ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಸಂಸದೀಯ ಸಭೆಯಲ್ಲಿ ಅಂತಿಮ: ಶಾಸಕ ಬಸನಗೌಡ ಯತ್ನಾಳ
ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳು ದೆಹಲಿ, ಬೆಂಗಳೂರಿಗೆ ಹೋಗಿ ಲಾಭಿ ಮಾಡುವ ಸಂಪದ್ರಾಯಕ್ಕೆ ಬಿಜೆಪಿ ತೀಲಾಂಜಲಿ ಹಾಡಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲಾಮಟ್ಟದಲ್ಲಿ ಬಿಜೆಪಿ ಕೋರ್ ಕಮೀಟಿಗಳಿದ್ದು, ಅವರ ಸಮ್ಮುಖದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹ ಮಾಡುವುದು ನಮ್ಮ ದೇಶದಲ್ಲಿ ಇದು ಮಾದರಿಯಾಗಿದೆ.
ಚಿಕ್ಕೋಡಿ (ಏ.01): ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳು ದೆಹಲಿ, ಬೆಂಗಳೂರಿಗೆ ಹೋಗಿ ಲಾಭಿ ಮಾಡುವ ಸಂಪದ್ರಾಯಕ್ಕೆ ಬಿಜೆಪಿ ತೀಲಾಂಜಲಿ ಹಾಡಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲಾಮಟ್ಟದಲ್ಲಿ ಬಿಜೆಪಿ ಕೋರ್ ಕಮೀಟಿಗಳಿದ್ದು, ಅವರ ಸಮ್ಮುಖದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹ ಮಾಡುವುದು ನಮ್ಮ ದೇಶದಲ್ಲಿ ಇದು ಮಾದರಿಯಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಕೇಶವ ಕಲಾಭವನದಲ್ಲಿ ಚಿಕ್ಕೋಡಿ ಲೋಕಸಭೆಯ ಎಲ್ಲ 8 ಕ್ಷೇತ್ರಗಳಲ್ಲಿ ವೀಕ್ಷಕರು ಪದಾಧಿಕಾರಿಗಳ ಗುಪ್ತ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ರಾಜ್ಯದಲ್ಲಿ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆಗಳಿವೆ. ಅದರಲ್ಲಿ 3 ಹೆಸರು ಅಂತಿಮಗೊಳಿಸಿ ದೆಹಲಿಗೆ ಕಳಿಸುತ್ತಾರೆ. ದೆಹಲಿಯಲ್ಲಿ ಅವರ ಸರ್ವೆ ಹಾಗೂ ಪಕ್ಷದ ದುಡಿದವರನ್ನ ಗಮನಿಸಿ ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಸಂಸದೀಯ ಸಭೆಯಲ್ಲಿ ಅಂತಿಮವಾಗುತ್ತದೆ ಎಂದರು.
ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಸಿಎಂ ಬೊಮ್ಮಾಯಿ ವಿಶ್ವಾಸ
ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಫೈನಲ್ ಆದಾಗಾ ಸ್ವಲ್ಪ ಗೊಂದಲವಿರುತ್ತದೆ. 2 ದಿನಗಳಾದ ಮೇಲೆ ಮತ್ತೆ ಶಾಂತವಾಗುತ್ತದೆ. ಯಾವುದೇ ಆಪರೇಷನ್ ಇಲ್ಲದೇ ಸ್ಪಷ್ಟಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕು. ಯಾರದೇ ಸಹಾಯ, ಆಪರೇಷನ್ ಇಲ್ಲದೇ ಮೇಜರ್ ಆಪರೇಷನ್ ಮೂಲಕ 130 ಸೀಟು ಗೆಲ್ಲುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಬಿಜೆಪಿಯಲ್ಲಿ ವಲಸಿಗ ಶಾಸಕರು ಅನ್ನೋದು ಹೋಗಿದೆ. ವಲಸಿಗ ಶಾಸಕರಲ್ಲಿ ಒಳ್ಳೆಯವರು ಇದ್ದಾರೆ. ವಲಸಿಗ ಶಾಸಕರೇ ಸರ್ಕಾರ ರಚನೆಗೆ ಕಾರಣಿಕರ್ತರಾಗಿದ್ದರು.
