ರಾಮ ಮಂದಿರ ಉದ್ಘಾಟನೆ ಮತ್ತು ಇಂಡಿಯಾ ಮೈತ್ರಿಯ ಮಹಾ ಮುಜುಗರ!

ತನ್ನ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ಎಲ್ಲರಿಗೂ ಭಗವಾನ್‌ ಶ್ರೀರಾಮ ದೊಡ್ಡ ಮಟ್ಟದ ಮುಜುಗರ ನೀಡಿದ್ದಾರೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ದೇಶದ ವಿರೋಧ ಪಕ್ಷಗಳು ಬಾಯ್ಕಾಟ್‌ ಮಾಡಿರುವ ಪರಿಣಾಮ ಮುಂದಿನ ದಿನಗಳಲ್ಲಿ ತಿಳಿಯಲಿದೆ ಎನ್ನುತ್ತಾರೆ ಎಸ್‌.ಗುರುಮೂರ್ತಿ

Swaminathan Gurumurthy Ram Mandir and the great INDIA embarrassment Who opposed building a temple san

2024ರ ಜನವರಿ 222 ರಂದು ರಾಷ್ಟ್ರಾದ್ಯಂತ ಅದ್ದೂರಿ ಆಚರಣೆಗಳೊಂದಿಗೆ ಶ್ರೀ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಅಯೋಧ್ಯೆಯಲ್ಲಿ ನಡೆಯಿತು. ರಾಮ ಮಂದಿರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಮಿಸಿದೆ. ಪ್ರಧಾನಿ ಮೋದಿ ಮತ್ತು ರಾಮಜನ್ಮ ಭೂಮಿ ಚಳವಳಿಯ ನೇತೃತ್ವ ವಹಿಸಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿತ್ತು. ಇದಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲಾ ವಿರೋಧ ಪಕ್ಷಗಳ ನಾಯಕರು ಮತ್ತು ರಾಮ ಮಂದಿರ ನಿರ್ಮಾಣದ ವಿರುಉದ್ಧ ಮೊಕದ್ದಮೆ ಹೂಡಿದ್ದ ಎಲ್ಲಾ ಮುಸ್ಲಿಂ ಮುಖಂಡರನ್ನು ಆಹ್ವಾನಿಸುವ ಮೂಲಕ ಟ್ರಸ್ಟ್‌ ರಾಜಕೀಯೇತರವಾಗಿ ಸಮಾರಂಭವನ್ನು ಆಯೋಜನೆ ಮಾಡಿತ್ತು. ಆದರೆ, ರಾಮ ಮಂದಿರ ಸಮಾರಂಭದ ಆಹ್ವಾನವು ಹಿಂದೂ ವಿರೋಧಿ ಮತ್ತು ಮೋದಿ ವಿರೋಧಿ ಪಕ್ಷಗಳಿಗೆ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಬೇಕೇ ಅಥವಾ ಭೇಡವೇ ಎನ್ನುವ ದೊಡ್ಡ ಸಂದಿಗ್ದತೆಯನ್ನು ಉಂಟು ಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಇದು ಇಂಡಿ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದ ಮುಖಭಂಗಕ್ಕೆ ಕಾರಣವಾಯಿತು. ಏಕೆ? ಎನ್ನುವ ಪ್ರಶ್ನೆಗೆ ಉತ್ತರ ತಿಳಿಯಲು ರಾಮಜನ್ಮ ಭೂಮಿ ಆಂದೋಲನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.

