Asianet Suvarna News Asianet Suvarna News

ಈದ್ ಮಿಲಾದ್‌ ದಿನವೇ ಶಾಂತಿ ಕದಡಿದ ಕಿಡಿಗೇಡಿಗಳು: ಶಾಸಕ ಯತ್ನಾಳ ಬ್ಯಾನರ್‌ ಹರಿದು ದುಷ್ಕೃತ್ಯ!

ಗುಮ್ಮಟನಗರಿ ವಿಜಯಪುರದಲ್ಲಿ 11 ದಿನಗಳ ಗಣೇಶ ಹಬ್ಬ ಶಾಂತಿಯುತವಾಗಿ ನಡೆದಿದೆ. ದೊಡ್ಡ ಪ್ರಮಾಣದ ಮೆರವಣಿಗೆಗಳು ನಡೆದರು ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದ್ರೆ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಕೆಲ ಕಿಡಿಗೇಡಿಗಳು ಮಾಡಬಾರದ ಕೆಲಸ ಮಾಡಿ ಶಾಂತಿ ಸುವ್ಯವಸ್ಥಗೆ ಭಂಗ ತಂದಿದ್ದಾರೆ. 

The miscreants disturbed the peace on the day of Eid Milad in Vijayapura gvd
Author
First Published Sep 28, 2023, 11:01 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಸೆ.28): ಗುಮ್ಮಟನಗರಿ ವಿಜಯಪುರದಲ್ಲಿ 11 ದಿನಗಳ ಗಣೇಶ ಹಬ್ಬ ಶಾಂತಿಯುತವಾಗಿ ನಡೆದಿದೆ. ದೊಡ್ಡ ಪ್ರಮಾಣದ ಮೆರವಣಿಗೆಗಳು ನಡೆದರು ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದ್ರೆ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಕೆಲ ಕಿಡಿಗೇಡಿಗಳು ಮಾಡಬಾರದ ಕೆಲಸ ಮಾಡಿ ಶಾಂತಿ ಸುವ್ಯವಸ್ಥಗೆ ಭಂಗ ತಂದಿದ್ದಾರೆ. ಈದ್‌ ಮಿಲಾದ್‌ ಮೆರವಣಿಗೆ ಹೊರಟಿದ್ದ ವೇಳೆ ಕಿಡಗೇಡಿಗಳು ನಗರ ಶಾಸಕ ಯತ್ನಾಳ್‌ ಭಾವಚಿತ್ರ ಹರಿದು ಹಾಕಿದ್ದು, ಸ್ಥಳದಲ್ಲಿ ಉದ್ವಿಘ್ನ ವಾತಾವರಣ ಉಂಟಾಗಿದೆ..

ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳ ಕೃತ್ಯ: ಮಹಮ್ಮದ್  ಪೈಗಂಬರ ಅವರ ಜನ್ಮದಿನದ ಈದ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಸಿರು ವರ್ಣದ ಧ್ವಜ ಹಿಡಿದ ಕೋಲಿನಿಂದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಭಾವಚಿತ್ರವಿದ್ದ ಬ್ಯಾನರ್ ಹರಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಹಲವು ಕಡೆಗಳಲ್ಲಿ ಶುರುವಾದ ಈದ್ ಮಿಲಾದ್ ಮೆರವಣಿಗೆ‌ ಪೈಕಿ ಠಕ್ಕೆ, ಅಥಣಿ ರಸ್ತೆಯಿಂದಲು ಮೆರವಣಿಗೆ ಬಂದಿದೆ. ಈ ವೇಳೆ ಗಾಂಧಿ ಚೌಕ್ ಗೆ ಹೊರಟಿದ್ದ ಮೆರವಣಿಗೆ ಶಿವಾಜಿ ಸರ್ಕಲ್ ಗೆ ಬಂದಾಗ ಅಲ್ಲಿ ಕಿಡಿಗೇಡಿಗಳ ಕೃತ್ಯ ನಡೆದಿದೆ. ಶಾಸಕ ಯತ್ನಾಳರ ಬೃಹತ್ ಬ್ಯಾನರ್‌ ಹರಿಯಲಾಗಿದೆ‌.

Chikkaballapur: ಗಗನಕ್ಕೆ ಏರಿದ್ದ ಟೊಮೆಟೋ ದರ ಪಾತಾಳಕ್ಕೆ: ರೈತರು ಕಂಗಾಲು!

ಕಿಡಿಗೇಡಿಗಳ ಕೃತ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ: ಶಿವಾಜಿ ಸರ್ಕಲ್‌ನಲ್ಲಿ ನಡೆದ ಸಂಪೂರ್ಣ ಘಟನೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೆ ದೃಶ್ಯವಿಗ ವಿಜಯಪುರ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದೆ. ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟು ಮಾಡಿದೆ. ನಗರದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಇಸ್ಲಾಂ ಧರ್ಮೀಯರು ಮೆರವಣಿಗೆ ನಡೆಸಿದ್ದರು. ಮೆರವಣಿಗೆ ನಗರದ ಶಿವಾಜಿ ವೃತ್ತಕ್ಕೆ ಆಗಮಿಸಿದಾಗ, ಸ್ಥಳದಲ್ಲಿ ಗಣೇಶ ಹಬ್ಬದ ಶುಭಾಶಯ ಕೋರಿ ಹಾಕಲಾಗಿದ್ದ ನಗರ ಶಾಸನ ಬಸನಗೌಡ ಪಾಟೀಲ್‌ ಯತ್ನಾಳ್ರ ಬ್ಯಾನರ್ ನ್ನು ಹರಿಯಲಾಗಿದೆ.

