ವಿಜಯೆಂದ್ರ ಸಿಎಂ ಆಗುವ ದಿನ ದೂರವಿಲ್ಲ: ಸಚಿವ ನಾರಾಯಣಗೌಡ

ಬಿ.ವೈ.ವಿಜಯೇಂದ್ರ ಅವರು ತಂದೆಯಂತೆಯೇ ಸಂಘಟನಾತ್ಮಕ ನಾಯಕ. ಅವರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿ ಮುಖ್ಯಮಂತ್ರಿಯಾಗುವ ದಿನ ದೂರವಿಲ್ಲ ಎಂದು ಸಚಿವ ಕೆ.ಸಿ.ನಾರಾಯಣಗೌಡ ಭವಿಷ್ಯ ನುಡಿದರು. 

The day BY Vijayendra will become CM is not far Says Minister KC Narayana Gowda gvd

ಕೆ.ಆರ್‌.ಪೇಟೆ (ಏ.15): ಬಿ.ವೈ.ವಿಜಯೇಂದ್ರ ಅವರು ತಂದೆಯಂತೆಯೇ ಸಂಘಟನಾತ್ಮಕ ನಾಯಕ. ಅವರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿ ಮುಖ್ಯಮಂತ್ರಿಯಾಗುವ ದಿನ ದೂರವಿಲ್ಲ ಎಂದು ಸಚಿವ ಕೆ.ಸಿ.ನಾರಾಯಣಗೌಡ ಭವಿಷ್ಯ ನುಡಿದರು. ಪಟ್ಟಣದಲ್ಲಿ ಜಯಮ್ಮ-ರಾಮಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ವಿಜಯೇಂದ್ರ ಅವರಿಗೆ ಉತ್ತಮ ನಾಯಕತ್ವ ಗುಣವಿದೆ. ಜನನಾಯಕನಾಗಿ ಬೆಳವಣಿಗೆ ಸಾಧಿಸುವ ಲಕ್ಷಣಗಳಿವೆ. ವಿಜಯೇಂದ್ರ, ರಾಘವೇಂದ್ರ ತಂದೆಗೆ ತಕ್ಕ ಮಕ್ಕಳಾಗಿದ್ದು, ಅವರಿಗೆ ರಾಜಕೀಯವಾಗಿ ಇನ್ನಷ್ಟುಸ್ಥಾನ-ಮಾನಗಳು ಸಿಗಲಿ. ಆದಷ್ಟುಶೀಘ್ರ ಮುಖ್ಯಮಂತ್ರಿ ಆಗುವ ಅವಕಾಶ ಲಭಿಸಲಿ ಎಂದು ಹಾರೈಸಿದರು.

ಯಡಿಯೂರಪ್ಪನವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೆಡಿಎಸ್‌ ಪಕ್ಷದಲ್ಲಿ ಎರಡು ಬಾರಿ ಶಾಸಕನಾಗಿದ್ದೆ. ಆಗ ಏನೂ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವರೆಂಬ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ ಎಂದು ಹೇಳಿದರು. ರಾಜ್ಯದಲ್ಲಿ ನುಡಿದಂತೆ ನಡೆಯುವವರು ಯಾರಾದರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ನಾನು ಬಿಜೆಪಿ ಸೇರಿದ ಬಳಿಕ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾದರು. ನನ್ನ ಪರ ಪ್ರಚಾರಕ್ಕೆ ವಿಜಯೇಂದ್ರ ಅವರನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದೆ. 

Kodagu: ಚುನಾವಣಾ ನೀತಿ ಸಂಹಿತೆಗೆ ಮದುವೆ ಮನೆಯಲ್ಲಿ ಇಳಿದ ಎಣ್ಣೆ ಕಿಕ್!

