2024ರ ಕಾಂಗ್ರೆಸ್ ಅಧಿವೇಶನದ ಸಂದೇಶ ಇಂದಿಗೂ ಪ್ರಸ್ತುತ: ಸಚಿವ ಎಚ್.ಕೆ.ಪಾಟೀಲ್‌

2024ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು. 

The message of the 2024 Congress session is still relevant today Says Minister HK Patil gvd

ಬೆಳಗಾವಿ (ಡಿ.23): 2024ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು. ಬೆಳಗಾವಿಯಲ್ಲಿ ರಂಗಸೃಷ್ಟಿ ಮತ್ತು ಭಾಗವತರು ಸಂಘಟನೆ ಆಯೋಜಿಸಿದ್ದ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಂತಹ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದರು. ಅವರು ಎಂತಹ ಸಂದೇಶ ನೀಡಿದರು ಎನ್ನುವುದನ್ನು ಅರಿತವರು ಈ ಕಾರ್ಯಕ್ರಮ ಒಪ್ಪಿ, ಅಪ್ಪಿಕೊಳ್ಳುತ್ತಾರೆ. ರಾಷ್ಟ್ರವನ್ನು ಹೇಗೆ ಕಟ್ಟಬೇಕು, ರಾಷ್ಟ್ರದಲ್ಲಿ ನಾವು ಹೇಗಿರಬೇಕು ಎನ್ನುವುದರ ಜೊತೆಗೆ, ಜನರಲ್ಲಿ ಸಚ್ಚಾರಿತ್ರ್ಯ ಮೂಡಿಸಬೇಕು ಎನ್ನುವ ಸಂದೇಶ ಹೊರ ಬರುವಂತೆ ಅಧಿವೇಶನ ನಡೆಯಿತು. ಅಸ್ಪೃಶ್ಯತೆ ತೊಲುಗಿಸುವುದನ್ನೇ ಮೂಲಮಂತ್ರವಾಗಿಸಿಕೊಂಡು ಅಧಿವೇಶನ ನಡೆಸಲಾಯಿತು. ಭ್ರಾತೃತ್ವ ಭಾವನೆ ಮೂಡಿಸಿ ಎಲ್ಲರನ್ನೂ ಸ್ವಾತಂತ್ರ್ಯ ಚಳವಳಿಯಲ್ಲಿ ಜೋಡಿಸಿಕೊಂಡು ರಾಷ್ಟ್ರೀಯ ಚಳವಳಿಯಲ್ಲಿ ಒಗ್ಗೂಡಿಸಿದ ಅಧಿವೇಶನ ಇದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಅಲ್ಲು ಅರ್ಜುನ್ ಮೇಲೆ ಬಿತ್ತು ಮತ್ತೊಂದು ಕೇಸ್: ಮತ್ತೆ ಅರೆಸ್ಟ್ ಆಗ್ತಾರಾ ಐಕಾನ್ ಸ್ಟಾರ್?

ಸರ್ಕಾರದಿಂದ ವರ್ಷವಿಡೀ ಗಾಂಧಿ ಭಾರತ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರ ಮೂಲಕ ಗಾಂಧಿ ಅನುಯಾಯಿಗಳಲ್ಲಿ ಬಲ ತುಂಬುವ ಕೆಲಸ, ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಗಾಂಧಿ ಪುತ್ಥಳಿ ಪ್ರತಿಷ್ಠಾಪನೆ, ಖಾದಿ ಪ್ರದರ್ಶನ, ಸಾರ್ವಜನಿಕ ಸಮಾವೇಶ ಮೊದಲಾದ ಕಾರ್ಯಕ್ರಮ ನಡೆಯಲಿವೆ. ಜನರನ್ನು ಒಂದಿಲ್ಲೊಂದು ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಆದರೆ ಸರ್ಕಾರದ ಕಾರ್ಯಕ್ರಮಕ್ಕಿಂತ ಮಹತ್ವದ ಕಾರ್ಯಕ್ರಮ ಇಂದಿನ ಈ ಕಾರ್ಯಕ್ರಮ ಎಂದವರು ಬಣ್ಣಿಸಿದರು.

