ಚೆನ್ನೈ, (ನ.21):  ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿಯಾಗಿರುವ ಸಿಟಿ ರವಿ ಅವರಿಗೆ ತಮಿಳುನಾಡು ಉಸ್ತುವಾರಿ ವಹಿಸಲಾಗಿದೆ. ಇದರಿಂದ ಅಖಾಡಕ್ಕಿಳಿದ ಸಿ.ಟಿ,ರವಿ ತಮಿಳುನಾಡಿಲ್ಲೂ ಭರ್ಜರಿ ಆಪರೇಷನ್ ಕಮಲ ನಡೆಸಿದ್ದಾರೆ.

ಹೌದು...ಡಿಎಂಕೆ (ದ್ರಾವಿಡ ಮುನ್ನೇತ್ರಾ ಕಳಗಂ)ಪಕ್ಷದಿಂದ ಅಮಾನತುಗೊಂಡಿದ್ದ ಕೆಪಿ ರಾಮಲಿಂಗಂ ಶನಿವಾರ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್ ಅವರ ಸಮ್ಮುಖದಲ್ಲಿ ಕೆಪಿ ರಾಮಲಿಂಗಂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಿಟಿ ರವಿಗೆ 3 ರಾಜ್ಯಗಳ ಉಸ್ತುವಾರಿ; ಇಕ್ಕಟ್ಟಿಗೆ ಸಿಲುಕಿಸಿದೆ ಹೊಸ ಜವಾಬ್ದಾರಿ

ಕೋವಿಡ್ 19 ಸೋಂಕಿನ ವಿಚಾರದಲ್ಲಿ ಎಂಕೆ ಸ್ಟಾಲಿನ್ ಅವರ ಪ್ರಸ್ತಾಪದ ವಿರುದ್ಧ ಮಾತನಾಡಿದ ಕೆಪಿ ರಾಮಲಿಂಗಂ ಅವರನ್ನು ಡಿಎಂಕೆ ನಾಯಕ ಎಂಕೆ ಸ್ಟಾಲಿನ್, ಶಿಸ್ತುಕ್ರಮದ ಹಿನ್ನೆಲೆಯಲ್ಲಿ ರಾಮಲಿಂಗಂ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದರು.

ಡಿಎಂಕೆ ವಿರುದ್ಧ ಮುನಿಸಿಕೊಂಡಿರುವ ರಾಮಲಿಂಗಂ ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಅವರು, ಎಂಕೆ ಸ್ಟಾಲಿನ್ ಸಹೋದರ ಎಂಕೆ ಅಳಗಿರಿಯನ್ನು ಕೂಡಾ ಬಿಜೆಪಿಗೆ ಕರೆತರಲು ಪ್ರಯತ್ನಿಸುವುದಾಗಿ ಹೇಳಿದರು.