ಅದರಂತೆ ವಿಜಯೇಂದ್ರ ಅವರು ನನ್ನ ಗೆಲುವಿನ ಜವಾಬ್ದಾರಿ ಹೊತ್ತರು. ವಿಜಯೇಂದ್ರ ಅವರ ಕಾಲ್ಗುಣ ಚೆನ್ನಾಗಿದೆ. ಅದಕ್ಕಾಗಿಯೇ ಅವರನ್ನು ಪ್ರಚಾರಕ್ಕೆ ಇಲ್ಲಿಗೆ ಕರೆಸಿದ್ದೇನೆ ಎಂದು ನುಡಿದರು. ಮೇ 10ರಂದು ನಡೆಯಲಿರುವ ಚುನಾವಣೆಗೆ ಏ.17ಕ್ಕೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಜೆಡಿಎಸ್‌ನವರು ಯಾರನ್ನೂ ಬೆಳೆಯಲು ಬಿಡಲ್ಲ: ಜೆಡಿಎಸ್‌ ವರಿಷ್ಠರು ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡುವುದಿಲ್ಲ. ಒಬ್ಬರನ್ನು ತೆಗೆಯಲು ಮತ್ತೊಬ್ಬರನ್ನು ಹುಟ್ಟುಹಾಕುತ್ತಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷಕ್ಕೆ ನನ್ನ ಕೊಡುಗೆ ಏನೂ ಇರಲಿಲ್ಲ. ಆದರೆ, ಮಾಜಿ ಸ್ಪೀಕರ್‌ ಕೃಷ್ಣರನ್ನು ಮಟ್ಟಹಾಕಲು ನನ್ನನ್ನು ಹುಟ್ಟು ಹಾಕಿದ ಹಾಗೆ ನನ್ನನ್ನು ಮುಗಿಸಲು ಮತ್ತೊಬ್ಬರನ್ನು ಹುಟ್ಟು ಹಾಕಿದರು ಎಂದು ದೂರಿದರು. ನಾನು ಆ ಪಕ್ಷದಲ್ಲಿದ್ದೆ. ಅವರ ಮನೆ ಅನ್ನ ತಿಂದಿದ್ದೇನೆ. ಅವರನ್ನು ಟೀಕೆ ಮಾಡೊಲ್ಲ. 

ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್‌ ಜಾರಕಿಹೊಳಿ

ಆದರೆ, ನನ್ನ ನೋವನ್ನು ಹೇಳುತ್ತಿದ್ದೇನೆ ಅಷ್ಟೆ. ಎಚ್‌.ಡಿ.ದೇವೇಗೌಡರ ಕುಟುಂಬ ಯಾ ರನ್ನು ತಾನೆ ಬೆಳೆಯಲು ಬಿಟ್ಟಿದೆ ಹೇಳಿ ? ಎಂದು ಪ್ರಶ್ನಿಸಿದ ಅವರು, ಜೆಡಿಎಸ್‌ ಪಕ್ಷದಲ್ಲಿ ಶೇ.99ರಷ್ಟುನಾಯಕರು ಭಯದ ವಾತಾವರಣದಲ್ಲಿದ್ದಾರೆ ಎಂದರು. ಜೆಡಿಎಸ್‌ ಪಕ್ಷದಲ್ಲಿ ಇದ್ದಾಗ ಉಸಿರು ಕಟ್ಟುವ ವಾತಾವರಣವಿತ್ತು. ಆ ಪಕ್ಷದಲ್ಲಿ ಇರಲು ಸಾಧ್ಯವಾಗದೇ ಬಿಜೆಪಿ ಸೇರಬೇಕಾಯಿತು ಎಂದ ಅವರು, ಯಡಿಯೂರಪ್ಪ ನನ್ನ ತಂದೆ ಸಮಾನರು, ಈಗ ಬಿಜೆಪಿಯಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಅಮಿತ್‌ ಷಾ ನನಗೆ ಸೂಚಿಸಿದ್ದಾರೆ ಎಂದರು. ಕೆ.ಆರ್‌.ಪೇಟೆ ಕ್ಷೇತ್ರದ ಪ್ರಚಾರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಬರುತ್ತಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವವರೆಗೂ ಯಡಿಯೂರಪ್ಪನವರು ಸುಮ್ಮನೆ ಕೂರಲ್ಲ ಎಂದರು.

Latest Videos
Follow Us:
Download App:
  • android
  • ios