ಕ್ಷೇತ್ರಕ್ಕೆ ಹೋದ ಬಿಜೆಪಿ ಶಾಸಕನ ಅಡ್ಡಗಟ್ಟಿದ ಚಾಯ್‌ವಾಲ, ಬಾಕಿ ಮೊತ್ತ ಪಾವತಿಸುವಂತೆ ಧಮ್ಕಿ!
ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ನಾಯಕರು ತಮ್ಮ ತಮ್ಮ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಹೀಗೆ ಕಳೆದ ಚುನಾವಣೆ ಬಳಿಕ ಹಿಂತಿರುಗಿ ನೋಡದ ನಾಯಕ, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರಕ್ಕೆ ತೆರಳಿದ್ದಾರೆ. ಆದರೆ ಶಾಸಕನ ಅಡ್ಡಗಟ್ಟಿದ ಚಾಯ್‌ವಾಲಾ ಗದರಿಸಿದ್ದಾರೆ. ಇದರಿಂದ ಶಾಸಕ ತೀವ್ರ ಮುಜುಗರ ಅನುಭವಿಸಿದ್ದಾರೆ.
ಇಂದೋರ್(ನ.19): ಸಾಲು ಸಾಲು ಚುನಾವಣೆಗಳು ಆಗಮಿಸುತ್ತಿದೆ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಗಳಿಗೆ ತಯಾರಿಗಳು ಆರಂಭಗೊಂಡಿದೆ. ಇತ್ತ ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರದತ್ತ ಧಾವಿಸುತ್ತಿದ್ದಾರೆ. ಜನರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಹೀಗೆ ಕಳೆದ ಚುನಾವಣೆಗೆ ಕ್ಷೇತ್ರದಲ್ಲಿ ಭಾರಿ ತಿರುಗಾಟ ನಡೆಸಿದ್ದ ಮಧ್ಯಪ್ರದೇಶದ ಬಿಜೆಪಿ ಶಾಸಕ ಕರಣ್ ಸಿಂಗ್ ವರ್ಮಾ ಬಳಿಕ ಕ್ಷೇತ್ರದತ್ತ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿಲ್ಲ. ಕೆಲ ಕಾರ್ಯಕ್ರಮಗಳಿಗಾಗಿ ಕ್ಷೇತ್ರಕ್ಕೆ ಬೇಟಿ ನೀಡಿದ್ದು ಹೊರತುಪಡಿಸಿದರೆ ಕ್ಷೇತ್ರದತ್ತ ಮುಖಮಾಡಿದ್ದೇ ಕಡಿಮೆ. ಇನ್ನು 11 ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಕರಣ್ ಸಿಂಗ್ ವರ್ಮಾ ಮತ್ತೆ ಶೆಹೋರ್ ಜಿಲ್ಲೆಯ ಇಚಾವರ್ ಕ್ಷೇತ್ರಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ಚಾಯ್ ವಾಲಾ ಶಾಸನಕ ಕಾರು ಅಡ್ಡಗಟ್ಟಿದ್ದಾರೆ. ಬಳಿಕ 2018ರಿಂದ ಬಾಕಿ ಉಳಿಸಿಕೊಂಡಿರುವ ಚಹಾ ಬಿಲ್ 30,000 ರೂಪಾಯಿ ಪಾವತಿಸುವಂತೆ ಧಮ್ಕಿ ಹಾಕಿದ್ದಾರೆ.
ಮಾಜಿ ಕಂದಾಯ ಸಚಿವ ಕರಣ್ ಸಿಂಗ್ ವರ್ಮಾ 2018ರ ಮಧ್ಯಪ್ರದೇಶ ಚುನಾವಣೆ ವೇಳೆ ಕ್ಷೇತ್ರದಲ್ಲಿ ಭಾರಿ ತಿರುಗಾಟ ನಡೆಸಿದ್ದರು. ಈ ವೇಳೆ ಕಾರ್ಯಕರ್ತರು ಬೆಂಬಲಿಗರಿಗೆ ಇದೇ ಚಾಯ್ ವಾಲಾ ಅಂಗಡಿಯಲ್ಲಿ ಟೀ ಕುಡಿಸಿದ್ದರು. ಕ್ಷೇತ್ರಕ್ಕೆ ಭೇಟಿ ನೀಡಿದಾಗೆಲ್ಲ ಇದೇ ಚಾಯ್ ವಾಲಾ ಅಂಗಡಿಯಿಂದ ಟಿ ತರಿಸಿಕೊಂಡಿದ್ದಾರೆ. ಸಾವಿರಾರು ಕಾರ್ಯಕರ್ತರು, ಬೆಂಬಲಿಗರಿಗೆ ಟೀ ಕೊಡಿಸಿದ್ದಾರೆ. ಆದರೆ ದುಡ್ಡು ನೀಡಿಲ್ಲ. ಶಾಸಕರು ಚುನಾವಣೆ ಮುಗಿದ ಬಳಿಕ ಕ್ಲೀಯರ್ ಮಾಡುತ್ತಾರೆ ಎಂದು ಶಾಸಕರ ಪಿಎ ಹೇಳಿದ್ದರು ಎಂದು ಚಾಯ್ ವಾಲಾ ಆರೋಪಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ: ಅಪ್ಪ ಮಕ್ಕಳ ಸಂಖ್ಯೆ 7ಕ್ಕೇರಿಕೆ
