Ballari: ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾದ ಬಳ್ಳಾರಿ ಮೇಯರ್ ಡೀಲ್..!
* ಬಳ್ಳಾರಿ ನಗರ ಮತ್ತು ಗ್ರಾಮಾಂತರ ಶಾಸಕರ ಟಾಕ್ ವಾರ್
* ಹಣ ಪಡೆದವರು ಕೊಟ್ಟವರು ಇಬ್ಬರು ಕಾಂಗ್ರೆಸ್ ನಾಯಕರೇ
* ಬಿಜೆಪಿ ಹೆಸರು ಯಾಕೆ ತಳಕು ಹಾಕ್ತಿದ್ದಾರೆಂದು ಶಾಸಕ ಸೋಮಶೇಖರ್ ರೆಡ್ಡಿ ಅಕ್ರೋಶ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ(ಮೇ.14): ಸಾರ್ವತ್ರಿಕ ಚುನಾವಣೆಗೆ(Karnataka Assembly Election 2023) ಇನ್ನೂ ಒಂದು ವರ್ಷ ಬಾಕಿ ಇರುವಂತೆ ಬಳ್ಳಾರಿಯಲ್ಲಿ(Ballari) ರೆಬಲ್ ರಾಜಕೀಯ ಆರಂಭವಾಗಿದೆ. ಪಾಲಿಕೆ ಮೇಯರ್ ಸ್ಥಾನಕ್ಕಾಗಿ ನಡೆದ ಮೂರೂವರೆ ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಬಿಜೆಪಿ(BJP) ಮತ್ತು ಕಾಂಗ್ರೆಸ್(Congress) ಶಾಸಕರಿಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡೋ ಮೂಲಕ ಮತ್ತೊಮ್ಮೆ ಬಳ್ಳಾರಿ ರಗಡ್ ರಾಜಕೀಯಕ್ಕೆ ನಾಂದಿ ಹಾಡ್ತಿದ್ದಾರೆ.
ಪ್ರಕರಣದ ಹಿನ್ನೆಲೆ ಮೊನ್ನೆ ಕಾರ್ಪೊರೇಟರ್ ಅಸೀಫ್ ಶಾಸಕ ನಾಗೇಂದ್ರ(Nagendra) ಮಾವ ಎರಿಸ್ವಾಮಿ ಮೇಯರ್ ಮಾಡೋದಾಗಿ ಮೂರುವರೆ ಕೋಟಿ ಹಣ ಪಡೆದಿರೋದಾಗಿ ದೂರು ನೀಡಿದ್ರು. ಇದೇ ವಿಚಾರವಾಗಿ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಗ್ವಾದ ತಾರಕಕ್ಕೇರಿದೆ.
Ballari: ಬಂಗಾರದ ಅಂಗಡಿಯಲ್ಲಿ ಕಳ್ಳತನ: ಕ್ಷಣಾರ್ಧದಲ್ಲಿ ನಡೆದ ಘಟನೆಗೆ ಕಂಗಾಲಾದ ಮಾಲೀಕ!
ಡೀಲ್ ಹಿಂದೆ ಬಿಜೆಪಿ ನಾಯಕರ ಕೈವಾಡ ಶಾಸಕ ನಾಗೇಂದ್ರ
ಹೌದು, ಬಳ್ಳಾರಿ ಮೇಯರ್(Mayor) ಸ್ಥಾನಕ್ಕಾಗಿ ಮೂರುವರೆ ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಹಿಂದೆ ಬಿಜೆಪಿ ನಾಯಕರಿದ್ದಾರೆಂದು ಶಾಸಕ ನಾಗೇಂದ್ರ ನೇರವಾಗಿ ಆರೋಪಿಸಿದ್ದಾರೆ. ಬಿಜೆಪಿಯ ತಂತ್ರಗಾರಿಕೆ ಅಲ್ಲ. ಇದು ಬಿಜೆಪಿಯ ಕುತಂತ್ರಗಾರಿಕೆಯ ರಾಜಕೀಯ. ಕಾರ್ಪೊರೇಟರ್ ಅಸೀಫ್ ಅವರು ನಮ್ಮ ಮಾವ ಎರಿಸ್ವಾಮಿ ವಿರುದ್ಧ ದೂರು ನೀಡೋದ್ರ ಹಿಂದೆ ಬಿಜೆಪಿ ನಾಯಕರಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಮೇಲೆ ಬಿಜೆಪಿ ಬಾವುಟ ಹಾರಿಸಲು ಪ್ಲಾನ್
ಪಾಲಿಕೆಯಲ್ಲಿ(Ballari City Corporation) ಕಾಂಗ್ರೆಸ್‌ನ್ನು ಪದಚ್ಯುತಿ ಮಾಡಿ ಬಿಜೆಪಿ ಬಾವುಟ ಹಾರಿಸಲು ಪ್ಲಾನ್ ನಡೆಸಲಾಗ್ತದೆಯಂತೆ. ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಸದಸ್ಯರು ಬಲಿಯಾಗದ ಹಿನ್ನೆಲೆ, ಮೇಯರ್ ಸ್ಥಾನಕ್ಕೆ ಡೀಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಪೋರೇಟರ್ ರಿಂದಲೇ ದೂರು ಕೊಡಿಸಲಾಗಿದೆ ಎನ್ನುವುದು ಕಾಂಗ್ರೆಸ್ ವಾದವಾಗಿದೆ.
ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಶ್ರೀರಾಮುಲು ಬರುತ್ತಿರೋ ಹಿನ್ನೆಲೆಯಲ್ಲಿ ಇಷ್ಟೆಲ್ಲ ರಾದ್ದಾಂತ ಮಾಡ್ತಿದ್ದಾರೆ. ಇನ್ನೂ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಮಾಡ್ತಿದ್ದಾರಂತೆ ಹೀಗಾಗಿ ಇಲ್ಲಿಯ ಕಾರ್ಪೋರೇಟರ್ ಗಳಿಗೆ ಬಿಜೆಪಿಗೆ ಬೆಂಬಲ ನೀಡುವಂತೆ ಹಣ ಕೊಡೋದು ಒಪ್ಪದೇ ಇದ್ರೇ, ಹಳೇ ಕೇಸ್ ರೀ ಓಪನ್ ಮಾಡೋದು ಮಾಡ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಕಾಂಗ್ರೆಸ್ ಕಾರ್ಪೋರೆಟರ್ ಗಂಡರೊಬ್ಬರನ್ನು ಬಂಧಿಸಿದ್ದಾರೆ..ಮತ್ತೊಬ್ಬ ಕಾರ್ಪೊರೇಟರ್ ಜಮೀನು ಸರ್ಕಾರಿ ಜಮೀನು ಎಂದು ಜಪ್ತಿ ಮಾಡಿದ್ದಾರೆ.
ಇದೇ ಮಾದರಿಯಲ್ಲಿ ಕಾರ್ಪೋರೇಟರ್ ಅಸೀಫ್ ಅವರನ್ನು ಹೆದರಿಸೋ ಮೂಲಕ ಅವರಿಂದ ದೂರು ಕೊಡಿಸಿದ್ದಾರೆ ಶಾಸಕ ನಾಗೇಂದ್ರ ಆರೋಪಿಸಿದ್ದಾರೆ.
ಬಳ್ಳಾರಿ ಮೇಯರ್ ಸ್ಥಾನಕ್ಕೆ ಕೋಟಿ ಕೋಟಿ ಡೀಲ್: ಶಾಸಕ ನಾಗೇಂದ್ರ ಮಾವನ ವಿರುದ್ಧ ತಿರುಗಿಬಿದ್ದ ಪಾಲಿಕೆ ಸದಸ್ಯ
ಕಾಂಗ್ರೆಸ್ ಒಳಜಗಳ ನಮ್ಮ ತಲೆಗೆ ಕಟ್ಟುತ್ತಿದ್ದಾರೆ ಇನ್ನೂ ಬಳ್ಳಾರಿ ಪಾಲಿಕೆ ಮೇಯರ್ ಸ್ಥಾನಕ್ಕೆ ಮೂರುವರೆ ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರೋ ಶಾಸಕ ಸೋಮಶೇಖರ್ ರೆಡ್ಡಿ(Somashekhara Reddy) , ಕಾಂಗ್ರೆಸ್ ನವರೇ ಒಳ ಜಗಳ ಮಾಡಿಕೊಂಡು ಅದನ್ನು ನಮ್ಮ ಮೇಲೆ ದೂರಿದ್ರೇ ಹೇಗೆ..? ಹಣ ಪಡೆದವರು ಕಾಂಗ್ರೆಸ್‌ನವರೇ ಹಣ ಕೊಟ್ಟವರು ಕಾಂಗ್ರೆಸ್‌ನವರೇ. ಈ ವಿಚಾರ ನಮಗೆ ಗೊತ್ತಿಲ್ಲ. ಇದರಲ್ಲಿ ಶ್ರೀರಾಮುಲು ಅವರನ್ನು ಯಾಕೆ ಎಳೆದು ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಪಬ್ಲಿಕ್‌ನಲ್ಲಿರುತ್ತೇವೆ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡೋದಿಲ್ಲ. ಶ್ರೀರಾಮುಲು ಹೆಸರು ತೆಗೆದುಕೊಳ್ಳಲು ನೈತಿಕ ಹಕ್ಕು ಕಾಂಗ್ರೆಸ್ ಇಲ್ಲ ಎಂದಿದ್ದಾರೆ. ಶ್ರೀರಾಮುಲು ಗ್ರಾಮಾಂತರ ಕ್ಷೇತ್ರಕ್ಕೆ ಬರೋದು ಹೈಕಮೆಂಡ್‌ಗೆ ಬಿಟ್ಟ ವಿಚಾರ ಶ್ರೀರಾಮುಲು ಗ್ರಾಮಾಂತರಕ್ಕೆ ಸ್ಪರ್ಧೆ ಮಾಡೋದು ಬಿಡೋದು ಹೈಕಮೆಂಡ್‌ಗೆ ಬಿಟ್ಟ ವಿಚಾರ. ಆದ್ರೇ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎನ್ನುವ ಭಯದಿಂದ ಕಾಂಗ್ರೆಸ್ ಒಳಜಗಳಕ್ಕೆ ರಾಮುಲು ಹೆಸರು ಹೇಳ್ತಿದ್ದಾರಂತೆ.
ಇನ್ನೂ ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಬಳ್ಳಾರಿ ಕೌಲಬಜಾರ್ ಏರಿಯಾದ 9 ವಾರ್ಡ್‌ಗಳು ಬರುತ್ತವೆ ಇಲ್ಲಿ ಅಲ್ಪ ಸಂಖ್ಯಾತರ ಮತಗಳೇ ಪ್ರಮುಖವಾಗಿವೆ. ಹೀಗಾಗಿ ಇಷ್ಟೇಲ್ಲ ಕೆಸರೆರಚಾಟ ನಡೆದಿದೆ.