ಕೊರೋನಾ ನಿಭಾಯಿಸುವಲ್ಲಿ ಮೋದಿ ಯಶಸ್ವಿಯಾದ್ರಾ? ಅಕ್ಟೋಬರ್‌ನಲ್ಲಿ ಸಿಗುತ್ತೆ ಉತ್ತರ!

 ಮೋದಿ ಸಾಹೇಬರು ಕೊರೋನಾ ಹೇಗೆ ನಿಭಾಯಿಸಿದರು?| ಅಕ್ಟೋಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಸಿಗಲಿದೆ ಉತ್ತರ| ಚುನಾವಣೆಗೆ ಬಿಜೆಪಿ ತಯಾರಿ ಶುರು

The Election Of Bihar In October Will Give Answer To Whether PM Modi suceeded in Corona war

ಪಾಟ್ನಾ(ಮೇ.22): ಕೊರೋನಾ ಕಾಲದಲ್ಲೇ ಅಕ್ಟೋಬರ್‌ನಲ್ಲಿ ಬಿಹಾರದ ಚುನಾವಣೆ ನಡೆಯಲಿದ್ದು, ಮೋದಿ ಸಾಹೇಬರು ಕೊರೋನಾ ಹೇಗೆ ನಿಭಾಯಿಸಿದರು ಎನ್ನುವ ಜನಾಭಿಪ್ರಾಯದ ಉತ್ತರ ಬಿಹಾರದಿಂದ ಸಿಗಲಿದೆ.

ನಿತೀಶ್‌ ಕುಮಾರ್‌ 2015ರಲ್ಲಿ ಇದ್ದಷ್ಟುಈಗ ಜನಪ್ರಿಯರಲ್ಲ. ಆದರೆ ಲಾಲು ಜೈಲಿನಲ್ಲಿದ್ದಾರೆ, ತೇಜಸ್ವಿ ಯಾದವ್‌ಗೆ ಯಾದವರು, ಮುಸ್ಲಿಂ ಬಿಟ್ಟರೆ ಹೊರಗಡೆ ಜನಪ್ರಿಯತೆ ಇಲ್ಲ. ಇನ್ನು ಲಾಲು ಮನೆಯೊಳಗಡೆ ಯಾದವೀ ಕಲಹ ನಡೆಯುತ್ತಿದೆ. ಈಗಾಗಲೇ ಬಿಹಾರ ಚುನಾವಣೆಗೆ ಬಿಜೆಪಿ ತಯಾರಿ ಶುರುಮಾಡಿದ್ದು, ಮೋದಿ ಮತ್ತು ಅಮಿತ್‌ ಶಾ ಒಂದು ಸುತ್ತು ಸ್ಥಳೀಯ ನಾಯಕರ ಜೊತೆ ವಿಡಿಯೋ ಚರ್ಚೆ ಕೂಡ ನಡೆಸಿದ್ದಾರೆ.

ಬಿಹಾರದ ಚುನಾವಣೆ ನಿತೀಶ್‌ ಕುಮಾರ್‌ ಬಗೆಗಿನ ಜನಮತಗಣನೆ ಹೌದಾದರೂ ಇವತ್ತಿನ ಪರಿಸ್ಥಿತಿಯಲ್ಲಿ ಮೋದಿ ಬಗೆಗಿನ ಅಭಿಪ್ರಾಯ ಕೂಡ ಹೌದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Latest Videos
Follow Us:
Download App:
  • android
  • ios