2018ರ ಚುನಾವಣೆ ಮುಗಿದಿ ಇದೀಗ 2023ರ ಚುನಾವಣೆಗೆ ಮಧ್ಯಪ್ರದೇಶ ಸಜ್ಜಾಗಿದೆ. ಆದರೆ ನಾಯಕ ಕರಣ್ ಸಿಂಗ್ ವರ್ಮಾ ಚುನಾವಣೆಯಲ್ಲಿ ಗೆದ್ದ ಕಂದಾಯ ಸಚಿವರಾದರು. ಬಳಿಕ ಸಂಪುಟ ಪುನರ್ ರಚನೆಯಲ್ಲಿ ಮಂತ್ರಿಗಿರಿ ಕಳೆದುಕೊಂಡರು. ಆದರೂ ಕ್ಷೇತ್ರಕ್ಕೆ ಬೇಟಿ ನೀಡಿ ಚಹಾ ದುಡ್ಡು ಕೊಡುವ ಮನಸ್ಸು ಮಾಡಿರಿಲ್ಲ. ಹೀಗಾಗಿ ಅಡ್ಡಗಟ್ಟಿ ದುಡ್ಡು ಕೇಳಿದ್ದೇನೆ. ಇದೇ ಚಹಾ ಅಂಗಡಿಯಲ್ಲಿ ಜೀವನ ಸಾಗಬೇಕು. ಪಕ್ಷಕ್ಕೆ ಫ್ರೀಯಾಗಿ ಚಹಾ ನೀಡುವಷ್ಟು ದೊಡ್ಡವನ ನಾನಲ್ಲ ಎಂದು ಚಾಯ್ ವಾಲಾ ಹೇಳಿದ್ದಾನೆ.
ಆದರೆ ಚಾಯ್‌ವಾಲಾ ಆರೋವನ್ನು ಶಾಸಕ ಕರಣ್ ಸಿಂಗ್ ವರ್ಮಾ ನಿರಾಕರಿಸಿದ್ದಾರೆ. ಆದರೆ ತನ್ನ ಹೆಸರಿನಲ್ಲಿ ಯಾರಾದರೂ ಚಾಯ್ ತರಿಸಿಕೊಂಡಿದ್ದಾರೆ ಅನ್ನೋದು ನನಗೆ ತಿಳಿದಿಲ್ಲ. ಈ ಕುರಿತು ವಿಚಾರಿಸುತ್ತೇನೆ ಎಂದಿದ್ದಾರೆ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ವಿರುದ್ಧ ಗಡ್ಕರಿ ಸ್ಫೋಟ?
ಯಾವುದೇ ವ್ಯಕ್ತಿಯನ್ನು ಅಗತ್ಯವಿದ್ದಾಗ ಬಳಸಿಕೊಂಡು, ಕೆಲಸ ಮುಗಿದ ಬಳಿಕ ದೂರ ತಳ್ಳುವುದು ತಪ್ಪು’ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ. ತಮ್ಮನ್ನು ಸಂಸದೀಯ ಮಂಡಳಿಯಿಂದ ಕೈಬಿಟ್ಟಬೆನ್ನಲ್ಲೇ ಅವರು ಈ ರೀತಿಯ ಮಾತುಗಳನ್ನು ಆಡಿರುವುದು, ಬಿಜೆಪಿ ವರಿಷ್ಠರ ತಮ್ಮ ಅಸಮಾಧಾನ ತೋರ್ಪಡಿಸಿಕೊಂಡಿರುವುದರ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಂದಿನ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ: ಸಿದ್ದರಾಮಯ್ಯ
ನಾಗಪುರದಲ್ಲಿ ಶನಿವಾರ ಉದ್ದಿಮೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಳಸಿ ಬೀಸಾಡುವ ಕೆಲಸ ಮಾಡಬೇಡಿ. ಒಳ್ಳೆಯ ದಿನಗಳೇ ಇರಲಿ ಅಥವಾ ಕೆಟ್ಟದಿನಗಳೇ ಇರಲಿ, ಯಾರದ್ದಾದರೂ ಕೈಹಿಡಿದರೆ ಆತ ನಿಮ್ಮ ಸ್ನೇಹಿತ. ಆತನನ್ನು ಬಿಡಬೇಡಿ. ಉದಯಿಸುತ್ತಿರುವ ಸೂರ್ಯನನ್ನು ಆರಾಧಿಸಬೇಡಿ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.