ಯಾಕೆ ಮತ್ತೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಹೇಳಿ?: ಸಿಎಂ ಸಿದ್ದರಾಮಯ್ಯ

ಯಾವ ಪುರುಷಾರ್ಥಕ್ಕೆ ಬಿಜೆಪಿ ಅಧಿಕಾರಕ್ಕೆ ಬರಬೇಕು? ಯಾಕೆ ಮತ್ತೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಹೇಳಿ? ಎಂದು ಹುಣಸೂರಿನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

Tell me why should Narendra Modi become PM again Says CM Siddaramaiah gvd

ಹುಣಸೂರು (ಏ.13): ಯಾವ ಪುರುಷಾರ್ಥಕ್ಕೆ ಬಿಜೆಪಿ ಅಧಿಕಾರಕ್ಕೆ ಬರಬೇಕು? ಯಾಕೆ ಮತ್ತೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಹೇಳಿ? ಎಂದು ಹುಣಸೂರಿನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ದೇಶದ ಜನರಿಗೆ ಬರೀ ಭ್ರಮೆ ಹುಟ್ಟಿಸಿದ್ದಾರೆ ಅಷ್ಟೆ. ದೇಶದ ಜನರಿಗೆ ಬರೀ ಸುಳ್ಳು ಹೇಳಿದ್ದಾರೆ. ಸಂವಿಧಾನ ಬದಲಾವಣೆ ಬಗ್ಗೆ ಮೋದಿ, ಅಮಿತ್ ಶಾ ಇಬ್ಬರು ಬೇರೆಯವರ ಮೂಲಕ ಹೇಳಿಸುತ್ತಾರೆ. ಮೋದಿ, ಅಮಿತ್ ಶಾ ಸಂವಿಧಾನ ಬದಲಾವಣೆ ಬಗ್ಗೆ ಅನಂತಕುಮಾರ್ ಹೆಗಡೆ ಮೂಲಕ ಹೇಳಿಸಿದ್ದಾರೆ ಎಂದು ಸಿಎಂ ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಮಾತ್ರ ಮೋದಿ ಬರ್ತಾರೆ: ಬರಗಾಲ ನೋಡೋಕೆ ಪ್ರಧಾನಿ ಬರಲಿಲ್ಲ.‌ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬರ್ತಾರೆ. ಪ್ರಧಾನಿ ದೇಶದ ದಾರಿ ತಪ್ಪಿಸುತ್ತಿದ್ದಾರೆ. ಜನರು 10 ವರ್ಷ ಅವರನ್ನು ನೋಡಿದ್ದಾರೆ. ಬಿಜೆಪಿ ವಿರುದ್ಧ ಮತ ಹಾಕುತ್ತಾರೆ. ಬರ ಪರಿಹಾರಕ್ಕಾಗಿ ಸೆಪ್ಟೆಂಬರ್ ತಿಂಗಳಲ್ಲಿ ಮನವಿ ಕೊಟ್ಟಿದ್ದೆವು. ಒಂದು ಪೈಸೆ ದುಡ್ಡು ಕೊಡಲಿಲ್ಲ. ನಿರ್ಮಲಾ ಸೀತಾರಾಮನ್ ನೀತಿ ಸಂಹಿತೆ ಬಂತು ಅಂದ್ರು. ನಾವು ಮನವಿ ಕೊಟ್ಟ ಅನೇಕ ತಿಂಗಳ ಬಳಿಕ ಚುನಾವಣೆ ಬಂತು ಎಂದು ಸಿಎಂ ಸಿದ್ದು ತಿಳಿಸಿದರು.

ಎಲೆಕ್ಷನ್‌ ಬಳಿಕ ಕೂಡ ಗ್ಯಾರಂಟಿ ಇರುತ್ತೆ: ಜನಸಾಮಾನ್ಯರ ಒಳಿತಿಗಾಗಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಕಂಡು ಸೋಲುವ ಭೀತಿಯಿಂದ ಬಿಜೆಪಿ ಹಾಗೂ ಜೆಡಿಎಸ್‌ನವರು ಮೈತ್ರಿ ಮಾಡಿಕೊಂಡಿದ್ದಾರೆ. ಸೋಲುವ ಭೀತಿಯಿಂದಲೇ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಇರಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳು ಯಾವ ಕಾರಣಕ್ಕೂ ನಿಲ್ಲಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್‌ಗೆ ಸಿದ್ಧಾಂತವಿಲ್ಲ, ಕಾರ್ಯಕ್ರಮವೂ ಇಲ್ಲ. 

ಡಿವಿಎಸ್‌, ಪ್ರತಾಪ್ ಸಿಂಹ ಗೋವಿಂದಾ ಗೋವಿಂದಾ.: ಎಚ್ಡಿಕೆಯವರೇ ನಾನು ಯಾವ ವಿಷ ಹಾಕಿದ್ದೀನಿ ಹೇಳಿ ಎಂದ ಡಿಕೆಶಿ

ಅಧಿಕಾರದಲ್ಲಿದ್ದಾಗ ಜನಪರ ಯೋಜನೆ ಜಾರಿಗೊಳಿಸಲಿಲ್ಲ. ನಾವು ಗ್ಯಾರಂಟಿ ಮೂಲಕ ಬಡವರು, ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 43%ರಷ್ಟು ಮತಗಳಿಸಿ 136 ಸ್ಥಾನ ಗೆದ್ದಿದೆ. ಅಧಿಕಾರದಲ್ಲಿದ್ದ ಬಿಜೆಪಿ 66 ಸ್ಥಾನ, ಜಾತ್ಯತೀತ ಎಂದು ಹೇಳುವ ಜೆಡಿಎಸ್ ನವರು ಕೇವಲ 19 ಸ್ಥಾನಗಳಲ್ಲಿ ಗೆದ್ದಿದ್ದಾರೆ. ತಾವು ಸೋಲುವುದು ಗ್ಯಾರಂಟಿ ಎಂದು ಭಯಗೊಂಡು ಮೈತ್ರಿ ಮೂಲಕ ಒಗ್ಗೂಡಿ, ಕಾಂಗ್ರೆಸ್‌ ನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಿದ್ಧಾಂತವಿಲ್ಲ, ಯಾವುದೇ ಕಾರ್ಯಕ್ರಮವೂ ಇಲ್ಲ, ಕಾಂಗ್ರೆಸ್ ಸೋಲಿಸುವ ಗುರಿ ಮಾತ್ರ ಅವರದ್ದು. ಅವರು ಅಧಿಕಾರದಲ್ಲಿದ್ದಾಗ ಬಡವರು, ರೈತರು, ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರಿಗಾಗಿ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಲ್ಲ. ಆದರೆ, ನಾವು ಗ್ಯಾರಂಟಿ ಮೂಲಕ ಬಡವರ, ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.

Latest Videos
Follow Us:
Download App:
  • android
  • ios