ಇತಿಹಾಸವನ್ನು ಪುನಃ ಪುನಃ ತಿಳಿಸುತ್ತಿರಬೇಕು. ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಂಡವರ ಕುರಿತು ತಿಳಿದುಕೊಳ್ಳಬೇಕು. ಅಂದಿನ ಮೌಲ್ಯ, ಆರ್ಥಿಕ ಶಿಸ್ತು ಸಾರ್ವಜನಿಕ ಕೆಲಸಗಳ ಮಾದರಿ ಬದಲಾಗಿರುವ ಇಂದಿನ ಸಂದರ್ಭದಲ್ಲಿ ಬಹಳ ಪ್ರಸ್ತುತ. ಅಂದಿನ ಅಧಿವೇಶನ ನೆನಪು ಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಮೆಚ್ಚುವಂತದ್ದು. ಸರ್ಕಾರ ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಬಹುದು. ಆದರೆ ಅದಕ್ಕಿಂತ ಮೊದಲು ಈ ಕಾರ್ಯಕ್ರಮ ದಾಖಲಾಗುತ್ತದೆ. ಈ ಕಾರ್ಯಕ್ರಮ ಶತಮಾನೋತ್ಸವಕ್ಕೆ ವಿಶೇಷ ಮೆರಗು ತಂದಿದೆ ಎಂದು ಶ್ಲಾಘಿಸಿದ ಅವರು, ನಾಟಕಗಳ ಮೂಲಕ ಇಲ್ಲಿ ಜಾಗೃತಿ ಮೂಡಿಸುತ್ತಿದ್ದೀರಿ. ಬರುವ ಒಂದು ವರ್ಷದಲ್ಲಿ 40-50 ಪ್ರಯೋಗ ಮಾಡಿದರೆ ಬಹಳ ದೊಡ್ಡ ಬದಲಾವಣೆ ಸಾಧ್ಯ. ಸರ್ಕಾರದ ಸಹಾಯ ನಿರೀಕ್ಷಿಸದೆ, ಸ್ವಾಭಿಮಾನದಿಂದ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಗಾಂಧೀಜಿಯವರು ಎಂದರೆ ಸತ್ಯ, ನ್ಯಾಯ, ಪ್ರಾಮಾಣಿಕತೆ. ಹಾಗಾಗಿಯೇ ಶತಮಾನಗಳ ಕಾಲ ಅವರನ್ನು ಸ್ಮರಿಸುತ್ತೇವೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರಲಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಈ ಕಾರ್ಯಕ್ರಮ ಮುನ್ನುಡಿಯಾಗಲಿ. ಹೊಸ ಆಶಾಭಾವನೆಯೊಂದಿಗೆ ನಾವು ಬದುಕೋಣ ಎಂದು ಹೇಳಿದರು. ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಡಾ.ರಾಮಕೃಷ್ಣ ಮರಾಠೆ ಅವರ ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಬಿಡುಗಡೆ ಮಾಡಿದರು. 

ಬೆಳಗಾವಿ ಸಮ್ಮೇಳನ ಕುವೆಂಪು ಅವರಿಗೆ ಜಯ ಭಾರತ ಜನನಿಯ ತನುಜಾತೆ ಹಾಡು ಬರೆಯಲು ಪ್ರೇರಣೆಯಾಯಿತು. ಇದೇ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣದ ಬೀಜಾಂಕುರವಾಯಿತು. ವಿವಿಧೆಡೆಯಿಂದ ಬಂದವರೆಲ್ಲ ಅವರವರ ಭಾಷೆಯಲ್ಲೇ ಮಾತನಾಡುವ ಮೂಲಕ ಭಾಷೆ ಬೇರೆಯಾದರೂ ನಮ್ಮೆಲ್ಲರ ಭಾವನೆ ಒಂದೇ ಎನ್ನುವ ಸಂದೇಶ ನೀಡಿತು ಎಂದು ಸರಜೂ ಕಾಟ್ಕರ್ ಹೇಳಿದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್, ಭಾಗವತರು ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ, ರಂಗಸೃಷ್ಟಿಯ ಉಪಾಧ್ಯಕ್ಷ ಎಂ.ಕೆ. ಹೆಗಡೆ, ಸದಸ್ಯರಾದ ಶಿರೀಶ ಜೋಶಿ, ಶಾಂತಾ ಆಚಾರ್ಯ, ಕೆಂಪಣ್ಣ, ಬಸವರಾಜ ಗಾರ್ಗಿ, ಶರಣಗೌಡ ಪಾಟೀಲ ಮೊದಲಾದವರಿದ್ದರು. 

ಜೀವನದಿ ಕಾವೇರಿ ಒಡಲಿಗೆ ಸೇರುತ್ತಿದೆ ಶುಂಠಿತ್ಯಾಜ್ಯ ನೀರು: ಶುದ್ಧೀಕರಣ ಘಟಕಗಳಿಂದ ಕಾವೇರಿಗೆ ಕಂಟಕ

ಡಾ.ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ಶಿವಲಿಂಗ ಪ್ರಸಾದ ಅವರು ನಿರೂಪಿಸಿದರು. ಶರಣಯ್ಯ ಮಠಪತಿ ವಂದಿಸಿದರು. ನಂತರ ಸಂಜೆಯವರೆಗೆ ವಿಚಾರಗೋಷ್ಠಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರಿಗೆ ರಂಗಗೌರವ, ಶಿರೀಶ ಜೋಶಿ ಅವರು ಬರೆದ ನಾಟಕ ಪ್ರಿಂಟಿಂಗ್ ಮಶಿನ್ ಪ್ರದರ್ಶನ ಮೊದಲಾದವು ನಡೆದವು. ಚರಕ ಸ್ವಾವಲಂಬಿಯ ಸಂಕೇತ. ಅದರ ಮೂಲಕ ಚಳವಳಿ ಆರಂಭಿಸಿದ್ದು ಬೆಳಗಾವಿ ಅಧಿವೇಶನ. ಸೇವಾದಳದ ಕಲ್ಪನೆ ಮೂಡಿಸಿ ಅದರ ಆರಂಭಕ್ಕೆ ಕಾರಣವಾಗಿದ್ದು ಈ ಅಧಿವೇಶನ. ಕರ್ನಾಟಕದ ಕಲ್ಪನೆ ಬೀಜಾಂಕುರವಾಗಿದ್ದೇ ಬೆಳಗಾವಿ ಅಧಿವೇಶನದಲ್ಲಿ. ಇಲ್ಲಿ ಹಾಡಿದ ಉದಯವಾಗಲಿ ಚೆಲುವ ಕನ್ನಡನಾಡು ಗೀತೆ ಎಲ್ಲರನ್ನೂ ಒಗ್ಗೂಡಿಸಿತು.

Latest Videos
Follow Us:
Download App:
  • android
  • ios