Asianet Suvarna News Asianet Suvarna News

ಗಂಗಾವತಿ: ಕೆಆರ್‌ಪಿಪಿ ಸೇರಿ ಬಿಜೆಪಿಗೆ ಮರಳಿದ ಸುಚೇತಾ, ಜನಾರ್ದನ ರೆಡ್ಡಿಗೆ ಮುಜುಗರ..!

ಗೊಂದಲ ಮೂಡಿಸಿದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯೆ ಸುಚೇತಾ ಶಿರಿಗೇರಿ ನಡೆ, ನಗರಸಭೆಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ತೆರೆಮರೆ ಕಸರತ್ತು ನಡೆಸುತ್ತಿರುವ ಶಾಸಕ ಜನಾರ್ದನ ರೆಡ್ಡಿ 

Sucheta Shirigeri Joined KRPP and Returned to BJP at Gangavathi in Koppal grg
Author
First Published Jun 27, 2023, 10:21 AM IST | Last Updated Jun 27, 2023, 10:21 AM IST

ಗಂಗಾವತಿ(ಜೂ.27):  ನಗರದ 30ನೇ ವಾರ್ಡ್‌ನ ನಗರಸಭೆ ಬಿಜೆಪಿ ಸದಸ್ಯೆ ಸುಚೇತಾ ಕಾಶೀನಾಥ ಶಿರಿಗೇರಿ ಕೆಆರ್‌ಪಿಪಿ ಸೇರ್ಪಡೆಯಾದ ಕೆಲಹೊತ್ತಲ್ಲೇ ಬಿಜೆಪಿಗೆ ಮರಳಿದ್ದಾರೆ! ಸುಚೇತಾ ಶಿರಿಗೇರಿ ಅವರ ನಿವಾಸಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಕೆಆರ್‌ಪಿಪಿ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವಿಷಯ ತಿಳಿದು, ಕೆಲಹೊತ್ತಲ್ಲೇ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಬಿಜೆಪಿ ಶಾಲು ಹೊದೆಸಿ, ಪಕ್ಷ ಬಿಡದಂತೆ ಮನವಿ ಮಾಡಿದರು. ಮುನವಳ್ಳಿ ಜತೆ ಬಿಜೆಪಿ ಕಾರ್ಯಕರ್ತರು ಇದ್ದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಗರಸಭೆಯ ಮೂವರು ಬಿಜೆಪಿ, ಒಬ್ಬ ಪಕ್ಷೇತರ, ಕೆಲವು ಕಾಂಗ್ರೆಸ್‌ ಸದಸ್ಯರು ಕೆಆರ್‌ಪಿಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ನಗರಸಭೆಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಶಾಸಕ ಜನಾರ್ದನ ರೆಡ್ಡಿ ತೆರೆಮರೆ ಕಸರತ್ತು ನಡೆಸಿದ್ದಾರೆ. ಈಗ ಮತ್ತಷ್ಟು ಬಿಜೆಪಿ ಸದಸ್ಯರ ಮೇಲೆ ಕಣ್ಣಿಟ್ಟಿದ್ದು, ಸುಚೇತಾ ಶಿರಿಗೇರಿ ಅವರ ಮನೆಗೆ ಭೇಟಿ ನೀಡಿ ಕೆಆರ್‌ಪಿಪಿ ಶಾಲು ಹಾಕಿ ಸೇರ್ಪಡೆ ಮಾಡಿಕೊಂಡರು.

ಬಸ್‌ ನಿಲ್ಲಿಸದ ಚಾಲಕ: ತಲೆ ಕೆಟ್ಟು ಬಸ್‌ಗೆ ಕೊಪ್ಪಳದ ಮಹಿಳೆಯಿಂದ ಕಲ್ಲೇಟು!

ಮಾಜಿ ಶಾಸಕ ದಿಢೀರ್‌ ಭೇಟಿ:

ಸುಚೇತಾ ಶಿರಿಗೇರಿ ನಿವಾಸಕ್ಕೆ ಶಾಸಕ ಜನಾರ್ದನ ರೆಡ್ಡಿ ಭೇಟಿ ನೀಡಿದ ಕೆಲವೆ ಗಂಟೆಗಳಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿದರು. ಪಕ್ಷ ಬಿಟ್ಟು ಹೋಗದಂತೆ ಮನವರಿಕೆ ಮಾಡಿದರು. ಬಿಜೆಪಿಯಿಂದ ಜಯ ಸಾಧಿಸಿದ್ದು, ಬರುವ ದಿನಗಳಲ್ಲಿ ಉತ್ತಮ ಅವಕಾಶ ದೊರೆಯಲಿದೆ. ಪಕ್ಷ ಬಿಟ್ಟು ಹೋಗದಂತೆ ತಿಳಿವಳಿಕೆ ಹೇಳಿದರು. ಬಳಿಕ ಬಿಜೆಪಿ ಶಾಲು ಹಾಕಿದರು.

ಕೊಪ್ಪಳ: ಕೈಕೊಟ್ಟಮಳೆ, ನಗರಗಳತ್ತ ಗುಳೆ ಹೊರಟ ರೈತರು!

ನಮ್ಮ 30ನೇ ವಾರ್ಡಿನ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕರು ಕೆಆರ್‌ಪಿಪಿ ಶಾಲು ಹಾಕಿದರು. ಆದರೆ ನಾನು ಬಿಜೆಪಿಯಿಂದ ಚುನಾಯಿತನಾಗಿದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ ಅಂತ ಬಿಜೆಪಿ ನಗರಸಭೆ ಸದಸ್ಯೆ ಸುಚೇತಾ ಶಿರಿಗೇರಿ ತಿಳಿಸಿದ್ದಾರೆ. 

ನಮ್ಮ ಪಕ್ಷದ ತತ್ವ-ಸಿದ್ಧಾಂತಗಳನ್ನು ಮೆಚ್ಚಿ ಸುಚೇತಾ ಶಿರಿಗೇರಿ ಅವರು ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಚೇತಾ ಶಿರಿಗೇರಿ ಅವರಿಗೆ ಪಕ್ಷದ ಶಾಲು ಹಾಕಿ ಬರ ಮಾಡಿಕೊಳ್ಳಲಾಯಿತು ಅಂತ ಶಾಸಕರು ಗಂಗಾವತಿ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios