ರಾಜ್ಯ ಬಿಜೆಪಿ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ಧ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ‘ವಿದ್ಯಾರ್ಥಿ ಧ್ವನಿ’ ಕಾರ್ಯಕ್ರಮಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್(ಎನ್‌ಎಸ್‌ಯುಐ) ಚಾಲನೆ ನೀಡಿದೆ.
ಬೆಂಗಳೂರು (ಫೆ.15) : ರಾಜ್ಯ ಬಿಜೆಪಿ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ಧ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ‘ವಿದ್ಯಾರ್ಥಿ ಧ್ವನಿ(Vidyarthi Dhwani)’ ಕಾರ್ಯಕ್ರಮಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್(ಎನ್‌ಎಸ್‌ಯುಐ) ಚಾಲನೆ ನೀಡಿದೆ.
ಮಂಗಳವಾರ ನಗರದ ಶಿರೂರು ಪಾರ್ಕ್ನಲ್ಲಿ ನಡೆದ ಎನ್‌ಎಸ್‌ಯುಐ(NSUI) ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ಕೊಡದೆ ವಂಚಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಕರ್ನಾಟಕದಲ್ಲಿ ಗೆದ್ದೇ ಗೆಲ್ತೀವಿ ಎಂದ ಅಮಿತ್ ಶಾ, ಜೆಡಿಎಸ್‌ಗೂ ನೀಡಿದ್ರು ಸಂದೇಶ!
ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡದೆ ಬಿಜೆಪಿ ಸರ್ಕಾರ(BJP Govt) ಅನ್ಯಾಯ ಮಾಡಿದೆ. 2022-23ನೇ ಸಾಲಿನ ಶೈಕ್ಷಣಿಕ ಮುಗಿಯುತ್ತಾ ಬಂದಿದ್ದರೂ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕ ನೀಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಜೊತೆಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಹಾಲು, ಮೊಟ್ಟೆಕೊಡದ ವಂಚಿಸಿರುವುದು ಅಕ್ಷಮ್ಯ.
ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟಬೇಕಾದ ಸರ್ಕಾರವೇ ಮಕ್ಕಳಿಗೆ ನ್ಯಾಯಯುವಾಗಿ ಸಿಗಬೇಕಾದ ಸವಲತ್ತುಗಳಿಂದ ವಚಿತರನ್ನಾಗಿ ಮಾಡಿರುವ ಕ್ರಮವನ್ನು ಖಂಡಿಸಲಾಯಿತು. ಈ ಬಗ್ಗೆ ರಾಜ್ಯವ್ಯಾಪಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸುವ ನಿರ್ಣಯವನ್ನು ಎನ್‌ಐಯುಐ ಕೈಗೊಂಡಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಐ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
'ಪ್ರತಿಪಕ್ಷದ ಬಳಿ ಸಾಕ್ಷ್ಯಗಳಿದ್ದರೆ, ಕೋರ್ಟ್‌ಗೆ ಹೋಗಲಿ..' ಅದಾನಿ ಗ್ರೂಪ್ ವಿಚಾರದಲ್ಲಿ ಅಮಿತ್ ಶಾ ತಿರುಗೇಟು!