300 ವರ್ಷದ ಶ್ರಮ
300 ವರ್ಷಗಳಿಗೂ ಹೆಚ್ಚು ಕಾಲ, ಹಿಂದೂ ಸಮುದಾಯವು ಯುದ್ಧದ ಮೂಲಕ, ಮರಾಠರ ಆಳ್ವಿಕೆಯಲ್ಲಿ ರಾಜತಾಂತ್ರಿಕತೆಯ ಮೂಲಕ ಮತ್ತು ಬಿಳಿಯರ ಅವಧಿಯಲ್ಲಿ ಕಾನೂನು ವಿಧಾನಗಳ ಮೂಲಕ  ಭಗವಾನ್ ರಾಮನ ಜನ್ಮಸ್ಥಳವನ್ನು ಪಡೆಯಲು ಶ್ರಮಿಸಿತು. ಅದರೆ, 1980ರಲ್ಲಿ ಇದು ಸಾಮೂಹಿಕ ಚಳುವಳಿಯಾಗಿ ಮಾರ್ಪಟ್ಟಿತ್ತು. ಬಿಜೆಪಿ, ಶಿವಸೇನೆ ಹಾಗೂ ಜಯಲಲಿತಾ ನೇತೃತ್ವದ ಎಡಿಎಂಕೆ. ಕೇವಲ ಊ ಮೂರು ಪಕ್ಷಗಳು ಮಾತ್ರವೇ ಈ ಚಳುವಳಿಯನ್ನು ಬೆಂಬಲಿಸಿದವು. ಆದರೆ, ಮತಬ್ಯಾಂಕ್‌ ರಾಜಕಾರಣದಿಂದಾಗಿ ದೇಶದ ಇತರ ಎಲ್ಲಾ ವಿರೋಧ ಪಕ್ಷಗಳು ಇದನ್ನು ಬಲವಾಗಿ ವಿರೋಧಿಸಿದರು.  ‘ರಾಮ ಮಂದಿರ ಆಂದೋಲನವು ಜಾತ್ಯತೀತತೆಯನ್ನು ನಾಶಪಡಿಸುತ್ತದೆ’ ಎಂದು ಕೇಂದ್ರದಲ್ಲಿದ್ದ ಅಂದಿನ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯದಲ್ಲಿದ್ದ ಸಮಾಜವಾದಿ ಪಕ್ಷದ ಸರ್ಕಾರ ಮತ್ತು ಇತರ ಜಾತ್ಯತೀತ ಪರ ಪಕ್ಷಗಳು ಚಳವಳಿಯನ್ನು ಹತ್ತಿಕ್ಕಲು ಎಲ್ಲ ಪ್ರಯತ್ನಗಳನ್ನು ಮಾಡಿದವು. ಅದರಲ್ಲೂ ನರಸಿಂಹ ರಾವ್ ಸರ್ಕಾರ ಕುತಂತ್ರಗಳನ್ನು ಆಡಿ ಚಳವಳಿಯನ್ನು ದುರ್ಬಲಗೊಳಿಸಲು ಯತ್ನಿಸಿತು. ಮುಸ್ಲಿಮರು ನಮಾಜು ಮಾಡದ ಬಾಬರಿ ಮಸೀದಿಯನ್ನು ಸೆಕ್ಯುಲರ್ ವಾದಿಗಳು ಜಾತ್ಯತೀತತೆಯ ಸಂಕೇತವನ್ನಾಗಿ ಮಾಡಿಬಿಟ್ಟಿದ್ದರು.

ಜಾತ್ಯಾತೀತದ ಪರ ನಿಂತ ಪಕ್ಷಗಳು ಹಾಗೂ ಅಧಿಕಾರಿಗಳು ರಾಮ ಮಂದಿರ ನಿರ್ಮಿಲು ಬಯಸಿದ್ದ ಹಿಂದೂಗಳ ನ್ಯಾಯಸಮ್ಮತ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ಬಾಬ್ರಿ ಮಸೀದಿ ಎನ್ನುವ ಕಟ್ಟಡವನ್ನು ನೆಲಸಮ ಮಾಡಲಾಯಿತು. ಅದರೊಂದಿಗೆ ಬಿಜೆಪಿಯ ಹಿಂದೂ ರಾಜಕಾರಣ ಕೂಡ ವಿಕಸನಗೊಂಡಿತು. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಹಿಂದೂ ವಿರೋಧಿ ಎಂಬುದು ಸೆಕ್ಯುಲರಿಸಂ ರಾಜಕಾರಣದ ಶೈಲಿಯಾಯಿತು. ಆ ಹಿನ್ನೆಲೆಯಲ್ಲಿ ಮುಂಬರುವ 2024ರ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಇಂಡಿಯಾ ಮೈತ್ರಿಕೂಟ ರಚನೆಯಾಗಿದೆ.