ವಲಸಿಗ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಹೈ ಕಮಾಂಡ್ ನಿರ್ಣಯ ಮಾಡುತ್ತದೆ. ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹದ ಜೊತೆಗೆ ಆಂತರಿಕ ಸರ್ವೇ ಮಾಡಲಾಗಿದೆ. ಅಭಿಪ್ರಾಯ ಸಂಗ್ರಹ ಅಂತಿಮವಲ್ಲ, ಒಟ್ಟಾರೆ ಬಿಜೆಪಿಯಲ್ಲಿ ಗೆಲ್ಲುವ ಕುದುರೆಗೆ ಮಣೆ ಹಾಕಲಾಗುವುದು ಎಂದು ತಿಳಿಸಿದರು. ಸಿ ವೋಟರ್ಸ ಸಮೀಕ್ಷೆ ಯಾವುದು ಸಕ್ಸಸ್ ಆಗಿಲ್ಲ. ಸಿ ಎಂದರೆ ಕಾಂಗ್ರೆಸ್ ವೋಟರ್ಸ್ ಸರ್ವೆ ಮಾಡುತ್ತಾರೆ. ಚುನಾವಣೆ ಬಂತದರೇ ಕೆಲವು ಸುಳ್ಳು ಸಮೀಕ್ಷೆ ಬರುತ್ತವೆ. ಅವರು ಶಾಸಕರಿಗೆ, ಅಭ್ಯರ್ಥಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಸಮೀಕ್ಷೆಗಳಿಗೆ ಹೆಚ್ಚಿನ ಮಹತ್ವವಿಲ್ಲ.
ಅವರ ಸಮೀಕ್ಷೆಗಳು ಶೇ.90 ಎಲ್ಲಿಯೂ ಸತ್ಯವಾಗಿಲ್ಲ. ಉತ್ತರ ಪ್ರದೇಶ, ಆಸ್ಸಾಮಗಳಲ್ಲಿ ಬಿಜೆಪಿ ಅಧಿಕಾರಿಕ್ಕೆ ಬರುವುದಿಲ್ಲ ಎಂದು ಸಮೀಕ್ಷೆ ಬಂದಿತ್ತು. ಆದರೆ, ಎಲ್ಲ ಕಡೆಗೂ ಬಿಜೆಪಿ ಬಹುಮತ ಬಂದಿದೆ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಡಿಕೆಶಿಗೆ ಧಮ್ ಇದ್ದರೆ ಮೀಸಲಾತಿ ತೆಗೆಯುತ್ತೇವೆ ಎನ್ನಲಿ: ಬಸನಗೌಡ ಪಾಟೀಲ ಯತ್ನಾಳ್
ವರುಣಾ ಕ್ಷೇತ್ರದಲ್ಲಿ ಯಾರ ಸ್ಪರ್ಧೆ ಮಾಡುತ್ತಾರೆ ಅನ್ನೋ ಅಂತಿಮ ನಿರ್ಣಯ ಪಕ್ಷ ಮಾಡುತ್ತದೆ. ಬಿಜೆಪಿ ಶಾಸಕರು ಪಕ್ಷ ತೊರೆಯುತ್ತಿರುವ ವಿಚಾರ, ಅಂಥ ವಾತಾವರಣ ಮೂರ್ನಾಲ್ಕು ತಿಂಗಳ ಹಿಂದೆ ಇತ್ತು. ಈಗ ಇಲ್ಲ. ಬಿಜೆಪಿ ಗೆಲ್ಲಲಿದೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಕೆಲವು ಶಾಸಕರು ಪಕ್ಷದಲ್ಲಿ ಪೂರ್ತಿ ಹೆಸರು ಹಾಳುಮಾಡಿಕೊಂಡಿರುತ್ತಾರೆ. ಟಿಕೆಟ್ ಸಿಗೋದಿಲ್ಲ ಎನ್ನುವರು ಪಕ್ಷ ತೊರೆಯುತ್ತಿದ್ದಾರೆ. ಪಕ್ಷದಲ್ಲಿ ಒಳ್ಳೆಯ ಹೆಸರು ಇದ್ದವರಿಗೆ ಟಿಕೆಟ್ ತಪ್ಪುವದಿಲ್ಲ.
-ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕರು.