ಎಚ್‌ಎಂಟಿಗೆ ನೀಡಿದ ಅರಣ್ಯ ಜಾಗ ಕೇಂದ್ರದ್ದಲ್ಲ, ರಾಜ್ಯದ್ದು: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರಿನ ಜಾಲಹಳ್ಳಿಯಲ್ಲಿ ಎಚ್‌ಎಂಟಿಗೆ ನೀಡಲಾಗಿರುವ ಅರಣ್ಯ ಭೂಮಿ ಕೇಂದ್ರ ಸರ್ಕಾ ರಕ್ಕೆ ಸೇರಿದ್ದಲ್ಲ, ಬದಲಿಗೆ ಕರ್ನಾಟಕದ ಆಸ್ತಿ ಯಾಗಿದ್ದು, ರಾಜ್ಯದ ಅಮೂ ಸಂಪತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗದಂತೆ ನಾವು ತಡೆಯಬೇಕಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಅ.03): ಬೆಂಗಳೂರಿನ ಜಾಲಹಳ್ಳಿಯಲ್ಲಿ ಎಚ್‌ಎಂಟಿಗೆ ನೀಡಲಾಗಿರುವ ಅರಣ್ಯ ಭೂಮಿ ಕೇಂದ್ರ ಸರ್ಕಾ ರಕ್ಕೆ ಸೇರಿದ್ದಲ್ಲ, ಬದಲಿಗೆ ಕರ್ನಾಟಕದ ಆಸ್ತಿ ಯಾಗಿದ್ದು, ರಾಜ್ಯದ ಅಮೂ ಸಂಪತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗದಂತೆ ನಾವು ತಡೆಯಬೇಕಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಎಚ್‌ಎಂಟಿ ಭೂಮಿಯು ಕೇಂದ್ರ ಸರ್ಕಾರಕ್ಕೆಸೇರಿದ್ದಾಗಿದೆ ಎಂದು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, 'ಅರಣೇತರ ಉದ್ದೇಶಕ್ಕೆ ಡಿನೋಟಿಫೈ ಆಗದ ಯಾವುದೇ ಅರಣ್ಯ ಭೂಮಿಯು ಯಾವಾಗಲೂ ಅರಣ್ಯವಾಗಿಯೇ ಇರಲಿದೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಅದರಂತೆ ಎಚ್‌ಎಂಟಿಗೆ ನೀಡಿರುವ ಅರಣ್ಯ ಭೂಮಿಯು ಡಿನೋಟಿಫೈ ಆಗಿಲ್ಲ. ಹೀಗಾಗಿ ಆ ಭೂಮಿ ಅರಣ್ಯ ಭೂಮಿಯೇ ಆಗಿದ್ದು, ಅರಣ್ಯ ಇಲಾಖೆಗೆ ಸೇರಿದ್ದಾಗಿದೆ' ಎಂದು ತಿಳಿಸಿದರು. ಎಚ್‌ಎಂಟಿಗೆ ಭೂಮಿ ನೀಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಯಾವುದೇ ಗೆಜೆಟ್ ಅಧಿಸೂಚನೆಯಿಲ್ಲದೆ, ಸಚಿವ ಸಂಪುಟದ ಅನುಮೋದನೆ ಪಡೆಯದೆ, ಡಿನೋಟಿಫಿಕೇಷನ್ ಮಾಡದೆ ಕ್ರಯ ಮತ್ತು ಗುತ್ತಿಗೆ ನೀಡಿರುವುದೇ ಕಾನೂನು ಬಾಹಿರ. ಇದನ್ನು ಬಿಜೆಪಿಯವರು ಮೊದಲು ತಿಳಿದು ಕೊಳ್ಳಬೇಕು ಎಂದರು. 'ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿದ ಭೂಮಿಯು ಡಿನೋಟಿಫೈ ಆಗಿಲ್ಲ.
ದಸರಾ ಕನ್ನಡಿಗರ ನಾಡು, ನುಡಿ, ಸಂಸ್ಕೃತಿಯ ಸಂಕೇತ: ಹಂಪ ನಾಗರಾಜಯ್ಯ
ಹೀಗಾಗಿ ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡಲು ಸಾಧ್ಯ ವಾಗಿಲ್ಲ, ಅದೇ ರೀತಿ ಎಚ್ ಎಂಟಿಗೆ ನೀಡಿರುವ ಪೀಣ್ಯ -ಜಾಲಹಳ್ಳಿ ಪ್ಲಾಂಟೇಷನ್ ಸರ್ವೇ ನಂ.1 ಮತ್ತು 2ರಲ್ಲಿನ 599 ಎಕರೆ ಭೂಮಿಯು ಡಿನೋಟಿಫೈ ಆಗಿಲ್ಲ. ಹೀಗಿರುವಾಗ ಅರಣ್ಯ ಭೂಮಿಯ ಮೇಲೆ ಎಚ್‌ಎಂಟಿ ಹೇಗೆ ಹಕ್ಕು ಹೊಂದುತ್ತದೆ? ಎಚ್‌ಎಂಟಿ ವಶದಲ್ಲಿರುವ ಸಾವಿರಾರು ಕೋಟಿ ರು. ಮೌಲ್ಯದ ಅರಣ್ಯ ಭೂಮಿಯನ್ನು ಕೇವಲ ನೂರಾರು ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಉಳಿದಿರುವ ಭೂಮಿ ಯನ್ನೂ ಕಡಿಮೆ ದರಕ್ಕೆ ಪರಭಾರೆ ಮಾಡಲು ಬಿಜೆಪಿ ಬೆಂಬಲಿಸುತ್ತಿದೆಯೇ?' ಎಂದು ಪ್ರಶ್ನಿಸಿದರು.