Asianet Suvarna News Asianet Suvarna News

ಪೊಲೀಸರ ಮಾತು ಕೇಳದೆ ಮೌಲ್ವಿ ಮನೆಗೆ ಹೋದ ಸಿಎಂ; ಇನ್ನಷ್ಟು ದಾಖಲೆ ಬಿಡುಗಡೆ ಮಾಡುವೆ ಎಂದ ಯತ್ನಾಳ್‌!

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತನ್ವೀರ್ ಪೀರ್ ಎಂಬ ಮೌಲ್ವಿ ವಿರುದ್ಧ ಗಂಭೀರ ಆರೋಪವಿದೆ. ಹಾಗಾಗಿ ಅವರ ಮನೆಗೆ ಹೋಗಬಾರದು ಎಂದು ಪೊಲೀಸರು ಹೇಳಿದರೂ ಅದನ್ನು ಮೀರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಲ್ವಿ ನಿವಾಸಕ್ಕೆ ಹೋಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಲ್‌ ಆರೋಪಿಸಿದ್ದಾರೆ.

Tanvir peera ISIS connection issue Basanagowda patil yatnala reaction at belagavi rav
Author
First Published Dec 9, 2023, 5:48 AM IST

ಸುವರ್ಣಸೌಧ (ಡಿ.9) :  ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತನ್ವೀರ್ ಪೀರ್ ಎಂಬ ಮೌಲ್ವಿ ವಿರುದ್ಧ ಗಂಭೀರ ಆರೋಪವಿದೆ. ಹಾಗಾಗಿ ಅವರ ಮನೆಗೆ ಹೋಗಬಾರದು ಎಂದು ಪೊಲೀಸರು ಹೇಳಿದರೂ ಅದನ್ನು ಮೀರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಲ್ವಿ ನಿವಾಸಕ್ಕೆ ಹೋಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಲ್‌ ಆರೋಪಿಸಿದ್ದಾರೆ.

ಸುವರ್ಣಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈಗ ಸಿದ್ದರಾಮಯ್ಯ ಅವರು ಮೌಲ್ವಿ ಮನೆಗೆ ಹೋಗಿರುವ ವಿಡಿಯೋ ಬಿಡುಗಡೆ ಮಾಡಿದ್ದೇನೆ. ಪೊಲೀಸರು ಬೇಡ ಎಂದರೂ ಮುಖ್ಯಮಂತ್ರಿ ಅವರು ಮುಸ್ಲಿಮರ ಮತಕ್ಕಾಗಿ ಮೌಲ್ವಿಯ ನಿವಾಸಕ್ಕೆ ಹೋಗಿದ್ದಾರೆ. ಅಲ್ಲದೆ, ಪೊಲೀಸರು ಹೇಳಿದರೂ ನಿಮ್ಮ ಮನೆಗೆ ಬಂದಿದ್ದೇನೆ ಎಂದು ಉದ್ಧಟತನದಿಂದ ಹೇಳಿದ್ದಾರೆ. ಸಚಿವ ಎಂ.ಬಿ.ಪಾಟೀಲ್‌ ಒತ್ತಡ ಹಾಕಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ನಾನು ಮೌಲ್ವಿ ವಿರುದ್ಧ ಮಾಡಿರುವ ಆರೋಪಗಳ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಪೊಲೀಸರಿಗೂ ಅವುಗಳನ್ನು ಒದಗಿಸುತ್ತೇನೆ ಎಂದರು.

ಯತ್ನಾಳರ ನಿಜವಾದ ಗುರಿ ಪ್ರಧಾನಿ ಮೋದಿ; ಸಿಎಂ ಸಿದ್ದರಾಮಯ್ಯ ಟ್ವೀಟ್ ವೈರಲ್!

ಮೌಲ್ವಿ ಹಾಶ್ಮಿ ಜತೆ ನನಗೆ ಬಿಸಿನೆಸ್‌ ಇಲ್ಲ: ಯತ್ನಾಳ್‌

ಐಎಸ್‌ ಭಯೋತ್ಪಾದಕರ ಜೊತೆಗೆ ನಂಟಿದೆ ಎಂದು ಆರೋಪಿಸಿರುವ ಮೌಲ್ವಿ ತನ್ವೀರ್‌ ಹಾಶ್ಮಿಗೂ ನನಗೂ ಯಾವುದೇ ಸಂಬಂಧವಿಲ್ಲ, ನಾವು ಯಾವುದೇ ಉದ್ಯಮದ ಪಾಲುದಾರರೂ ಅಲ್ಲ.ಇಂತಹ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಯತ್ನಾಳ್‌ ಹೇಳಿದರು.

ನಮ್ಮ ನಡುವೆ ಉದ್ಯಮ ವ್ಯವಹಾರವಿದೆ ಎಂದು ಆರೋಪಿಸಲಾಗುತ್ತಿರುವುದು 50-60 ವರ್ಷದ ಹಿಂದಿನ ಲೀಸ್ ಆಸ್ತಿಗೆ ಸಂಬಂಧಿಸಿದ್ದು. ಅದು ಪಾಲಿಕೆ ಆಸ್ತಿ, ನನ್ನ ಆಸ್ತಿ ಅಲ್ಲ. ಅದರ ಮೂಲ ಮಾಲಿಕ ನಮ್ಮ ತಂದೆ. ನಾನು ಆಗ ಅಪ್ರಾಪ್ತನಾಗಿದ್ದೆ. 55 ವರ್ಷಗಳ ಹಿಂದೆ ನಮ್ಮ ತಂದೆ ಜೊತೆಗೆ ನಾಲ್ಕೈದು ಜನ ಇದ್ದರು. ಅದರಲ್ಲಿ ಇಬ್ಬರು ಮುಸ್ಲಿಂ, ಇಬ್ಬರು ಹಿಂದೂಗಳಿದ್ದರು. ಒಬ್ಬ ಮುಸ್ಲಿಂ ಮಾರಿ ಹೋದ. ನಮ್ಮದೇ ಟೂರಿಸ್ಟ್‌ ಹೋಟೆಲ್‌ ಕೂಡ ಇದೆ. ಆದರೆ ಆಸ್ತಿ ಮಾರಿದ ಲೀಸ್ ಹೋಲ್ಡರ್‌ಗೂ ಈ ಭಯೋತ್ಪಾದಕನಿಗೂ ಯಾವುದೇ ಸಂಬಂಧವೂ ಇಲ್ಲ ಎಂದರು.

ಸಿಎಂ ಜತೆಗಿದ್ದ ಮೌಲ್ವಿಗೆ ಐಸಿಸ್‌ ಜತೆಗೆ ನಂಟು ಆರೋಪ; ಧರ್ಮಗುರು ಜತೆ ಗಡ್ಕರಿ ಫೋಟೋ ಬಿಡುಗಡೆ ಕಾಂಗ್ರೆಸ್‌ ನಾಯಕರಿಂದ ತಿರುಗೇಟು!

Latest Videos
Follow Us:
Download App:
  • android
  • ios