ಮಹಾ, ಹರ್ಯಾಣದಲ್ಲಿ ಬಿಜೆಪಿ ಜಯಭೇರಿ: ಮತ್ತೊಂದು ಸಮೀಕ್ಷೆ| ಎಬಿಪಿ ನ್ಯೂಸ್ ಸಮೀಕ್ಷೆಯಲ್ಲಿ ಕೇಸರಿ ಪಕ್ಷಕ್ಕೆ ಭರ್ಜರಿ ಜಯ

ನವದೆಹಲಿ[ಅ.19]: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳು ಭರ್ಜರಿ ಜಯಗಳಿಸಲಿವೆ ಎಂದು ಮತ್ತೊಂದು ಮತದಾನಪೂರ್ವ ಸಮೀಕ್ಷೆ ಶುಕ್ರವಾರ ಭವಿಷ್ಯ ನುಡಿದಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ+ಶಿವಸೇನೆ ಮೈತ್ರಿಕೂಟ 194 ಸ್ಥಾನ ಗಳಿಸಲಿದ್ದರೆ, ಹರ್ಯಾಣದಲ್ಲಿ 83 ಸ್ಥಾನ ಗಳಿಸಿ ಬಿಜೆಪಿ ಹಾಗೂ ಮಿತ್ರರು ಭರ್ಜರಿ ಜಯ ಕಾಣಲಿದ್ದಾರೆ ಎಂದು ‘ಎಬಿಪಿ ನ್ಯೂಸ್’ ಹಿಂದಿ ಸುದ್ದಿವಾಹಿನಿ ಸಮೀಕ್ಷೆ ಹೇಳಿದೆ.

ಮಹಾರಾಷ್ಟ್ರ ಒಟ್ಟು ಸ್ಥಾನ 288, ಬಹುಮತಕ್ಕೆ 145

ಪಕ್ಷ20192014+/-
ಬಿಜೆಪಿ194185
ಕಾಂಗ್ರೆಸ್+8683
ಇತರರು820

ಹರ್ಯಾಣ ಒಟ್ಟು ಸ್ಥಾನ 90, ಬಹುಮತಕ್ಕೆ 46

ಪಕ್ಷ20192014+/-
ಬಿಜೆಪಿ+8347
ಕಾಂಗ್ರೆಸ್315
ಇತರರು428