ನನ್ನ ಗೆಲುವಿನಲ್ಲಿ ಹೊನ್ನಾವರದ ಮತದಾರರ ಪಾತ್ರ ದೊಡ್ಡದು: ಶಾಸಕ ದಿನಕರ ಶೆಟ್ಟಿ

ಪಟ್ಟಣದ ಮತದಾರರು ವಿಶೇಷವಾಗಿ ನನ್ನ ಗೆಲುವಿನಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ. ಅವರ ಋುಣ ತೀರಿಸಲಿಕ್ಕೆ ಸಾಧ್ಯವೇ ಇಲ್ಲ. ಇದ್ದಷ್ಟುದೊಡ್ಡ ಮಟ್ಟದಲ್ಲಿ ಮತ ನೀಡಿ ನನ್ನನ್ನು ಜಯಶಾಲಿಯಾಗಿ ಮಾಡಿದ್ದಾರೆ ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು.

The role of Honnavara voters is huge in my victory Says Dinakar Shetty gvd

ಹೊನ್ನಾವರ (ಮೇ.17): ಪಟ್ಟಣದ ಮತದಾರರು ವಿಶೇಷವಾಗಿ ನನ್ನ ಗೆಲುವಿನಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ. ಅವರ ಋುಣ ತೀರಿಸಲಿಕ್ಕೆ ಸಾಧ್ಯವೇ ಇಲ್ಲ. ಇದ್ದಷ್ಟುದೊಡ್ಡ ಮಟ್ಟದಲ್ಲಿ ಮತ ನೀಡಿ ನನ್ನನ್ನು ಜಯಶಾಲಿಯಾಗಿ ಮಾಡಿದ್ದಾರೆ ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದಲ್ಲಿ ನಡೆದ ‘ಬಿಜೆಪಿ ವಿಜಯೋತ್ಸವ’ದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರತಿ ಬಾರಿ ಗೆಲುವಾದಾಗ ಕುಮಟಾದಲ್ಲಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದೆ. ಆದರೆ ಈ ಬಾರಿ ಹೊನ್ನಾವರದಲ್ಲಿ ಆಚರಣೆ ಮಾಡಬೇಕು ಎನ್ನುವಂತಹ ಮಾತು ಇಲ್ಲಿನ ಮುಖಂಡರು ಹೇಳಿದರು. 

ಆ ಪ್ರಕಾರ ನಾನು ಹೊನ್ನಾವರದಲ್ಲಿ ವಿಜಯೋತ್ಸವ ಮಾಡಿದ್ದೇನೆ. ಇಲ್ಲಿ ಕಾರ್ಯಕರ್ತರು ಪಕ್ಷದ ಬಗ್ಗೆ ಅಪಾರವಾದಂತಹ ಕಾಳಜಿ, ವಿಶ್ವಾಸ ಹೊಂದಿದ್ದಾರೆ ಎಂದರು. ಬಹುಕೋಟಿ ವೆಚ್ಚದ ಶರಾವತಿ ಕುಡಿಯುವ ನೀರಿನ ಯೋಜನೆ ಈಗಾಗಲೇ ಲೋಕಾರ್ಪಣೆಗೆ ಸಿದ್ಧವಾಗಿದೆ. 10ರಿಂದ 15 ದಿವಸದ ಒಳಗಡೆ ನಗರ ನಿವಾಸಿಗಳಿಗೆ ಲಭಿಸಲಿದೆ. ಇಷ್ಟೊತ್ತಿಗೆ ಈ ಕಾರ್ಯ ಪೂರ್ತಿ ಆಗುತ್ತಿತ್ತು. ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದೇನೆ. ಆದರೆ ಹೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ನೀಡಬೇಕಾದಂತಹ ಗುತ್ತಿಗೆದಾರ ಇದರಲ್ಲಿಯೂ ರಾಜಕಾರಣ ಮಾಡುತ್ತಿದ್ದು, ಅದನ್ನು ನಾನು ಖಂಡಿಸುತ್ತಿದ್ದೇನೆ. 

