ಮಲಪ್ಪುರಂ(ನ.21): ಸ್ಥಳೀಯ ಚುನಾವಣೆ ಸಮೀಪದಲ್ಲಿದ್ದು, ಅಭ್ಯರ್ಥಿಗಳು ಮತ ಸೆಳೆಯೋಕೆ ಏನೇನೋ ಐಡಿಯಾ ಪ್ರಯೋಗಿಸುತ್ತಿದ್ದಾರೆ. ಇದೀಗ ಮತಗಳನ್ನು ಪಡೆಯೋಕೆ ಯುಡಿಎಫ್ ಅಭ್ಯರ್ಥಿಯೊಬ್ಬರು ಮಾಡಿರೋ ಪ್ಲಾನ್ ಎಲ್ಲರ ಗಮನ ಸೆಳೆದಿದೆ.

ಅಲಾತ್ತೂರ್‌ಪಾಡಿ ಅಂಡಿಕ್ಕಾಡ್ ಶಿಹಾಬ್ ಮಲಪ್ಪುರಂ ಮನ್ಸಿಪಾಲಿಟಿಯ 3ನೇ ವಾರ್ಡ್‌ನಿಂದ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರು ಪ್ರಚಾರ ನಡೆಸೋ ಸಂದರ್ಬ ಸ್ಟಿಲ್ಟ್ ವಾಕ್ ಮಾಡಿ ಗಮನ ಸೆಳೆದಿದ್ದಾರೆ. 3.5ಮಿ ಎತ್ತರದ ಸ್ಟಿಲ್ಟ್ ಬಳಸಿಕೊಳ್ಳಲಾಗಿದೆ.

BJPಯಿಂದ ಇಬ್ಬರು ಮುಸ್ಲಿಂ ಮಹಿಳೆಯರು ಸ್ಪರ್ಧೆ..! ಮೋದಿಯ ಅಪ್ಪಟ ಫ್ಯಾನ್ಸ್ ಇವ್ರು

ಅಭ್ಯರ್ಥಿ ಎತ್ತರದಲ್ಲಿ ನಿಂತು ಚುನಾವಣೆ ಪ್ರಚಾರ ಮಾಡೋದ್ರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳೋ ಕೆಲಸ ಇಲ್ಲ ಅಂತಿದ್ದಾರೆ ಮತದಾರ ಪ್ರಭುಗಳು. ಅಭ್ಯರ್ಥಿ ಶಿಹಾಬ್ ಈ ಮೆಥಡ್ ಯೂಸ್ ಮಾಡಿದ್ದು ಬರೀ ಚುನಾವಣಾ ಪ್ರಚಾರಕ್ಕೆ ಮಾತ್ರವಲ್ಲ.

ಮೇಲ್ಮುರಿ ಎಪಿಎಂ ಕಲರಿ ಸಂಗಂನಲ್ಲಿ ಈ ವಿದ್ಯೆ ಕಲಿತಿದ್ದಾರೆ ಇವರು. 2015ರಲ್ಲಿ ಭಾರತದ ಬುಕ್ ಆಫ್ ರೆಕಾರ್ಡ್‌ನಲ್ಲಿಯೂ ಇವರ ಹೆಸರು ಸೇರಿದೆ. ತಿರುವನಾಯ ಮಾಮಾಂಗಂನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಇದೇ ಸ್ಟಿಲ್ಟ್ ವಾಕ್ ಮೂಲಕ 2.45 ಗಂಟೆಯಲ್ಲಿ 3.5 ಕಿಮಿ ಕ್ರಮಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದರು.