಪೊಲೀಸ್‌ ತನಿಖೆ ಬಳಿಕ ಮತ್ತಷ್ಟೂ ವಿಷಯ ಹೊರ ಬೀಳಬಹುದು ಎಂದರು. ಹಿಂದುತ್ವ ಪ್ರತಿಪಾದಿಸಿದ ಕಾರಣಕ್ಕೆ ಈ ಹಿಂದೆ ಸಹ ಕೊಲೆ ಬೆದರಿಕೆ ಬಂದಿತ್ತು. ಈ ವಿಚಾರವನ್ನು ಸದನದ ಗಮನಕ್ಕೆ ತಂದಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭದ್ರತೆ ನೀಡಿತ್ತು. ಈ ಸಕಾರ್ರವೂ ನೀಡಬಹುದು. ನನ್ನ ಕೊಲೆಗೆ ಸೆ್ಕಚ್‌ ಹಾಕಲು ಕಾರಣ ಏನೆಂಬುದು ಗೊತ್ತಿಲ್ಲ. ಒಂದು ವೇಳೆ ಹಿಂದುತ್ವ ಪ್ರತಿಪಾದನೆ ಹಿನ್ನೆಲೆ ಈ ರೀತಿಯ ಸಂಚು ನಡೆದಿದ್ದರೆ, ಅದಕ್ಕೆ ನಾನು ಹೆದರುವುದಿಲ್ಲ. ಹಿಂದುತ್ವ ವಿಚಾರದಲ್ಲಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.

ಇದು ನನ್ನ ಕೊನೆಯ ಚುನಾವಣೆ, ಗೆಲ್ಲಿಸಿ: ಸಚಿವ ಗೋವಿಂದ ಕಾರಜೋಳ

ಟಿಕೆಟ್‌ ನೀಡುವ ಭರವಸೆ ನೀಡಿಲ್ಲ: ಈ ಬಾರಿ ಚುನಾವಣೆಯಲ್ಲಿ ಸ್ಪಧಿರ್ಸಲು ನನಗೆ ಟಿಕೆಟ್‌ ಸಿಕ್ಕಿಲ್ಲ. ಸಿಗುವ ಭರವಸೆ ಸಹ ಇಲ್ಲ. ಯಾರಿಗೆ ಸಿಗಲಿ; ಬಿಡಲಿ ನಾನಂತೂ ಟಿಕೆಟ್‌ ಕೊಡಿ ಎಂದು ಕೇಳುವುದಿಲ್ಲ. ಮಗನಿಗೆ ಟಿಕೆಟ್‌ ಕೊಟ್ಟರೆ ಸಂತೋಷ. ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾಮಾನ ನೀಡಿದೆ. ಬೂತ್‌ಮಟ್ಟದ ಕಾಯರ್ಕತರ್ನಾಗಿದ್ದ ನನ್ನನ್ನು ಪಕ್ಷ ಗುರುತಿಸಿ ಇಷ್ಟೂಂದು ಮಟ್ಟಕ್ಕೆ ಬೆಳೆಸಿದೆ. ಪಕ್ಷದ ಸೂಚನೆಯಂತೆ ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗಿರುವೆ. ಪಕ್ಷ ನೀಡುವ ಕೆಲಸಗಳನ್ನು ಮಾಡುವೆ. ಪಕ್ಷದ ಹಿರಿಯರ ಸೂಚನೆಗಳನ್ನು ಪಾಲಿಸುವೆ ಎಂದರು.

ಪಕ್ಷದ ರಾಷ್ಟ್ರೀಯ ಮುಖಂಡ ಧಮೇಂದ್ರ ಪ್ರಧಾನ್‌ ಅವರು ನನಗೆ ಕರೆ ಮಾಡಿ ಚುನಾವಣೆ ರಾಜಕೀಯ ಬೇಡ ಎಂದು ಹೇಳಿದ್ದರು. ಅವರ ಸೂಚನೆಯಂತೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅವರು ಹೇಳಿದಂತೆ ಚುನಾವಣೆ ನಿವೃತ್ತಿ ಘೋಷಣೆ ಮಾಡಿರುವೆ. ಈ ಹಿಂದೆ ನಮ್ಮ ಪಕ್ಷದಿಂದ ಸ್ಪಧಿರ್ಸಲು ಅಭ್ಯಥಿರ್ಗಳು ಇರಲಿಲ್ಲ. ಈಗ ಟಿಕೆಟ್‌ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಬೇರೆ ಪಕ್ಷಕ್ಕೆ ಹೋಗುವಂತಹ ದೃಶ್ಯಗಳನು್ನ ಕಾಣುತ್ತಿದ್ದೇವೆ. ಇದು ಹೆಮ್ಮೆಯ ಸಂಗತಿ. ನಮ್ಮ ಪಕ್ಷದ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿರುವ ಬೆಳವಣಿಗೆ ಕಂಡು ನಿಜಕೂ್ಕ ನನಗೆ ಸಂತಸವಾಗುತ್ತಿದೆ.

ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್‌ ಜಾರಕಿಹೊಳಿ

ಪಕ್ಷದ ಟಿಕೆಟ್‌ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವವರು ಪಕ್ಷ ನಿಷ್ಠರಲ್ಲ ಎಂದರ್ಥ. ಅಂತಹ ಅನಿಷ್ಟಟಗಳು(ಅಯೋಗ್ಯರು) ಹೋದರೆ ಹೋಗಲಿ ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ತಿರುಗೇಟು ನೀಡಿದರು. ಜಗದೀಶ್‌ ಶೆಟ್ಟರ್‌ ಅವರ ಲಾಬಿ ವಿಚಾರ ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕಿ ಈಶ್ವರಪ್ಪ ಪ್ರತಿಕ್ರಿಯಿಸಿದರು. ಬಿಜೆಪಿ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ ಸುದ್ದಿಗೋಷ್ಥಿಯಲ್ಲಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.