ಭರವಸೆ ಈಡೇ​ರಿ​ಸುವ ಹೊಣೆ ಕಾಂಗ್ರೆಸ್‌ ಮೇಲಿ​ದೆ: ಕಾಗೋಡು ತಿಮ್ಮ​ಪ್ಪ

ಬಿಜೆಪಿಗೆ ಅನುಕೂಲ ಆಗುತ್ತೆ ಎನ್ನುವಂತ ಕಾರಣಕ್ಕೆ ವಿದ್ಯುತ್‌ ಸಂಪರ್ಕ ಸಂಪರ್ಕ ಕೊಡಲು ವಿಳಂಬ ಮಾಡುತ್ತಿದ್ದಾನೆ. ಅವನು ಎಷ್ಟೇ ದೊಡ್ಡ ವ್ಯಕ್ತಿ ಇರಲಿ, ಆತನಿಗೆ ಬೇಕಾದಷ್ಟುಪ್ರಭಾವ ಇರಲಿ, ಆತನ ಶರ್ಚ್‌ ಹಿಡಿದು ಎಳೆದು ತಂದು ಕರೆಂಟ್‌ ಕನೆಕ್ಷನ್‌ ಕೊಡಿಸುತ್ತೇನೆ. ಆ ಶಕ್ತಿ ನೀವು ಕೊಟ್ಟಿದ್ದೀರಿ, ಅದನ್ನು ಮಾಡಿ ತೋರಿಸುತ್ತೇನೆ. ಅನ್ನ ಕೊಟ್ಟನಿಮ್ಮ ಊರಿಗೆ ನೀರು ಕೊಡುವಂತಹ ಕೆಲಸ ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು. ನಗರದಲ್ಲಿ ಸ್ವಲ್ಪ ರಸ್ತೆ ಕಾಮಗಾರಿ ಬಾಕಿ ಇದೆ. ರಸ್ತೆಗೆ ಈಗಾಗಲೇ ಐದು ಕೋಟಿ ರೂ. ನಮ್ಮ ಬಿಜೆಪಿ ಸರ್ಕಾರ ನೀಡಿತ್ತು. ಅದರಲ್ಲೂ ಗುತ್ತಿಗೆದಾರರು, ನಮ್ಮ ವಿರೋಧಿಗಳು ಕೆಲಸ ಮಾಡಬಾರದು ಅನ್ನುವಂತಹ ಒಂದೇ ಒಂದು ದೃಷ್ಟಿಯಿಂದ ಆಮೆಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ನಾನು ಮುಂದಿನ ದಿನಗಳಲ್ಲಿ ಎಚ್ಚರಿಕೆ ಕೊಡುತ್ತೇನೆ ಎಂದರು.

ದತ್ತರವರ ನೇತೃತ್ವದಲ್ಲಿ ಕಾರ್ಯಕರ್ತರ ಸಜ್ಜುಗೊಳಿಸಲು ಸಂಸದ ಪ್ರಜ್ವಲ್‌ ಕರೆ

ಕೊನೆ ಗಳಿಗೆಯಲ್ಲಿ ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿಲ್ಲವಾಗಿತ್ತು. ಆದರೆ ಹೊನ್ನಾವರದ ಮತಗಳು ನಮ್ಮ ಪಕ್ಷಕ್ಕಿದೆ ಎನ್ನುವ ವಿಶ್ವಾಸವಿತ್ತು. ಜನತೆ ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಅದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಭಾಗ್ಯಾ ಮೇಸ್ತ, ಉಪಾಧ್ಯಕ್ಷೆ ನಿಶಾ ಶೇಟ್‌, ಸದಸ್ಯರಾದ ಶಿವರಾಜ ಮೇಸ್ತ, ವಿಜು ಕಾಮತ್‌, ಬಿಜೆಪಿ ತಾಲೂಕಾಧ್ಯಕ್ಷ ರಾಜು ಭಂಡಾರಿ, ಕುಮಟಾ ತಾಲೂಕಾಧ್ಯಕ್ಷ ಹೇಮಂತ ಗಾಂವ್ಕರ, ಮುಖಂಡರಾದ ಎಂ.ಎಸ್‌. ಹೆಗಡೆ, ಜಿ.ಜಿ. ಶಂಕರ್‌, ರಘು ಪೈ, ರಾಜೇಶ್‌ ಸಾಳೆ ಹಿತ್ತಲ್‌ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios