ಮೇಕೆದಾಟು ಜಲ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕರ್ನಾಟಕ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಭಾಗಿ ಆಗಿದ್ದಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಆಕ್ಷೇಪಿಸಿದ್ದಾರೆ. 

ನವದೆಹಲಿ (ಮೇ.21): ಮೇಕೆದಾಟು ಜಲ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕರ್ನಾಟಕ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಭಾಗಿ ಆಗಿದ್ದಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಆಕ್ಷೇಪಿಸಿದ್ದಾರೆ. ‘ಡಿಕೆಶಿ ಅವರು ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡುವ ಭರವಸೆ ನೀಡಿದ್ದರು.ಈ ಸಂಬಂಧ ಅವರು ಪಾದಯಾತ್ರೆಯನ್ನೂ ಕೈಗೊಂಡಿದ್ದರು. 

ಈ ಯೋಜನೆಯು ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಿದ್ದರೂ ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ಸ್ಟಾಲಿನ್‌ ಹೋಗಿದ್ದೇಕೆ?’ ಎಂದು ಅಣ್ಣಾಮಲೈ ಶನಿವಾರ ಪ್ರಶ್ನಿಸಿದ್ದಾರೆ. ಇದೇ ವೇಳೆ, 2000 ರು. ನೋಟು ರದ್ದತಿಗೆ ಸ್ಟಾಲಿನ್‌ ಆಕ್ಷೇಪಿಸಿದ್ದಕ್ಕೂ ಕಿಡಿಕಾರಿರುವ ಅಣ್ಣಾಮಲೈ, ‘ಬಹುಶಃ 2024ರ ಲೋಕಸಭೆ ಚುನಾವಣೆಗೆ ಈ ನೋಟು ಹಂಚಲು ಆಗುವುದಿಲ್ಲ ಎಂದು ಸ್ಟಾಲಿನ್‌ಗೆ ನಿರಾಶೆಯಾಗಿರಬೇಕು’ ಎಂದು ವ್ಯಂಗ್ಯವಾಡಿದ್ದಾರೆ.

5ನೇ ಬಾರಿಯೂ ಡಾ.ಜಿ.ಪರಮೇಶ್ವರ್‌ ಸಚಿವ: ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾದ ಪರಂ

ಮಣಿಕಂಠ ಆಡಿಯೋ ತುಣುಕು ತಿರುಚಲಾಗಿದೆ: ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ ಕುಟುಂಬದ ಕೊಲೆಗೆ ಸಂಚು ಸಂಬಂಧ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ವಿರುದ್ಧ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಆಡಿಯೋ ತುಣುಕನ್ನು ತಿರುಚಲಾಗಿದೆ. ಕಾಂಗ್ರೆಸ್‌ ಚಿತ್ತಾಪುರದಲ್ಲಿ ಸೋಲುವ ಭೀತಿಯಲ್ಲಿ ಎಲ್‌ಕೆಜಿ ಮಕ್ಕಳ ರೀತಿ ಈ ಆರೋಪ ಮಾಡಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಈ ಆಡಿಯೋ ಕಟ್‌ ಆ್ಯಂಡ್‌ ಪೇಸ್ಟ್‌ ಆಡಿಯೋ. ರಾಜ್ಯದಲ್ಲಿ ಕಳೆದೊಂದು ವಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ರಾರ‍ಯಲಿಗಳಿಗೆ ರಾಜ್ಯದಲ್ಲಿ ವ್ಯಕ್ತವಾಗುತ್ತಿರುವ ಜನಬೆಂಬಲ ಕಂಡು ಕಾಂಗ್ರೆಸ್‌ಗೆ ಸೋಲುವ ಭಯ ಶುರುವಾಗಿದೆ. ಹೀಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.

‘ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಕೇವಲ 26 ವರ್ಷದ ಯುವಕ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಆದರೂ ಸೋಲುವ ಭಯದಲ್ಲಿ ಪ್ರಿಯಾಂಕ್‌ ಖರ್ಗೆ ಕಳೆದ ಎರಡು ವರ್ಷಗಳಿಂದ ಮಣಿಕಂಠ ಅವರ ವಿರುದ್ಧ ಮಾನನಷ್ಟಮೊಕದ್ದಮೆ ಸೇರಿದಂತೆ ಹಲವು ದೂರು ನೀಡಿದ್ದಾರೆ. ಮೂರನೇ ವ್ಯಕ್ತಿಗಳಿಂದಲೂ ದೂರು ಕೊಡಿಸಿದ್ದಾರೆ. ಈಗ ಕಾಂಗ್ರೆಸ್‌ ನಾಯಕರು ಕಟ್‌-ಪೇಸ್ಟ್‌ ಆಡಿಯೊ ಬಿಡುಗಡೆಗೊಳಿಸಿ ಮಣಿಕಂಠ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಶಿವಮೊಗ್ಗ ಶಾಸ​ಕ​ರ ‘ಕೈ​’ ಹಿಡಿ​ಯ​ಲಿಲ್ಲ ಸಿದ್ದ​ರಾ​ಮ​ಯ್ಯ ಸರ್ಕಾರ

ನಂದಿನಿ ಮಜ್ಜಿಗೆ ಕುಡಿಯಿರಿ: ಕರ್ನಾಟಕದಲ್ಲಿ ರಾಜಕೀಯದ ಹೀಟ್‌ ಹೆಚ್ಚಾಗಿದೆ. ಉತ್ತರ ಭಾರತದ ರಣದೀಪ್‌ ಸಿಂಗ್‌ ಸುರ್ಜೇವಾಲಾಗೆ ಈ ಹೀಟ್‌ ತಡೆಯಲು ಆಗುತ್ತಿಲ್ಲ. ಹೀಗಾಗಿ ನಂದಿನಿ ಮಜ್ಜಿಗೆ ಕುಡಿದು ತಂಪಾಗಬೇಕು. ಮಣಿಕಂಠ ಅವರನ್ನು ರೌಡಿ ಶೀಟರ್‌ ಎನ್ನುವ ಮುನ್ನ ಕಾಂಗ್ರೆಸ್‌ ನಾಯಕರು ತಮ್ಮದೇ ಪಕ್ಷದಲ್ಲಿ ಕ್ರಿಮಿನಲ್‌ ಹಿನ್ನೆಲೆಯ ಎಷ್ಟುಜನಕ್ಕೆ ಟಿಕೆಟ್‌ ನೀಡಲಾಗಿದೆ ಎಂದು ನೋಡಿಕೊಳ್ಳಬೇಕು. ಕೊಲೆ ಪ್ರಕರಣ ಆರೋಪಿ ವಿನಯ ಕುಲಕರ್ಣಿಗೆ ನ್ಯಾಯಾಲಯ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದೆ. ಆದರೂ ಅವರಿಗೆ ಟಿಕೆಟ್‌ ನೀಡಿ ಅಭ್ಯರ್ಥಿ ಮಾಡಲಾಗಿದೆ. ಹಿಂದಿನ ಉತ್ತರ ಪ್ರದೇಶ, ಬಿಹಾರದಲ್ಲಿ ಈ ರೀತಿಯ ರಾಜಕಾರಣ ಇತ್ತು ಎಂದು ಹೇಳಿದರು.