ರಾಜೀನಾಮೆ ನೀಡಿ ಬೆಂಗ್ಳೂರಿಗೆ ಬಂದ ಸದಾನಂದಗೌಡ, ಮುಂದಿನ ಸಿಎಂ ಎಂದು ಘೋಷಣೆ
* ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸದಾನಂದಗೌಡ ಬೆಂಗಳೂರಿಗೆ ವಾಪಸ್
* ಬೆಂಗಳೂರಿನ ಸಂಜಯ್ ನಗರದ ನಿವಾಸಕ್ಕೆ ಆಗಮನ
* ಮುಂದಿನ ಸಿಎಂ ಸದನಂದಗೌಡ್ರು ಎಂದು ಘೋಷಣೆ
ಬೆಂಗಳೂರು, (ಜುಲೈ.09): ಸಂಸದ ಡಿ.ವಿ. ಸದಾನಂದಗೌಡ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಂಪುಟ ವಿಸ್ತರಣೆ ನಂತರ ದೆಹಲಿಯಿಂದ ಇಂದು (ಶುಕ್ರವಾರ) ಬೆಂಗಳೂರಿಗೆ ಆಗಮಿಸಿದ ಅವರು, ಬೆಂಗಳೂರಿನ ಸಂಜಯ್ ನಗರದ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಅಭಿಮಾನಿಗಳು ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ಪ್ರಸಂಗ ನಡೆಯಿತು.
ಬಿಎಸ್‌ವೈ ಪಾಲಿಗೆ ವರವಾದ ಕೇಂದ್ರದ ಹೊಸ ಕ್ಯಾಬಿನೆಟ್: ಮೋದಿ ಟೀಂ ರಹಸ್ಯ!
ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಬಗ್ಗೆ ಅಂತರ್ ಯುದ್ಧವೇ ನಡೆಯುತ್ತಿದ್ದು, ಮನೆಯೊಂದು ಮೂರು ಬಾಗಿಲಾಗಿದೆ. ಮತ್ತೊಂದೆಡೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಎದ್ದಿದೆ. ಇದರ ಮಧ್ಯೆ ಸದಾನಂದಗೌಡ ಮುಂದಿನ ಸಿಎಂ ಘೋಷಣೆ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ರಾಜಕಾರಣಕ್ಕೆ ಸಕ್ರಿಯಾಗೊಳಿಸಲು ಹೈಕಮಾಂಡ್ ಸದಾನಂದಗೌಡರ ರಾಜೀನಾಮೆ ಪಡೆದುಕೊಂಡಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಇದೀಗ ಸದಾನಂದಗೌಡ ಅಭಿಮಾನಿಗಳ ಮುಂದಿನ ಸಿಎಂ ಘೋಷಣೆ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಮಾತನಾಡಿದ ಸದಾನಂದಗೌಡ ಅವರು, ಪಕ್ಷದ ಅಧ್ಯಕ್ಷರ ಸೂಚನೆಯ ಮೇರೆಗೆ ರಾಜೀನಾಮೆ ನೀಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಸಂತೋಷದಿಂದ ಇದ್ದೇನೆ. ಅಧಿಕಾರ ಇದ್ದಾಗ ಮತ್ತು ಇಲ್ಲದಿದ್ದಾಗ ಜನ ನನ್ನೊಂದಿಗೆ ಇದ್ದಾರೆ. ಜನರ ಪ್ರೀತಿಗೆ ನಾನು ಚಿರಋಣಿ ಎಂದು ಹೇಳಿದ್ದಾರೆ.
ರಾಜ್ಯ ರಾಜಕಾರಣದ ಬಗ್ಗೆ ಈಗಲೇ ಏನೂ ಹೇಳಲಾಗುವುದಿಲ್ಲ. ಪಕ್ಷ ನೀಡುವ ಜವಾಬ್ದಾರಿ ಮತ್ತು ಸೂಚನೆಯ ಮೇರೆಗೆ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.