ಹಾಜರಾಗಬೇಕೋ ಬೇಡವೋ ಎನ್ನುವುದೇ ಸಂದಿಗ್ಧತೆ!
2024ರ ಲೋಕಸಭೆ ಚುನಾವಣೆ ಸಮೀಪ ಇರುವಾಗಲೇ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ವಿರೋಧ ಪಕ್ಷಗಳಿಂದ ಆಹ್ವಾನ ಬಂದಿತ್ತು. ಇಡೀ ಹಿಂದೂ ಸಮುದಾಯವೇ ಕಾತರದಿಂದ ಕಾಯುತ್ತಿದ್ದ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದ ಆಮಂತ್ರಣ ಕೈಸೇರಿದಾಗ ಇಂಡಿಯಾ ಮೈತ್ರಿ ಪಕ್ಷಗಳು ಇಕ್ಕಟ್ಟಿಗೆ ಸಿಲುಕಿದವು. ಎಲ್ಲಾ ಪಕ್ಷಗಳು ಸೇರಿ ಒಗ್ಗಟ್ಟಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ಮೈತ್ರಿಯ ಹೆಸರಿನಲ್ಲೇ ಚುಕ್ಕಿಗಳನ್ನು ಇರಿಸಿಕೊಂಡಿರುವ  ಪ್ರತಿ ಪಕ್ಷಗಳು ಪ್ರತ್ಯೇಕವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸಂದಿಗ್ಧತೆಗೆ ಸಿಲುಕಿದ್ದವು. ಅಲ್ಪಸಂಖ್ಯಾತರ ಮತಗಳನ್ನು ಹೊರತುಪಡಿಸಿ, ಯಾವುದೇ ಧಾರ್ಮಿಕ ನಂಬಿಕೆಗಳಿಲ್ಲದ ಎಡಪಂಥೀಯರು ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಬಹಿರಂಗವಾಗಿ ಬಹಿಷ್ಕರಿಸಿದರು. ಕಾಂಗ್ರೆಸ್ ಏನು ಮಾಡಬೇಕೆಂದು ತೋಚದಂತಾಗಿತ್ತು. ಸಮಾರಂಭಕ್ಕೆ ಹೋದರೆ ತಮ್ಮ ಜಾತ್ಯಾತೀತತೆಗೆ ಧಕ್ಕೆ ಬರಬಹುದೆಂಬ ಭಯ ಅವರಲ್ಲಿತ್ತು.

ಕೇರಳ ಮುಸ್ಲೀ ಲೀಗ್‌ ನಾಯಕತ್ವವು ಕಾಂಗ್ರೆಸ್‌ಗೆ ಎಡಪಕ್ಷಗಳಂತೆ ಆಹ್ವಾನವನ್ನು ನಿರಾಕರಿಸುವ ಧೈರ್ಯವಿದೆಯೇ ಎಂದು ನೇರವಾಗಿ ಕೇಳಿತ್ತು. 2024ರ ಚುನಾವಣೆಯಲ್ಲಿ ಮುಸ್ಲಿಮರು ಹೆಚ್ಚಾಗಿರುವ ವಯನಾಡ್ ಕ್ಷೇತ್ರದಿಂದ ರಾಹುಲ್ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಇದರ ಹೊರತಾಗಿ ಉತ್ತರದ ರಾಜ್ಯಗಳಲ್ಲಿ ಬಿಜೆಪಿಯು ಹಿಂದೂಗಳಿಗೆ ಅನುಕೂಲಕರವಾದ ಪಕ್ಷವೆಂದು ಜನಪ್ರಿಯವಾಗಿ ಪರಿಗಣಿಸಲ್ಪಟ್ಟಿದ್ದರೂ, ಜನರು ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಪಕ್ಷವೆಂದು ಈವರೆಗೂ ಪರಿಗಣನೆ ಮಾಡಿಲ್ಲ. ಇಂದಿಗೂ ಕಾಂಗ್ರೆಸ್‌ನ ಬಹುತೇಕ ಮತದಾರರು ಹಿಂದೂಗಳೇ. ಅವರಲ್ಲಿ ಹೆಚ್ಚಿನವರು ರಾಮಮಂದಿರವನ್ನು ಬೆಂಬಲಿಸುತ್ತಾರೆ. ಪ್ರಾಣ ಪ್ರತಿಷ್ಠೆಯನ್ನು ನಿರ್ಲಕ್ಷಿಸುವ ಮೂಲಕ ಕಾಂಗ್ರೆಸ್, ಕಾಂಗ್ರೆಸ್ ಅನ್ನು "ಹಿಂದೂ ವಿರೋಧಿ ಪಕ್ಷ" ಎಂದು ಬಿಜೆಪಿ ಆರೋಪವನ್ನು ಒಪ್ಪಿದಂತೆ ಕಾಣುತ್ತಿದೆ. "ರಾಮಮಂದಿರ ಹಬ್ಬವನ್ನು ಬಿಟ್ಟುಬಿಡುವ" ಕಾಂಗ್ರೆಸ್‌ನ ನಿರ್ಧಾರದಿಂದ ರಾಮ ಜನ್ಮ ಭೂಮಿ ಆಂದೋಲನವನ್ನು ವಿರೋಧಿಸುವ ಅದರ ಇತಿಹಾಸವನ್ನು ಇಂಚಿಂಚೂ ಬಹಿರಂಗ ಮಾಡಲಾಯಿತು.

ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿರುವ ಸಮಾಜವಾದಿ ಪಕ್ಷವೂ ಇದಕ್ಕಿಂತ ದೊಡ್ಡ ಮುಜುಗರದ ಸನ್ನಿವೇಶದಲ್ಲಿತ್ತು. ಮುಲಾಯಂ ಸಿಂಗ್ ಯಾದವ್ ನೇತೃತ್ವದ ಪಕ್ಷ, ಶ್ರೀರಾಮನ ಮಂದಿರ ನಿರ್ಮಾಣವನ್ನು ಬಲವಾಗಿ ವಿರೋಧಿಸಿತ್ತು. ಇವರು ಅಧಿಕಾರದಲ್ಲಿದ್ದಾಗ 1990ರಲ್ಲಿ ರಾಮ ಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದಾಗ ಅಪಾರ ಸಂಖ್ಯೆಯ ಕರಸೇವಕರು ಸಾವನ್ನಪ್ಪಿದ್ದರು. ಹಿಂದೂ ಮತಗಳನ್ನು ಗಳಿಸುವ ಆಸೆಯಲ್ಲಿ ಮುಲಾಯಂ ಪುತ್ರ ಅಖಿಲೇಶ್ "ಬಿಜೆಪಿಯ ಹಿಂದುತ್ವವನ್ನು ಎದುರಿಸಲು ಮೃದು ಹಿಂದುತ್ವದ ಅಗತ್ಯವಿದೆ" ಎಂದು ಹೇಳಿದರು. ಒಂದೆಡೆ ಸಮಾರಂಭದಲ್ಲಿ ಪಾಲ್ಗೊಂಡರೆ ತಮ್ಮನ್ನು ಬೆಂಬಲಿಸಿದ್ದ ಮುಸ್ಲಿಂ ಮತಗಳು ತನಗೆ ಸಿಗುತ್ತವೆಯೇ ಎಂಬ ಅನುಮಾನದಲ್ಲಿ ಅಖಿಲೇಶ್ ಸಿಕ್ಕಿಬಿದ್ದಿದ್ದರು. ಇನ್ನೊಂದೆಡೆ, ಹಾಗೇನಾದರೂ ಅವರು ಭಾಗವಹಿಸಿದ್ದರೆ ಅವರ ಪಕ್ಷವನ್ನು ಹಿಂದೂ ವಿರೋಧಿ ಎಂದು ಬ್ರ್ಯಾಂಡ್‌ ಮಾಡಲಾಗುತ್ತಿತ್ತು.  ಒಟ್ಟಾರೆಯಾಗಿ ಮುಲಾಯಂ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಆಜ್ಞೆಯ ಮೇರೆಗೆ ರಾಮ ಮಂದಿರದ ಮೇಲಿನ ದಾಳಿಗಳು ಮತ್ತು ಕರಸೇವಕರ ಮೇಲೆ ಗುಂಡಿನ ದಾಳಿ ಮಾಡಲಾಗಿದ್ದು ಎಂದು ಬಿಜೆಪಿಗೆ ನೆನಪಿಸಿಕೊಳ್ಳಲು ಇದು ಅವಕಾಶವನ್ನು ಸೃಷ್ಟಿಸುವ ಅಪಾಯವಿತ್ತು.ಇದರಿಂದಾಗಿ ಅಖಿಲೇಶ್‌ ಯಾದವ್‌ ಯಾವುದೇ ಸದ್ದುಗದ್ದಲವಿಲ್ಲದೆ ಸಮಾರಂಭಕ್ಕೆ ಹಾಜರಾಗುವ ನಿರ್ಧಾರವನ್ನು ಬಿಟ್ಟಿದ್ದು ಮಾತ್ರವಲ್ಲದೆ, ನಂತರದ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. 