ಹಸಿರು ಧ್ವಜದಿಂದ ತಿವಿದು ಬ್ಯಾನರ್ ಹರಿದ ಯುವಕ: ಮೆರವಣಿಗೆಯಲ್ಲಿದ್ದ ಕಿಡಿಗೇಡಿ ಯುವಕನೊಬ್ಬ ದೊಡ್ಡ ಗಾತ್ರದಲ್ಲಿದ್ದ ಹಸಿರು ಬಣ್ಣದ ಧ್ವಜವನ್ನು ಯತ್ನಾಳ ಭಾವಚಿತ್ರದ ಬ್ಯಾನರ್ ಗೆ ಮರೆಮಾಚಿ, ಕೋಲಿನಿಂದ ಚುಚ್ಚಿ ಬ್ಯಾನರ್ ಹರಿದಿದ್ದಾನೆ ಈ ದೃಶ್ಯ ಮೊಬೈಕ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.

ಪರಿಸ್ಥಿತಿ ಬುದಿಮುಚ್ಚಿದ ಕೆಂಡ: ನಗರದ ಶಿವಾಜಿ ವೃತ್ತದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾವಚಿತ್ರವಿರೋ ಬ್ಯಾನರ್ ನ್ನು ಹರಿದ ಹಾಕಿದ ಕಾರಣ ಸ್ಥಳದಲ್ಲಿ ಬೂದಿಮುಚ್ಚಿದ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ  ಎಸ್ಪಿ ಋಷಿಕೇಶ ಸೋನವಣೆ ನೇತೃತ್ವದಲ್ಲಿ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಪಕ್ಕಾ ಕ್ರಮ ಎಂದಿದ್ದಾರೆ. 

ಸ್ಥಳಕ್ಕೆ ಧಾವಿಸಿದ ಯತ್ನಾಳ್ ಬೆಂಬಲಿಗರು: ಘಟನೆ ನಡೆಯುತ್ತಿದ್ದ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಡಿಆರ್ ವ್ಯಾನ್‌ ಸಹ ಅಳವಡಿಕೆ ಮಾಡಲಾಗಿದೆ. ಇನ್ನು ಯತ್ನಾಳ್‌ ಬೆಂಬಲಿಗರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿದ್ದಾರೆ. ಅಲ್ಲದೆ ಕೃತ್ಯ ಎಸಗಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳಿಗೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ಕೃತ್ಯದ ಹಿಂದೆ ಯಾರ ಕೈವಾಡವಿದೆ ಎನ್ನುವ ಬಗ್ಗೆ ತನಿಖೆ ನಡೆಯಬೇಕು, ಶಾಸಕರ ಭಾವಚಿತ್ರ ಹರಿದು ಹಾಕಿದವರನ್ನ ಬಂಧಿಸಬೇಕು ಅಂತಾ ಯತ್ನಾಳ್‌ ಬೆಂಬಲಿಗ ರಾಘವ ಅನ್ನಿಗೇರಿ ಆಗ್ರಹಿಸಿದ್ದಾರೆ..

ಯತ್ನಾಳ್ ಆಪ್ತನಿಂದ ದೂರು ದಾಖಲು: ಕೃತ್ಯದ ಬಳಿಕ ಶಾಸಕ ಯತ್ನಾಳ್ ಆಪ್ತರು ಗಾಂಧಿಚೌಕ ಪೊಲೀಸರಿಗೆ ದೂರು ನೀಡಿದ್ದಾರೆ. IPC ಸೆಕ್ಷನ್ 153 (ಎ), 427 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ವಿಡಿಯೋ ದೃಶ್ಯಾವಳಿಯಲ್ಲಿ ಯುವಕನ ಮುಖ ಕ್ಲಿಯರ್ ಆಗಿದ್ದು ಬಂದಿಸುವಂತೆಯು ಆಗ್ರಹಿಸಿದ್ದಾರೆ. ದೂರು ಹಾಗೂ ವಿಡಿಯೋ ದೃಶ್ಯಾವಳಿ ಆಧರಿಸಿ ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬಂದ್‌ ಹೆಸರಲ್ಲಿ ಜನರಿಗೆ ತೊಂದರೆ ಮಾಡಿದರೆ ಕ್ರಮ: ಡಿ.ಕೆ.ಶಿವಕುಮಾರ್‌

ಜನರಲ್ಲಿ ಆತಂಕ ಮೂಡಿಸಿದ ಕಿಡಿಗೇಡಿ ಕೃತ್ಯ, ಘಟನೆಗೆ ವ್ಯಾಪಕ ಖಂಡನೆ: ಕಳೆದ 11 ದಿನಗಳಿಂದ ನಡೆದ ಗಣೇಶ ಉತ್ಸವ ಶಾಂತಿ ಸುವ್ಯವಸ್ಥೆಯಿಂದ ನಡೆದಿದೆ. ಆದ್ರೆ ಈ ನಡುವೆ ಈದ್‌ ಮಿಲಾದ್‌ ಮೆರವಣಿಗೆಯ ದಿನವೇ ಈ ಕೃತ್ಯ ನಡೆದಿರೋದು ಸಾರ್ವಜನಿಕರ ಆಕ್ರೋಶಕ್ಕು ಕಾರಣವಾಗಿದೆ. ಈ ಮೂಲಕ ಹಿಂದೂ-ಮುಸ್ಲಿಂ ನಡುವೆ ಬೆಂಕಿ ಹಚ್ಚಲು ಯತ್ನಿಸಿದವರನ್ನ ಪೊಲೀಸರು ಬಂಧಿಸಿ ಸರಿಯಾದ ಪಾಠ ಕಲಿಸಬೇಕಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ.

Follow Us:
Download App:
  • android
  • ios