ರಾಮಮಂದಿರ ನಿರ್ಮಾಣಕ್ಕಾಗಿ ಕರೆ ನೀಡಿದ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರ ಯಾತ್ರೆಯನ್ನು ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ತಡೆದಿದ್ದರು. ಎಲ್.ಕೆ. ಅಡ್ವಾಣಿ ಅವರನ್ನು ಅಂದಿನ ಆರ್‌ಜೆಡಿ ಸರ್ಕಾರ ಬಂಧಿಸಿತ್ತು. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನ ಬಂದ ಮೇಲೆ ಅವರ ಪಕ್ಷಕ್ಕೆ ಸಮಾಜವಾದಿ ಪಕ್ಷಕ್ಕಿಂತ ದೊಡ್ಡ ಮಟ್ಟದ ಮುಜುಗರಕ್ಕೆ ಕಾರಣವಾಯಿತು.  ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಆಹ್ವಾನವನ್ನು ಕಡೆಗಣಿಸಿದ್ದರೂ, ಅವರ ಪತ್ನಿ ದುರ್ಗಾ ಸ್ಟಾಲಿನ್ ಶೀಘ್ರದಲ್ಲೇ ಅಯೋಧ್ಯೆಗೆ ಭೇಟಿ ನೀಡಲು ಕಾತರದಿಂದ ಕಾಯುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಹೀಗಾದರೆ ರಾಜಕೀಯ ಪರಿಣಾಮ ಏನಾಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.

ಕೊನೆಗೆ, ಭಗವಾನ್ ಶ್ರೀರಾಮ ತನ್ನ ಮಂದಿರ ಕಟ್ಟುವುದಕ್ಕೆ ವಿರೋಧಿಸಿದವರೆಲ್ಲರನ್ನು ಬಹಳ ಮುಜುಗರಕ್ಕೆ ಸಿಲುಕಿಸಿದ್ದಾನೆ. ಈ ಪಕ್ಷಗಳು ತೆಗೆದುಕೊಳ್ಳುವ ನಿರ್ಧಾರಗಳ ಪರಿಣಾಮಗಳು ಮುಂದಿನ ವಾರಗಳಲ್ಲಿ ತಿಳಿಯಲಿವೆ

ಓದುಗರ ಗಮನಕ್ಕೆ: ಈ ಲೇಖನ ಮೂಲತಃ ತುಘಲಕ್‌ ತಮಿಳು ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದನ್ನು ತುಗ್ಲಕ್ ಡಿಜಿಟಲ್ www.gurumurthy.net ಗಾಗಿ ಇಂಗ್ಲಿಷ್‌ನಲ್ಲಿ ಅನುವಾದ ಮಾಡಲಾಗಿದ್ದು, ಇದನ್ನು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನಲ್ಲಿ ಮರಳಿ ಪೋಸ್ಟ್‌ ಮಾಡಲಾಗಿದೆ,

Latest Videos
Follow Us:
Download App:
  • android
  • ios